ಡಾ.ನ. ರತ್ನ ಮೈಸೂರಿನ ರಂಗಭೀಷ್ಮ, ರಂಗ ರತ್ನ

| Published : Jun 30 2024, 12:47 AM IST

ಸಾರಾಂಶ

ಡಾ.ನ. ರತ್ನ ಅವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಬಂದಿದೆ. ರತ್ನ ಅವರಿಗೆ ಪದ್ಮಶ್ರೀ, ಭಾರತರತ್ನ ಪ್ರಶಸ್ತಿ ದೊರಕಬೇಕಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಹಿರಿಯ ರಂಗಕರ್ಮಿ ಡಾ.ನ. ರತ್ನ ಅವರು ಮೈಸೂರಿನ ರಂಗಭೀಷ್ಮ, ರಂಗ ರತ್ನವೂ ಹೌದು. ಕನ್ನಡ ರಂಗಭೂಮಿಗೆ ಅವರ ಕೊಡುಗೆ ಬಹಳ ದೊಡ್ಡದು ಎಂದು ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ತಿಳಿಸಿದರು.

ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ರತ್ನರ ಬಳಗವು ಶನಿವಾರ ಆಯೋಜಿಸಿದ್ದ ‘ರತ್ನ- ಎಂದಿಗೂ ರತ್ನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮದು ಆರು ದಶಕಗಳ ಒಡನಾಟ. ಅವರು ನೊಬಲ್ ಮ್ಯಾನ್, ಅವರನ್ನು ಕಳೆದುಕೊಂಡಿರುವುದೇ ದುಃಖದ ಸಂಗತಿ ಎಂದರು.

ನಿವೃತ್ತ ಎಂಜಿನಿಯರ್ ಬಾಪು ಸತ್ಯನಾರಾಯಣ ಮಾತನಾಡಿ, ಡಾ.ನ. ರತ್ನ ಅವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಬಂದಿದೆ. ರತ್ನ ಅವರಿಗೆ ಪದ್ಮಶ್ರೀ, ಭಾರತರತ್ನ ಪ್ರಶಸ್ತಿ ದೊರಕಬೇಕಿತ್ತು. ಆದರೆ, ದೊರಕಿಲ್ಲೆಂಬ ಬೇಸರವಿದೆ ಎಂದು ಹೇಳಿದರು.

ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ಧನ್ ಮಾತನಾಡಿ, ನ. ರತ್ನ ರಂಗಭೂಮಿಯಲ್ಲಿ ಬಹಳ ದೊಡ್ಡ ಚೈತನ್ಯ. ಮಾನವೀಯ ಮೌಲ್ಯ, ನೈತಿಕ ಮೌಲ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಇವೆಲ್ಲವನ್ನೂ ವ್ಯಕ್ತಿಗತವಾಗಿ ಎಷ್ಟೇ ಕಷ್ಟಕಾರ್ಪಣ್ಯಗಳು ಬಂದರೂ ತಮ್ಮ ಮೇಲೆ ಹೊತ್ತುಕೊಂಡು ರಂಗಭೂಮಿ ಕಟ್ಟಿದವರು ಎಂದು ತಿಳಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಎಂ. ಸತ್ಯನಾರಾಯಣರಾವ್, ಹಿರಿಯ ರಂಗಕರ್ಮಿಗಳಾದ ಮಂಡ್ಯ ರಮೇಶ್, ಸಿ. ಬಸವಲಿಂಗಯ್ಯ, ಬಳಗದ ಎಚ್.ಆರ್. ಲೀಲಾವತಿ, ಡಾ.ಎನ್.ಪಿ. ನಟರಾಜ್, ಎನ್. ಧನಂಜಯ, ಶ್ರೀನಿವಾಸ್ ಜಿ. ಕಪ್ಪಣ್ಣ, ವೆಂಕಟರಾಜು, ರಾಮಚಂದ್ರ, ರಾಜೇಶ್, ಪ್ರಸಾದ್ ಕುಂದೂರ್, ಸವಿತಾ ಪ. ಮಲ್ಲೇಶ್, ದೀಪಕ್ ಮೈಸೂರು, ಓಂಕಾರ್, ಎಸ್.ಆರ್. ರಮೇಶ್ ಮೊದಲಾದವರು ಇದ್ದರು.