ಮುಜರಾಯಿ ಇಲಾಖೆಯಿಂದ ರಾಮಗಿರಿ ದೇಗುಲ ಅವಗಣನೆ

| Published : Dec 08 2024, 01:17 AM IST

ಮುಜರಾಯಿ ಇಲಾಖೆಯಿಂದ ರಾಮಗಿರಿ ದೇಗುಲ ಅವಗಣನೆ
Share this Article
  • FB
  • TW
  • Linkdin
  • Email

ಸಾರಾಂಶ

Ramgiri temple neglected by Mujarai department

-ಕಾಣಿಕೆಯ ಮೇಲಷ್ಟೆ ಮುಜರಾಯಿ ಇಲಾಖೆಗೆ ಕಣ್ಣು

-----

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ತಾಲೂಕಿನ ರಾಮಗಿರಿ ಕ್ಷೇತ್ರದಲ್ಲಿ ಬೆಟ್ಟದ ಮೇಲೆ ನೆಲೆಸಿರುವ ಗುರು ಕರಿಸಿದ್ದೇಶ್ವರಸ್ವಾಮಿ ದೇವಾಲಯದ ಅಭಿವೃದ್ಧಿಯ ವಿಚಾರವಾಗಿ ಮುಜರಾಯಿ ಇಲಾಖೆ ಅವಗಣನೆ ತೋರುತ್ತಿದೆ ಎಂದು ಭಕ್ತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

ದೇವಾಲಯದ ಹುಂಡಿಯಲ್ಲಿ ಸಾಕಷ್ಟು ಪ್ರಮಾಣದ ಕಾಣಿಕೆ ಸಂಗ್ರಹವಾಗುತ್ತಿದೆ. ಇಷ್ಟೊತ್ತಿಗೆ ಈ ದೇವಾಲಯವನ್ನು ಎ ಗ್ರೇಡ್‌ ಪಟ್ಟಿಗೆ ಸೇರಿಸಬೇಕಿತ್ತು. ಆದರೆ, ಮುಜರಾಯಿ ಇಲಾಖೆಟೆ ಗ್ರೇಡ್‌ ಪಟ್ಟಿಗೆ ಸೇರಿಸಲು ಮುಂದಾಗಿಲ್ಲದಿರುವುದು ಭಕ್ತರಿಗೆ ಬೇಸರ ತಂದಿದೆ.

ಇಲ್ಲಿನ ದೇವಾಲಯದಲ್ಲಿ ಇಲಾಖೆಯಿಂದ ಆಗಬೇಕಾದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ಗ್ರಾಮಸ್ಥರು ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು ಭಕ್ತರ ಸಹಕಾರದದಿಂದ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮುಜರಾಯಿ ಇಲಾಖೆ ಮಾತ್ರ ಯಾವುದಕ್ಕೂ ಸಹಕಾರ ನೀಡುತ್ತಿಲ್ಲ ಎಂಬುದು ಭಕ್ತರ ಬೇಸರಕ್ಕೆ ಕಾರಣವಾಗಿದೆ.

ಭರಪೂರ ಕಾಣಿಕೆ:ದೇವಾಲಯದ ಹುಂಡಿಯಲ್ಲಿನ ಕಾಣಿಕೆಯನ್ನು ಎಣಿಕೆ ಮಾಡುವ ಕೆಲಸ ಇಂದು ನಡೆಯಿತು. ದೇವಾಲಯದ ಹುಂಡಿಯಲ್ಲಿ 4, 08,570 ರು. ಸಂಗ್ರಹವಾಗಿದೆ. ವರ್ಷಕ್ಕೆ ಕನಿಷ್ಠ ಎರಡು ಬಾರಿ ಹುಂಡಿ ಎಣಿಕೆ ಕಾರ್ಯ ಮಾಡುತಿದ್ದು, ಕಳೆದ ಸೆ.2022 ರಲ್ಲಿ ರು. 6,89,400, ಆ.2023 ರಲ್ಲಿ ರು. 6,89,750, ಏ.2024 ರಲ್ಲಿ 5,82,400 ರು. ಸಂಗ್ರಹವಾಗಿತ್ತು. ಒಟ್ಟಾರೆ ಇಲ್ಲಿನ ದೇವಾಲಯದಲ್ಲಿ ವರ್ಷಕ್ಕೆ ಕನಿಷ್ಠ 10 ರಿಂದ 12 ಲಕ್ಷಕ್ಕೂ ಅಧಿಕ ಹುಂಡಿ ಹಣ ಸಂಗ್ರಹವಾಗುತ್ತಿದೆ.

ಇದು ಕಳೆದ ಐದಾರು ವರ್ಷಗಳಿಂದ ದೇವಾಲಯದ ಹುಂಡಿಯಲ್ಲಿ ಸಾಕಷ್ಟು ಹಣ ಸಂಗ್ರಹವಾಗುತಿದೆ. ಆದರೂ ಮುಜರಾಯಿ ಇಲಾಖೆ ದೇವಾಲಯವನ್ನು ಎ ಗ್ರೇಡ್ ದೇವಾಲಯವನ್ನಾಗಿ ಮೇಲ್ದರ್ಜೇಗೇರಿಸದಿರುವುದು ವಿಪರ್ಯಾಸ.

ಪ್ರೇಕ್ಷಣೀಯ ಸ್ಥಳವಾಗಿಸಿ: ರಾಮಗಿರಿ ಬೆಟ್ಟದ ಮೇಲೆ ಶ್ರೀ ರಾಮ, ಲಕ್ಷ್ಮಣ, ಸೀತಾ ಮಾತೆಯರು ತಂಗಿರುವ ಬಗ್ಗೆ ಅಯೋದ್ಯಯ ಭೂಪಟದಲ್ಲಿ 199 ನೇ ಸ್ಥಳವಾಗಿ ಗುರುತಿಸಲಾಗಿದೆ. ಹಾಗಾಗಿ ರಾಮಗಿರಿ ಬೆಟ್ಟವನ್ನು ಐತಿಹಾಸಿಕ ಪ್ರವಾಸಿ ತಾಣವಾಗಿಸಬೆಕು ಎಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.

ಹುಂಡಿ ಎಣಿಕೆ ಕಾರ್ಯದಲ್ಲಿ ಉಪತಹಸೀಲ್ದಾರ್ ಮಂಜುನಾಥ್, ರಾಜಸ್ವ ನಿರೀಕ್ಷಕ ನಾಗರಾಜ್, ದೇವಾಲಯ ಸಮಿತಿ ಅಧ್ಯಕ್ಷ ಪೋಸ್ಟ್ ಓಂಕಾರಪ್ಪ, ಮುಖಂಡರಾದ ಕಾಟಪ್ಪ ಯಾದವ್, ಜಿ.ಆರ್. ಮನಮೋಹನ್, ಆರ್..ರಾಜಾನಾಯಕ್ , ಕೆಂಚವೀರಪ್ಪರ ಕುಮಾರಣ್ಣ, ಜಾನಜ್ಜರ ರವಿಕುಮಾರ್, ಕುಮಾರ್ ಪಾಳೆಗಾರ್,, ಆರ್.ಜಿ. ಕೌಶಿಕ್, ಕಂಪೌಂಡರ್ ರುದ್ರಪ್ಪ, ಪ್ರಸನ್ನ, ಗ್ರಾಮ ಆಡಳಿತಾದಿಕಾರಿ ತಿಪ್ಪೇಸ್ವಾಮಿ, , ರವೀಂದ್ರ, ಹೋಬಳಿಯ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು, ನಾಡಕಚೇರಿ ಸಿಬ್ಬಂದಿಗಳು, ಹೋಬಳಿಯ ಎಲ್ಲಾ ಗ್ರಾಮ ಸಹಾಯಕರು, ಅರ್ಚಕರು, ಗ್ರಾಮದ ಮುಖಂಡರು, ಗ್ರಾಮಸ್ಥರು ಇದ್ದರು.

----

ಫೋಟೊ: ರಾಮಗಿರಿ ಬೆಟ್ಟದ ಮೇಲಿರುವ ಶ್ರೀ ಗುರು ಕರಿಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.