ಫ್ಯಾಕ್ಸ್‌ಗೆ ನೂತನ ಅಧ್ಯಕ್ಷರಾಗಿ ರಮೇಶ್ ಆಯ್ಕೆ

| Published : May 10 2025, 01:06 AM IST

ಸಾರಾಂಶ

ಕೊಳ್ಳೇಗಾಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ರಮೇಶ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷ ಶೇಖರ್, ಕಾರ್ಯನಿರ್ವಹಣಾಧಿಕಾರಿ ನಾಗರಾಜು, ಬಸವರಾಜು, ಮಹದೇವಸ್ವಾಮಿ, ಬಸವರಾಜು, ಲೋಕೇಶ್, ಅನ್ನಪೂರ್ಣ ಇನ್ನಿತರರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕಸಬಾ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಮಧುವನಹಳ್ಳಿ ಗ್ರಾಮದ ರಮೇಶ್, ಉಪಾಧ್ಯಕ್ಷರಾಗಿ ಮುಳ್ಳೂರು ಗ್ರಾಮದ ಶೇಖರ್ ಅವಿರೋಧ ಆಯ್ಕೆಯಾಗಿದ್ದಾರೆ.

ಶುಕ್ರವಾರ ನಡೆದ ಚುನಾವಣೆಯಲ್ಲಿ ಎಸ್ ರಮೇಶ್ ಮತ್ತು ಶೇಖರ್ ಅವರು ಅಧ್ಯಕ್ಷ, ಉಪಾಧ್ಯಕ್ಷರಾಗಿ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವರ ಆಯ್ಕೆಯನ್ನು ಚುನಾವಣಾಧಿಕಾರಿ ಎಸ್.ನಾಗೇಶ್ ಅವರು ಪ್ರಕಟಿಸಿದರು.

13 ಸದಸ್ಯರ ಬಲಾ ಬಲದ ಪೈಕಿ ಯಾರು ಅಧ್ಯಕ್ಷರಾಗುತ್ತಾರೆ, ಯಾರು ಆಯ್ಕೆಯಾದರೆ ಯಾರಿಗೆ ಲಾಭ ಎಂಬಿತ್ಯಾದಿ ಲೆಕ್ಕಾಚಾರ ಶುರುವಾಗಿತ್ತು. ಅಲ್ಲದೆ ಈ ಚುನಾವಣೆ ವೇಳೆ 13 ಸದಸ್ಯರಲ್ಲಿ 2 ಗುಂಪುಗಳಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಕೆಲವು ಹಿರಿಯರ ಮಾರ್ಗದರ್ಶನ ಹಾಗೂ ಹಲವು ಒಪ್ಪಂದಗಳ ಹಿನ್ನೆಲೆ ಅವಿರೋಧ ಆಯ್ಕೆ ಸರಾಗವಾಗಿ ಜರುಗುವ ಮೂಲಕ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದರು ಎನ್ನಲಾಗಿದೆ. ಈ ನಡುವೆಯೂ ಸಹಾ ಚುನಾವಣೆಯಲ್ಲಿ 3 ಮಂದಿ ನಿರ್ದೇಶಕರಾದ ಶೀಲಾ ರಾಜಶೇಖರ್, ಮಂಜುನಾಥ್, ಮುಳ್ಳೂರು ಇಂದ್ರ ಅವರು ಗೈರಾಗಿದ್ದು ನಾನಾ ಕಾರಣಗಳಿಗಾಗಿ ಚರ್ಚೆಗೆ ಗ್ರಾಸವಾಯಿತು. ಆದರೆ 9 ಮಂದಿ ನಿರ್ದೇಶಕರಾದ ಮಹದೇವಸ್ವಾಮಿ (ಸುರೇಶ್), ಎಸ್.ರವಿಕುಮಾರ್, ಎಂ.ಕೆ ಪುಟ್ಟಸ್ವಾಮಿ, ಎಂ.ಎಸ್.ಅನ್ನಪೂರ್ಣ, ಹಂಪಾಪುರ ಲೋಕೇಶ್, ಮಠದ ಬೀದಿಯ ಸಿ.ಬಸವರಾಜು, ಬ್ಯಾಂಕ್ ಮೇಲ್ವಿಚಾರಕ ಕುಮಾರ್, ಮುಖ್ಯ ಕಾರ್ಯ ನಿರ್ವಹಹಣಾಧಿಕಾರಿ ಬಿ.ನಾಗರಾಜು ಹಾಜರಿದ್ದು ನೂತನವಾಗಿ ಚುನಾಯಿತರಾದವರನ್ನು ಅಭಿನಂದಿಸಿದರು. ಈ ವೇಳೆ ಅಭಿನಂದನೆ ಸ್ವೀಕರಿಸಿದ ನೂತನ ಅಧ್ಯಕ್ಷ ರಮೇಶ್ ಮಾತನಾಡಿ, ರೈತರ ಹಿತ ಕಾಯುವ ಕೆಲಸ ಮಾಡುವೆ, ಜನಪ್ರತಿನಿಧಿಗಳು, ಎಲ್ಲಾ ನಿರ್ಧೆಶಕರ ಸಹಕಾರ ಪಡೆದು ಸಂಘದ ಅಭ್ಯುದಯಕ್ಕೆ ಸ್ಪಂದಿಸುವೆ, ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು. ನನ್ನ ಅವಿರೋಧ ಆಯ್ಕೆಗೆ ಸಹಕಾರ ನೀಡಿದ ಹನೂರು ಮಾಜಿ ಶಾಸಕರಾದ ಆರ್.ನರೇಂದ್ರ, ವೀರಶೈವ ಮಹಾಸಭೆ ಅಧ್ಯಕ್ಷ ತಿಮ್ಮರಾಜಿಪುರ ಪುಟ್ಟಣ್ಣ, ರೈತ ಹೋರಾಟಗಾರ ಅಣಗಳ್ಳಿ ಬಸವರಾಜು, ನಗರಸಭೆ ನಾಮ ನಿರ್ದೇಶನ ಸದಸ್ಯ ನರಸಿಂಹನ್, ಮುಳ್ಳೂರಿನ ಷಣ್ಮುಗಪ್ಪ ಸೇರಿದಂತೆ ಎಲ್ಲರಿಗೂ ಧನ್ಯವಾದ ಸಲ್ಲಿಸುವೆ. ಇಲ್ಲಿನ ಸಣ್ಣ, ಪುಟ್ಟ ನ್ಯೂನ್ಯತೆ ಸರಿಪಡಿಸಿಕೊಂಡು ರೈತರು, ಸಂಘದ ಆಡಳಿತ ಮಂಡಳಿ ನೂತನ ನಿರ್ದೇಶಕರನ್ನು ವಿಶ್ವಾಸಕ್ಕೆ ಪಡೆದು ಕೃಷಿ ಪತ್ತಿನ ಸಹಕಾರಿ ಸಂಘದ ಬಲವರ್ಧನೆಗೆ ಶ್ರಮಿಸುವೆ. -ರಮೇಶ್, ನೂತನ ಅಧ್ಯಕ್ಷ, ಕೊಳ್ಳೇಗಾಲ ಕಸಬಾ ಕೃಷಿ ಪತ್ತಿನ ಸಹಕಾರ ಸಂಘ