ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಕೈಲಾಸನಾಥ ಶ್ರೀಗಳಿಗೆ ಆಹ್ವಾನ

| Published : Dec 21 2023, 01:15 AM IST

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಕೈಲಾಸನಾಥ ಶ್ರೀಗಳಿಗೆ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಕರೆ ಮಾಡಿ ಆಹ್ವಾನಿಸಿದ್ದಾರೆ.

ಕೊಲ್ಹಾರ:

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2024ರ ಜ.22 ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಟ್ಟಣದ ಶೀಲವಂತ ಹಿರೇಮಠದ ಘ.ಮ.ಪೂ ಧರ್ಮರತ್ನ ಡಾ.ಕೈಲಾಸನಾಥ ಮಹಾಸ್ವಾಮೀಜಿಗಳಿಗೆ ರಾಮಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಕರೆ ಮಾಡಿ ಆಹ್ವಾನಿಸಿದ್ದಾರೆ. ಬುಧವಾರ ಶೀಲವಂತ ಹಿರೇಮಠದಲ್ಲಿ ಕೈಲಾಸನಾಥ ಶ್ರೀಗಳು ಮಾಹಿತಿ ನೀಡಿ, ಮರ್ಯಾದಾ ಪುರುಷೋತ್ತಮ ಶ್ರೀ ರಾಮದೇವರ ಮಹಾಯಜ್ಞದಲ್ಲಿ ಪಾಲ್ಗೊಳ್ಳುವುದು ಜಿಲ್ಲೆಯ ಹಾಗೂ ಕೊಲ್ಹಾರ ಪಟ್ಟಣದ ಭಾಗ್ಯವೆಂದು ಸಂತಸ ವ್ಯಕ್ತಪಡಿಸಿದರು.