ವಿಎಸ್‌ಎಸ್‌ಎನ್ ಅಧ್ಯಕ್ಷರಾಗಿ ರಮೇಶ್ ಅವಿರೋಧ ಆಯ್ಕೆ

| Published : Nov 13 2025, 12:15 AM IST

ಸಾರಾಂಶ

ಕೊರಟಗೆರೆ ವಿಎಸ್‌ಎಸ್‌ಎನ್ ಅಧ್ಯಕ್ಷರಾಗಿ ಗುಂಡಿನಪಾಳ್ಯ ಜಿ.ಸಿ ರಮೇಶ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕೊರಟಗೆರೆ ವಿಎಸ್‌ಎಸ್‌ಎನ್ ಅಧ್ಯಕ್ಷರಾಗಿ ಗುಂಡಿನಪಾಳ್ಯ ಜಿ.ಸಿ ರಮೇಶ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಚುನಾವಣೆಯಲ್ಲಿ ನಿಗದಿತ ಸಮಯದಲ್ಲಿ ಪ್ರತಿ ಸ್ಪರ್ಧಿಯಾಗಿ ಯಾರು ಕೂಡ ನಾಮಪತ್ರ ಸಲ್ಲಿಸದ ಕಾರಣ ನೂತನ ಅಧ್ಯಕ್ಷರಾಗಿ ರಮೇಶ್ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿ.ಎಸ್ ಗುರುರಾಜ್ ಅಧಿಕೃತ ಘೋಷಣೆ ಮಾಡಿದರು.ವಿಎಸ್‌ಎಸ್‌ನ್ ನೂತನ ಅಧ್ಯಕ್ಷ ಜಿ.ಸಿ ರಮೇಶ್ ಮಾತನಾಡಿ, ಸರ್ವ ಸದಸ್ಯರ ಒಗ್ಗಟ್ಟಿನಿಂದ ನಾನು ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಡಾ.ಜಿ ಪರಮೇಶ್ವರ್‌ ಹಾಗೂ ಕೆ.ಎನ್ ರಾಜಣ್ಣ ರವರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತೇನೆ ಎಂದರು.ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, ಆಡಳಿತ ಮಂಡಳಿಯ ಸರ್ವ ಸದಸ್ಯರ ಒಗ್ಗಟ್ಟಿನಿಂದ ರಮೇಶ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ರೈತರಿಗೆ ವಿನೂತನ ಮಾದರಿಯಲ್ಲಿ ಸಾಲ ಸೌಲಭ್ಯ ನೀಡುತ್ತೇವೆ, ಉತ್ತಮ ಆಡಳಿತ ನಡೆಸುತ್ತೇವೆ ಎಂದು ಹೇಳಿದರು.ವಿಎಸ್‌ಎಸ್‌ಎನ್ ನಿರ್ದೇಶಕ ಕೆ.ವಿ ಪುರುಷೋತ್ತಮ್ ಮಾತನಾಡಿ, ಪಕ್ಷಾತೀತವಾಗಿ ಮತ್ತು ಜಾತ್ಯತೀವಾಗಿ ಅಧಿಕಾರ ವಿಕೇಂದ್ರಿಕರಣ ಆಗಬೇಕೆಂದು ಒಮ್ಮತದಿಂದ ತೀರ್ಮಾನಿಸಿ ಜಿ.ಸಿ ರಮೇಶ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. ಗೃಹ ಸಚಿವರ ಮತ್ತು ಮಾಜಿ ಸಹಕಾರ ಸಚಿವರ ಮಾರ್ಗದರ್ಶನದಲ್ಲಿ ಒಳ್ಳೆಯ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಕೆ.ಎನ್ ಸುಂದರಮ್ಮ, ನಿರ್ದೇಶಕರಾದ ಎಚ್.ಸಿ ರಾಜಣ್ಣ, ಕೃಷ್ಣಮೂರ್ತಿ, ಪುಟ್ಟನರಸಯ್ಯ, ಡಿ.ಪಿ ಸುರೇಶ್, ಜಿ.ಸಿ ರಮೇಶ್, ಡಿ.ಎಲ್ ಮಲ್ಲಯ್ಯ, ಎನ್.ನೇತ್ರಾವತಿ, ತಿಮ್ಮಪ್ಪ, ದಿವಾಕರ ಜಿ.ಎನ್, ಎಚ್.ಸಿ ತಿಮ್ಮರಾಜು, ಸಿಇಒ ಬಿ.ಎ ಕೃಷ್ಣಮೂರ್ತಿ, ಮಾರಾಟ ಗುಮಾಸ್ತ ದಿನಕರ್, ಸಹಾಯಕ ಮಾರುತಿ ಸೇರಿದಂತೆ ಇತರರು ಇದ್ದರು.