ರೋಟರಿ ಬಿಡದಿ ಸೆಂಟ್ರಲ್‌ ಅಧ್ಯಕ್ಷರಾಗಿ ರಮೇಶ್‌ಕುಮಾರ್ ಅಧಿಕಾರ ಸ್ವೀಕಾರ

| Published : Jul 19 2025, 02:00 AM IST

ರೋಟರಿ ಬಿಡದಿ ಸೆಂಟ್ರಲ್‌ ಅಧ್ಯಕ್ಷರಾಗಿ ರಮೇಶ್‌ಕುಮಾರ್ ಅಧಿಕಾರ ಸ್ವೀಕಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ನಾನು ರೋಟರಿ ಸದಸ್ಯನಾಗಿ ಸೇರ್ಪಡೆಗೊಂಡ ದಿನದಿಂದ ಹಿರಿಯರ ಮಾರ್ಗದರ್ಶನದಲ್ಲಿ ಹಲವು ಸಮಾಜ ಸೇವೆ ಮಾಡಿರುವ ತೃಪ್ತಿ ನನಗಿದೆ. ಅಲ್ಲದೆ ರೋಟರಿ ಕಾರ್ಯಕ್ರಮಗಳು ನನಗೆ ಪ್ರೇರಣೆಯಾಗಿವೆ ಎಂದು ರೋಟರಿ ಬಿಡದಿ ಸೆಂಟ್ರಲ್ ಅಧ್ಯಕ್ಷ ಬಿ.ಎಂ.ರಮೇಶ್‌ಕುಮಾರ್ ಹೇಳಿದರು.

ರಾಮನಗರ: ನಾನು ರೋಟರಿ ಸದಸ್ಯನಾಗಿ ಸೇರ್ಪಡೆಗೊಂಡ ದಿನದಿಂದ ಹಿರಿಯರ ಮಾರ್ಗದರ್ಶನದಲ್ಲಿ ಹಲವು ಸಮಾಜ ಸೇವೆ ಮಾಡಿರುವ ತೃಪ್ತಿ ನನಗಿದೆ. ಅಲ್ಲದೆ ರೋಟರಿ ಕಾರ್ಯಕ್ರಮಗಳು ನನಗೆ ಪ್ರೇರಣೆಯಾಗಿವೆ ಎಂದು ರೋಟರಿ ಬಿಡದಿ ಸೆಂಟ್ರಲ್ ಅಧ್ಯಕ್ಷ ಬಿ.ಎಂ.ರಮೇಶ್‌ಕುಮಾರ್ ಹೇಳಿದರು.

ಬಿಡದಿ ಹೊರವಲಯದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ರೋಟರಿ ಸಮಾಜಕ್ಕೆ ನೀಡಿರುವ ಸಾರ್ಥಕ ಸೇವೆಗಳನ್ನು ಹತ್ತಿರದಿಂದ ಕಂಡಿದ್ದೇನೆ. ಈಗ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದು, ಸಮಾಜಮುಖಿ ಸೇವೆ ಮಾಡಲು ಬಿಡದಿ ರೋಟರಿ ಸೆಂಟ್ರಲ್ ಉತ್ತಮ ವೇದಿಕೆಯಾಗಿದೆ ಎಂದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಮಾಜಮುಖಿ ಸೇವೆಯಲ್ಲಿ ಮೊದಲ ಸ್ಥಾನದಲ್ಲಿದೆ. ಅಂತಹ ರೋಟರಿಯಲ್ಲಿ ಸದಸ್ಯರಾಗುವುದೇ ಪುಣ್ಯದ ಕೆಲಸವಾಗಿದ್ದು, ರಮೇಶ್‌ಕುಮಾರ್ ಅಧ್ಯಕ್ಷರಾಗಿ ಅವರ ತಂಡದ ಸಹಕಾರದಲ್ಲಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳು, ಪರಿಸರ ಜಾಗೃತಿ, ಶಿಕ್ಷಣಕ್ಕೆ ಸಂಬಂಧಿಸಿದ ಉಪಯುಕ್ತ ಕಾರ್ಯಕ್ರಮ ಆಯೋಜಿಸಿ ಎಂದು ಹೇಳಿದರು.

ನೂತನವಾಗಿ ರೋಟರಿ ಸದಸ್ಯರಾಗಿ ಎಚ್.ಎಸ್.ಲೋಹಿತ್ ಕುಮಾರ್, ಖಲೀಲ್, ತ್ಯಾಗರಾಜು, ಮಹೇಶ್.ಆರ್, ಹರೀಶ್ ಸೇರ್ಪಡೆಗೊಂಡರು. ಬಡಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರಗಳು, ಸರ್ಕಾರಿ ಶಾಲೆಗೆ ವಾಟರ್‌ಫಿಲ್ಟರ್ ವಿತರಣೆ ವಿಶೇಷವಾಗಿತ್ತು. ನೂತನ ಕಾರ್ಯದರ್ಶಿ ಬಿ.ಎಂ.ಶ್ರೀವತ್ಸ, ರೋಟೇರಿಯನ್‌ಗಳಾದ ಆಜ್ಗರ್‌ ಉಲ್ಲಾ. ಚಿಕ್ಕಣ್ಣಯ್ಯ, ಶಿವಣ್ಣ, ಬಿ.ಎಂ.ವಸಂತ ಕುಮಾರ್, ರಮೇಶ್, ಎಂ.ನಾಗರಾಜು, ಎನ್.ಚಂದ್ರಶೇಖರ್, ಆನಂದ್ ಇತರರು ಭಾಗವಹಿಸಿದ್ದರು.

ಪದಾಧಿಕಾರಿಗಳು:

ಅಧ್ಯಕ್ಷರಾಗಿ ಬಿ.ಎಂ.ರಮೇಶ್‌ಕುಮಾರ್, ಕಾರ್ಯದರ್ಶಿ ಬಿ.ಎಂ.ಶ್ರೀವತ್ಸ, ನಿರ್ಗಮಿತ ಅಧ್ಯಕ್ಷ ಅಜ್ಗರ್ ಉಲ್ಲಾ, ನಿಯೋಜಿತ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷ ನಾಗರಾಜು, ಖಜಾಂಚಿ ಪುಟ್ಟಹೊನ್ನಯ್ಯ, ಜಂಟಿ ಕಾರ್ಯದರ್ಶಿ ಶಿವರಾಜು, ರಕ್ಷಣಾ ದಳ ನಾಗೇಂದ್ರಗೌಡ, ಪತ್ರಿಕಾ ಸಂಪಾದಕ ಕೆ.ಎಸ್.ಗೌಡ, ಸಂಘ ಸೇವೆ ನಿರ್ದೇಶಕ ಬಿ.ಎಂ. ವಸಂತ್‌ಕುಮಾರ್, ವೃತ್ತಿಸೇವೆ ಕೆ.ಎನ್. ರಮೇಶ್, ಸಮುದಾಯ ಸೇವೆ ಶಿವಶಂಕರ್, ಅಂತಾರಾಷ್ಟ್ರೀಯ ಸೇವೆ ಚಂದ್ರಶೇಖರ್, ಯುವ ಜನ ಸೇವೆ ರವಿಕುಮಾರ್ ಸೇರಿದಂತೆ ವಿವಿಧ ಸಮಿತಿಗಳಿಗೆ ಮುಖ್ಯಸ್ಥರು ನೇಮಕವಾಗಿದ್ದಾರೆ.17ಕೆಆರ್ ಎಂಎನ್ 1.ಜೆಪಿಜಿ

ಬಿಡದಿ ಹೊರವಲಯದ ಈಗಲ್‌ ಟನ್‌ನಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರೋಟರಿ ಬಿಡದಿ ಸೆಂಟ್ರಲ್ ನೂತನ ಅಧ್ಯಕ್ಷ ಬಿ.ಎಂ.ರಮೇಶ್‌ಕುಮಾರ್ ಅವರನ್ನು ಅಭಿನಂದಿಸಲಾಯಿತು.

-------------------------------