ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಶಿವರಾಮಪೇಟೆಯಲ್ಲಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿ, ಒಂದು ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯ ವ್ಯಾಪಾರಿಗಳು ಬುಧವಾರ ಅಂಗಡಿ ಮುಂಗಟ್ಟು ಬಂದ್‌ಮಾಡಿ ಪ್ರತಿಭಟಿಸಿದರು.ದೇವರಾಜ್ ಮೊಹಲ್ಲಾ ನಿವಾಸಿ ಮೂಡರಾಮ್ ಪುತ್ರ ರಮೇಶಕುಮಾರ್ ಮಾಲಿ ಹಾಗೂ ಅವರ ಪುತ್ರ ಚಂದ್ರು ಪ್ರಕಾಶ್ ಅವರು ಶಿವರಾಂಪೇಟೆ ಮಧುಪ್ಲಾಸ್ಟಿಕ್ ಮಾಲೀಕ ಬಬುತ ರಾಮ್ ಅವರ ಅಂಗಡಿ ಬಳಿ ಹೋಗಿ ಹಲ್ಲೆ ನಡೆಸಿ, ಒಂದು ಲಕ್ಷ ಹಣ ಕೊಡುವಂತೆ ಬೆದರಿಕೆ ಹಾಕಿದ ವೇಳೆ ಸ್ಥಳೀಯ ನಿವಾಸಿಗಳು ಮಧ್ಯಪ್ರವೇಶಿಸಿ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.ಸ್ಥಳೀಯ ನಿವಾಸಿಗಳು ಆಗಮಿಸಿ ರಮೇಶ್ ಮಾಲಿ ಹಾಗೂ ಚಂದ್ರು ಪ್ರಕಾಶ್ ಅವರನ್ನು ದೇವರಾಜ್ ಪೊಲೀಸ್ ಠಾಣೆಗೆ ಹಾಜರುಪಡಿಸಿದರು.ಈ ಸಂಬಂಧ ಶಿವರಾಂಪೇಟೆಯ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟನ್ನು ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಹಾಗೂ ಕೃಷ್ಣನಂದಸ್ವಾಮೀಜಿ ನೇತ್ವದಲ್ಲಿ ನೂರಾರು ಮಂದಿ ಸಭೆಯಲ್ಲಿ ಪಾಲ್ಗೊಂಡು, ದೇವರಾಜ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಘು ಅವರಿಗೆ ದೂರು ನೀಡಿದರು.ಈ ವೇಳೆ ಶಾಂತಿ ಲಾಲ್‌ಜೈನ, ಮಹಾವೀರ್, ಅಮೃತ್ ಪೈಲ್ವಾನ್, ಗಣೇಶ್ ಮಾಲ್, ಪ್ರವೀಣ್ ಜೈನ, ವಕ್ತರಾಮ್, ಕಾಂತಿ ಲಾಲ್, ಸಾಗರ್ ಮೊದಲದಾವರು ಇದ್ದರು.