ಬಾಳೆಹೊನ್ನೂರುಅಜ್ಜಂಪುರ ತಾಲೂಕಿನ ಬುಕ್ಕಾಂಬುದಿ ಬೆಟ್ಟದಲ್ಲಿ ಪರಮ ತಪಸ್ವಿ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರು ತಪಗೈದ ಬೆಟ್ಟದ ಗವಿಯಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಜ.3ರಿಂದ 7ರವರೆಗೆ ಮೌನ ತಪೋನು ಷ್ಠಾನ ಕೈಗೊಳ್ಳಲಿದ್ದಾರೆ ಎಂದು ಶ್ರೀಮದ್ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಟ್ರಸ್ಟಿನ ಉಪಾಧ್ಯಕ್ಷ ಎಸ್.ಎಂ.ವೀರಭದ್ರಪ್ಪ ಮತ್ತು ಕಾರ್ಯದರ್ಶಿ ಎಚ್.ಪಿ.ಸುರೇಶ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲಿಂಗೈಕ್ಯ ಶ್ರೀಮದ್ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ 90ನೇ ಪುಣ್ಯ ಸ್ಮರಣೋತ್ಸವ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಅಜ್ಜಂಪುರ ತಾಲೂಕಿನ ಬುಕ್ಕಾಂಬುದಿ ಬೆಟ್ಟದಲ್ಲಿ ಪರಮ ತಪಸ್ವಿ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರು ತಪಗೈದ ಬೆಟ್ಟದ ಗವಿಯಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಜ.3ರಿಂದ 7ರವರೆಗೆ ಮೌನ ತಪೋನು ಷ್ಠಾನ ಕೈಗೊಳ್ಳಲಿದ್ದಾರೆ ಎಂದು ಶ್ರೀಮದ್ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಟ್ರಸ್ಟಿನ ಉಪಾಧ್ಯಕ್ಷ ಎಸ್.ಎಂ.ವೀರಭದ್ರಪ್ಪ ಮತ್ತು ಕಾರ್ಯದರ್ಶಿ ಎಚ್.ಪಿ.ಸುರೇಶ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಲಿಂಗೈಕ್ಯ ಶ್ರೀಮದ್ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ 90ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು 5 ದಿನಗಳ ಕಾಲ ಬೆಟ್ಟದ ಗವಿಯಲ್ಲಿ ಜಪ, ತಪ, ಧ್ಯಾನ, ಮೌನ ಅನುಷ್ಠಾನ ಕೈಗೊಳ್ಳಲಿದ್ದು ಪ್ರಾತಃ ಕಾಲ 4.30ರಿಂದ 6 ಗಂಟೆವರೆಗೆ ಯಾವುದೇ ಭಕ್ತಾದಿಗಳಿಗೆ ಪ್ರವೇಶಾವಕಾಶವಿಲ್ಲ. ಬೆಳಿಗ್ಗೆ 9.30ರಿಂದ ಬಂದ ಎಲ್ಲ ಭಕ್ತರಿಗೆ ಇಷ್ಟಲಿಂಗ ಅಭಿಷೇಕ ಮಹಾಪೂಜೆ ಅಷ್ಟೋತ್ತರ, ಪಾದ ಪೂಜೆಯಲ್ಲಿ ಪಾಲ್ಗೊಳ್ಳಲಿಕ್ಕೆ ಅವಕಾಶವಿದೆ. ಜ.3-5ರವರೆಗೆ ಪ್ರತಿ ದಿನ ಸಂಜೆ ಬುಕ್ಕಾಂಬುಧಿ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಮಂಗಳ ಸಾನ್ನಿಧ್ಯದಲ್ಲಿ ಧರ್ಮ ಸಮಾರಂಭ ನಡೆಯಲಿದೆ.ಜ.6ರಂದು ಸಂಜೆ ದೇವಸ್ಥಾನದಿಂದ ಬೆಟ್ಟದವರೆಗೆ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರು ಭಾವಚಿತ್ರ ರಜತ ಮಂಗಲ ಮೂರ್ತಿ ಉತ್ಸವ ನಡೆಯಲಿದೆ. ಇದರಲ್ಲಿ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ ಮತ್ತು ಶ್ರೀ ಕಾಶಿ ಜಗದ್ಗುರು ಜನ ಜಾಗೃತಿ, ಧರ್ಮ ಸಂಸ್ಕೃತಿ ಸಂವರ್ಧನೆಗೆ ಪಾದಯಾತ್ರೆಯೊಂದಿಗೆ ತಪೋಗಿರಿಗೆ ಆಗಮಿಸುವರು.ಜ.7ರಂದು ಲಿಂ. ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳ 90ನೇ ವರ್ಷದ ಲಿಂಗಾಂಗ ಸಾಮರಸ್ಯದ ಪುಣ್ಯ ಸ್ಮರಣೋತ್ಸವದ ದಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು 70ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ.7ರಂದು ಬೆಳಿಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ಡಾ.ವೀರಸೋಮೇಶ್ವರ ಶ್ರೀ ಮತ್ತು ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರು ಸಾನ್ನಿಧ್ಯ ವಹಿಸಲಿದ್ದು ಶ್ರೀ ಕಾಶಿ ಡಾ.ಚಂದ್ರಶೇಖರ ಜಗದ್ಗುರು ಸಮಾರಂಭ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಸಿಂದಗಿ ಸಾರಂಗ ಗಚ್ಚಿನ ಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿ ರಂಭಾಪುರಿ ಬೆಳಗು ವಿಶೇಷ ಸಂಚಿಕೆ ಬಿಡುಗಡೆ ಮಾಡುವರು. ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿ, ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿ ಹಾಗೂ ಹುಲಿಕೆರೆ ದೊಡ್ಡಮಠದ ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.--ಬಾಕ್ಸ್--

ಪೌರ್ಣಿಮೆ ದರ್ಶನ ಇಲ್ಲ

ಪ್ರತಿ ಪೌರ್ಣಿಮೆ ಹುಣ್ಣಿಮೆ ದಿನ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜಗದ್ಗುರು ವಾಸ್ತವ್ಯವಿದ್ದು ಭಕ್ತರಿಗೆ ದರ್ಶನ ಆಶೀರ್ವಾದ ನೀಡುತ್ತಿದ್ದರು. ಆದರೆ ಜ.3ರಿಂದ 7ರವರೆಗೆ ಬುಕ್ಕಾಂಬುದಿ ಬೆಟ್ಟದಲ್ಲಿ ಪೂಜಾ ಅನುಷ್ಠಾನದಲ್ಲಿ ಇರುವುದರಿಂದ ಜ.3ರಂದು ಪೌರ್ಣಿಮೆ ದಿನ ಶ್ರೀ ರಂಭಾಪುರಿ ಪೀಠದಲ್ಲಿ ಜಗದ್ಗುರುಗಳ ದರ್ಶನ, ವಾಸ್ತವ್ಯ ಇರುವುದಿಲ್ಲ ಎಂದು ಶ್ರೀ ಪೀಠದ ಪ್ರಕಟಣೆ ತಿಳಿಸಿದೆ.೦೧ಬಿಹೆಚ್‌ಆರ್ ೨: ರಂಭಾಪುರಿ ಶ್ರೀ