ಪಟ್ಟಣದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಭಾನುವಾರ ವಿಶೇಷ ಕಾರ್ಯಗಾರ ಮತ್ತು ಪ್ರತಿಭಾನ್ವೇಷಣಾ ಪರೀಕ್ಷೆ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಭಾನುವಾರ ವಿಶೇಷ ಕಾರ್ಯಗಾರ ಮತ್ತು ಪ್ರತಿಭಾನ್ವೇಷಣಾ ಪರೀಕ್ಷೆ ಆಯೋಜಿಸಲಾಯಿತು.

ಮಾನಸ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿ ವಿಜೇತರಾದ ವಾಸವಿ ವಿದ್ಯಾಸಂಸ್ಥೆಯ ರಿಷಿತಾಗೆ 10 ಸಾವಿರ ನಗದು ಬಹುಮಾನ, ದ್ವೀತಿಯ ವಿಸ್ಡಂ ಶಾಲೆಯ ನಿಧಿಶ್ರೀಗೆ 5 ಸಾವಿರ, ಸರ್ಕಾರಿ ಆದರ್ಶ ವಿದ್ಯಾಲಯದ ನಿಹಾರಿಕಾಗೆ ತೃತೀಯ ಬಹುಮಾನವಾಗಿ 3 ಸಾವಿರ ನಗದು ವಿತರಿಸಲಾಯಿತು.

ಪರೀಕ್ಷೆಯಲ್ಲಿ ಉತ್ತಮ ರೀತಿ ಪಾಲ್ಗೊಂಡು ಸಮಾಧಾನಕರ ಬಹುಮಾನಗಳಿಸಿದ ಸಿಂಚನ ಸತೀಶ್ (ವಾಸವಿ ), ಸಂಜೀವಿನಿ (ನಿಸರ್ಗ ವಿದ್ಯಾನಿಕೇತನ), ಗಣೇಶ್ ಭವನ್ಸ್ ಗೀತಾ, ಪ್ರವೀಣ್ (ಯಳಂದೂರು ಎಸ್ ಡಿ ವಿ ಎಸ್ ) ಹಾಗೂ ಪ್ರಿಯಾಂಕ (ಆದರ್ಶ ವಿದ್ಯಾಲಯ)ಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಮಾನಸ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್ ಮಾತನಾಡಿ, ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾನ್ವೇಷಣೆ ಪರೀಕ್ಷೆ ಮೊದಲ ಪ್ರಯತ್ನ, 450ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಪಾಲ್ಗೊಂಡಿರುವುದು ಸಂತಸ ತಂದಿದೆ.

ಯಾವ ವಿದ್ಯಾರ್ಥಿಗಳು ನನ್ನಿಂದ ಸಾಧನೆ ಸಾಧ್ಯವಿಲ್ಲ ಎಂದು ಹೇಳಬಾರದು, ಸಾಧಿಸುವ ಕನಸು, ಗುರಿ, ಛಲ ಹೊಂದುವ ಮೂಲಕ ಜೀವನದಲ್ಲಿ ಯಶಸ್ಸು ಕಾಣುವಂತವರಾಗಿ, ಪ್ರತಿಭಾನ್ವೇಷಣೆ ಪರೀಕ್ಷೆ ನಿಮ್ಮ ಮುಂದಿನ ಪರೀಕ್ಷೆ ಯಶಸ್ಸಿಗೆ ದಿಕ್ಸೂಚಿಯಾಗಲಿದೆ ಎಂದರು.

ಮೈಸೂರು ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಸಣ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ತಪ್ಪದೆ ಎಲ್ಲಾ ತರಗತಿಗಳಿಗೆ ಹಾಜರಾಗಬೇಕು. ಪಠ್ಯಕ್ರಮವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು, ವೇಳಾಪಟ್ಟಿಯನ್ನು ಹಾಕಿಕೊಳ್ಳುವ ಮೂಲಕ ಅಧ್ಯಯನ ಮಾಡಬೇಕು, ವಿಷಯವನ್ನು ಪುನರಾವರ್ತನೆ ಮಾಡುವ ಬದಲು ಪ್ರತಿ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಪರಾಮರ್ಶಿಸುವುದನ್ನ ರೂಡಿಸಿಕೊಳ್ಳಬೇಕು, ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳ ನೀವೆಲ್ಲರೂ ಪೈಪೋಟಿಗೆ ಸಜ್ಜಾಗಬೇಕು, ಮಾನಸ ಶಿಕ್ಷಣ ಸಂಸ್ಥೆ ಆಯೋಜಿಸಿರುವ ಪ್ರತಿಭಾನ್ವೇಷಣೆ ಪರೀಕ್ಷೆ ವಿದ್ಯಾರ್ಥಿಗಳ ಕಲಿಕಾ ಹಂತ ಉತ್ತಮ ಹೆಚ್ಚು ಅಂಕಗಳಿಸಲು ಪ್ರೋತ್ಸಾಹಿಸುವ ಒಂದು ಉತ್ತಮ ವೇದಿಕೆಯಾಗಿದೆ ಎಂದರು.

ಡಾ. ಎಸ್ ಶಿವರಾಜಪ್ಪ, ಮಾನಸ ಸಂಸ್ಥೆಯ ಅಧ್ಯಕ್ಷ ಎಸ್ ನಾಗರಾಜು, ವಿಶೇಷಾಧಿಕಾರಿಗಳಾದ ಡಾ. ಆರ್. ನಾಗಭೂಷಣ್, ಎ.ಪಿ. ದಿನೇಶ್‌ಕುಮಾರ್, ಸಂಯೋಜನಾಧಿಕಾರಿ ಡಾ. ಎಂ. ಚನ್ನಶೆಟ್ಟಿ., ಪ್ರಾಂಶುಪಾಲರಾದ ಡಿ ಕೃಷ್ಣೇಗೌಡ, ಶಂಕರ್, ಪತ್ರಿಕಾ ವಕ್ತಾರ ಬಾಬು ಇನ್ನಿತರಿದ್ದರು.