ರಂಭಾಪುರಿ ಯುಗಮಾನೋತ್ಸವಕ್ಕೆ ಇಂದು ಚಾಲನೆ

| Published : Mar 20 2024, 01:21 AM IST

ಸಾರಾಂಶ

ಬಾಳೆಹೊನ್ನೂರು ಜಗದ್ಗುರು ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭಕ್ಕೆ ಮಾ.20ರ ಬುಧವಾರ ವಿಧ್ಯುಕ್ತ ಚಾಲನೆ ದೊರೆಯಲಿದೆ.

ಧ್ವಜಾರೋಹಣ, ಹರಿದ್ರಾಲೇಪನ । ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ । ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಇಲ್ಲಿನ ಜಗದ್ಗುರು ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭಕ್ಕೆ ಮಾ.20ರ ಬುಧವಾರ ವಿಧ್ಯುಕ್ತ ಚಾಲನೆ ದೊರೆಯಲಿದೆ.

ಬೆಳಗ್ಗೆ ಧ್ವಜಾರೋಹಣ, ಹರಿದ್ರಾಲೇಪನದ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಬೆಳಗ್ಗೆ 11ಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ಮಸಾಪ) ವತಿಯಿಂದ ನರಸಿಂಹರಾಜಪುರ ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್. ಅಶೋಕ್ ಸಮ್ಮೇಳನ ಉದ್ಘಾಟಿಸಲಿದ್ದು, ನಿರ್ಮಲಾ ಕಾನ್ವೆಂಟ್ ವಿದ್ಯಾರ್ಥಿನಿ ಬಿ.ಎ. ವರ್ಷಿಣಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಸಮ್ಮೇಳನದ ಸಹ ಅಧ್ಯಕ್ಷ ಎಫ್.ಎ.ಮನೋಜ್, ಮಸಾಪ ಕಾರ್ಯಾಧ್ಯಕ್ಷ ಮಹದೇವ, ಕಾರ್ಯದರ್ಶಿ ಎಚ್.ವಿ. ಸಿದ್ದೇಶ್, ಜಿಲ್ಲಾಧ್ಯಕ್ಷ ಮಲ್ಲಿಗೆ ಸುಧೀರ್, ಗಂಗಾಧರ, ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ರಾಷ್ಟ್ರೀಯ ಹೊರನಾಡು ಮಕ್ಕಳ ಸಾಹಿತ್ಯ ಸಮ್ಮೇಳನದ ಸಹ ಅಧ್ಯಕ್ಷೆ ರಕ್ಷಿತ ಭಾಗವಹಿಸಲಿದ್ದಾರೆ. ವಿವಿಧ ಶಾಖಾ ಮಠಗಳ ಶಿವಾಚಾರ್ಯರು ಉಪಸ್ಥಿತರಿರುವರು.

ಉದ್ಘಾಟನೆ ಬಳಿಕ ಕವಿಗೋಷ್ಠಿ, ವಿಚಾರ ಗೋಷ್ಠಿ ನಡೆಯಲಿದ್ದು, ಗೋಷ್ಠಿಯಲ್ಲಿ ಸಾಹಿತಿಗಳು, ಗಣ್ಯರು ಭಾಗವಹಿಸಲಿದ್ದಾರೆ.

ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಮಸಾಪ ರಾಜ್ಯ ಸಂಚಾಲಕ ಜಯರಾಮ್, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್, ಮಸಾಪದ ಉಪಾಧ್ಯಕ್ಷ ಜಗದೀಶ್, ನೀಲಾ ನಾಗೇಶ್, ಲತಾ, ಎ.ಎಲ್.ನಾಗೇಶ್, ಸಿ.ಜೆ.ಸೋಮಶೇಖರ್, ಸಿ.ಎಸ್.ಮನೋಹರ್, ಸಚಿನ್ ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಹಾಸ್ಯ ಸಾಹಿತಿ ಜಗನ್ನಾಥ ಅವರಿಂದ ಹಾಸ್ಯದಲ್ಲಿ ನೈತಿಕ ಪ್ರಜ್ಞೆ ಕುರಿತು ಉಪನ್ಯಾಸ ನಡೆಯಲಿದೆ.-------BOX--------

ಯುಗಮಾನೋತ್ಸವಕ್ಕೆ ಭರದ ಸಿದ್ಧತೆ

ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವಕ್ಕೆ ಶ್ರೀಪೀಠದಲ್ಲಿ ಭರದ ಸಿದ್ಧತೆಗಳು ನಡೆದಿದ್ದು, ಶ್ರೀಪೀಠವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಧರ್ಮ ಸಮಾರಂಭದ ವೇದಿಕೆ ಕಾರ್ಯಕ್ರಮಕ್ಕೆ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ.

ಸಾವಿರಾರು ಭಕ್ತರು ಏಕಕಾಲಕ್ಕೆ ಭೋಜನ ಸ್ವೀಕರಿಸಲು ಪ್ರಸಾದ ಕೌಂಟರ್‌ ಮಹಿಳೆಯರು, ಪುರುಷರಿಗಾಗಿ ಪ್ರತ್ಯೇಕವಾಗಿ ತೆರೆಯಲಾಗಿದೆ. ಶ್ರೀಪೀಠದಿಂದ ಕೊಪ್ಪಕ್ಕೆ ತೆರಳುವ ಮೇಲ್ಪಾಲ್ ರಸ್ತೆಯಲ್ಲಿ ಜಾತ್ರಾ ಮಹೋತ್ಸವಕ್ಕಾಗಿ ವಿವಿಧ ಅಂಗಡಿ ಮುಂಗಟ್ಟು ತೆರೆಯಲಾಗಿದೆ. ಬಾಳೆಹೊನ್ನೂರು ರಸ್ತೆಯ ಗದ್ದೆಯ ಬಳಿಯಲ್ಲಿ ಮಕ್ಕಳು, ಹಿರಿಯರಿಗಾಗಿ ವಿವಿಧ ಆಟೋಟಗಳಿಗೆ ಪ್ರದರ್ಶನ ಕೇಂದ್ರ ತೆರೆಯಲಾಗಿದೆ.

------------------------೧೯ಬಿಹೆಚ್‌ಆರ್ ೨ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಬುಧವಾರದಿಂದ ನಡೆಯಲಿರುವ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಧರ್ಮ ಸಮಾರಂಭಕ್ಕೆ ಸಿದ್ಧಗೊಂಡಿರುವ ಬೃಹತ್ ವೇದಿಕೆ.೧೯ಬಿಹೆಚ್‌ಆರ್ ೩: ರಂಭಾಪುರಿ ಶ್ರೀ೧೯ಬಿಹೆಚ್‌ಆರ್ ೪: ವರ್ಷಿಣಿ (ಮಕ್ಕಳ ಸಮ್ಮೇಳನದ ಸರ್ವಾಧ್ಯಕ್ಷೆ)