ಸಾರಾಂಶ
ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಇತ್ತೀಚೆಗೆ ಸವಿತಾ ಸಮಾಜವನ್ನು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದಿಂದ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಇತ್ತೀಚೆಗೆ ಸವಿತಾ ಸಮಾಜವನ್ನು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದಿಂದ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗ ಅಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ಮಾತನಾಡಿ, ಸಿ.ಟಿ.ರವಿಯವರು ಶಾಸಕರಾಗಿ, ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ ದುರಾಂಹಕಾರ ವರ್ತನೆಯಿಂದಾಗಿ ಅವರ ಕ್ಷೇತ್ರದ ಜನ ಹೀನಾಯವಾಗಿ ಸೋಲಿಸುವುದರ ಮೂಲಕ ಅವರ ತಲೆಗೆ ಏರಿದ್ದ ಅಧಿಕಾರದ ಅಮಲನ್ನು ಇಳಿಸಿದ್ದಾರೆ, ಆದರೂ ಬುದ್ದಿ ಕಲಿಯದ ಅವರು ಇನ್ನೂ ಕೂಡ ಇಂತಹ ಗೊಂದಲಕಾರಿ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಿಲ್ಲ ಎಂದು ದೂರಿದರು.
ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ಸವಿತಾ ಸಮಾಜದ ವಿರುದ್ದ ಸಂವಿಧಾನ ಮತ್ತು ಕಾನೂನುಗಳ ಮೂಲಭೂತ ಆಶಯಗಳಿಗೆ ವಿರುದ್ದವಾಗಿ ಮಾತನಾಡಿ ಆ ಸಮಾಜವನ್ನು ಅತ್ಯಂತ ತುಚ್ಚವಾಗಿ ಕಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಘನತೆವೆತ್ತ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ವಿಧಾನಪರಿಷತ್ ಸದಸ್ಯತ್ವದಿಂದ ಅವರನ್ನು ವಜಾ ಮಾಡಬೇಕು ಹಾಗೂ ಪೊಲೀಸ್ ಇಲಾಖೆ ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನಾಗರಾಜ್ ಕಂಕಾರಿ, ಎಚ್. ಪಾಲಾಕ್ಷಿ, ಜಿ ಡಿ ಮಂಜುನಾಥ್, ಚೈತ್ರ ಮೋಹನ್, ಶರತ್ ಮರಿಯಪ್ಪ, ಎಸ್ .ಕೆ. ಭಾಸ್ಕರ್, ಪಿ.ಮೋಹನ್, ಆರ್ ರಾಘವೇಂದ್ರ, ಬಸವರಾಜ್, ಗಂಗಾಧರ್, ಟಿ ಡಿ ಶಶಿಕುಮಾರ್, ರವಿಕುಮಾರ್, ಮುರುಗೇಶ್, ಚಂದ್ರಶೇಖರ್, ಮಂಜುನಾಥ್, ಗಂಗಾಧರ್, ಜಯಶೀಲ, ಎಂ.ಸಿದ್ದರಾಮು, ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))