ಉತ್ತಮ ಆಡಳಿತ ಚಟುವಟಿಕೆ : ರಾಮನಗರ ಜಿಪಂಗೆ ಅತ್ಯುತ್ತಮ ಒಗ್ಗೂಡಿಸುವಿಕೆ ಜಿಲ್ಲಾ ಪುರಸ್ಕಾರ

| N/A | Published : Feb 07 2025, 12:34 AM IST / Updated: Feb 07 2025, 08:26 AM IST

ಸಾರಾಂಶ

  ಅತ್ಯುತ್ತಮ ಒಗ್ಗೂಡಿಸುವಿಕೆ ಜಿಲ್ಲಾ ಪುರಸ್ಕಾರ (ರೇಷ್ಮೆ ಇಲಾಖೆ) ರಾಮನಗರ ಜಿಲ್ಲಾ ಪಂಚಾಯಿತಿ ಹಾಗೂ ಅತ್ಯುತ್ತಮ ಪ್ರಶಸ್ತಿಯನ್ನು ಜಾಲಮಂಗಲ ಗ್ರಾಮ ಪಂಚಾಯಿತಿ ಸ್ವೀಕಾರ ಮಾಡಿತು.

ರಾಮನಗರ: ಅತ್ಯುತ್ತಮ ಒಗ್ಗೂಡಿಸುವಿಕೆ ಜಿಲ್ಲಾ ಪುರಸ್ಕಾರ (ರೇಷ್ಮೆ ಇಲಾಖೆ) ರಾಮನಗರ ಜಿಲ್ಲಾ ಪಂಚಾಯಿತಿ ಹಾಗೂ ಅತ್ಯುತ್ತಮ ಪ್ರಶಸ್ತಿಯನ್ನು ಜಾಲಮಂಗಲ ಗ್ರಾಮ ಪಂಚಾಯಿತಿ ಸ್ವೀಕಾರ ಮಾಡಿತು.

ಮಹಾತ್ಮಗಾಂಧಿ ನರೇಗಾ ಯೋಜನೆಯ ಪರಿಣಾಮಕಾರಿಯಾಗಿ ಅನುಷ್ಠಾನ, ಮಾನವ ದಿನಗಳ ಸೃಜನೆ, ಕಾಮಗಾರಿ ಅನುಷ್ಠಾನ ಮತ್ತು ಮುಕ್ತಾಯಗೊಳಿಸುವಿಕೆ, ಉತ್ತಮ ಆಡಳಿತ ಚಟುವಟಿಕೆಗಳನ್ನು ಅಳವಡಿಸಿಕೊಂಡಿರುವುದು, ಸಾಮಾಜಿಕ ಪರಿಶೋಧನೆಯು ಆಕ್ಷೇಪಣೆ ಮೇಲಿನ ವಸೂಲಾತಿ, ವಿನೂತನ ಕಾರ್ಯಕ್ರಮ ಪರಿಗಣಿಸಿ ರಾಮನಗರ ಜಿಲ್ಲಾ ಪಂಚಾಯಿತಿಯ ಅತ್ಯುತ್ತಮ ಒಗ್ಗೂಡಿಸುವಿಕೆ ಜಿಲ್ಲಾ ಪುರಸ್ಕಾರ (ರೇಷ್ಮೆ ಇಲಾಖೆ) ಹಾಗೂ ಜಾಲಮಂಗಲ ಗ್ರಾಮ ಪಂಚಾಯಿತಿಗೆ ಅತ್ಯುತ್ತಮ ಪ್ರಶಸ್ತಿ ಲಭಿಸಿತ್ತು.ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ನರೇಗಾ ಹಬ್ಬದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರಿಂದ ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಅವರು ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅಪರ ಮುಖ್ಯ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಪಂ.ರಾ.) ಉಮಾ ಮಹದೇವನ್, ಅಪರ ಮುಖ್ಯ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಂಜುಮ್ ಪರ್ವೇಜ್, ಗ್ರಾಮೀಣಾಭಿವೃದ್ಧಿ ಆಯುಕ್ತರು ಪವನ್ ಕುಮಾರ್ ಮಲಪಾಟಿ ಹಾಜರಿದ್ದರು.

ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿ ರಾಮನಗರ ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕರಾದ ಮಂಜುನಾಥಸ್ವಾಮಿ ಎಚ್.ಎನ್., ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಸಿ.ಡಿ. ಬಸವರಾಜು, ಸಹಾಯಕ ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಕನಕಪುರ ಮುತ್ತುರಾಜು, ಜಾಲಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾ ಪಂಚಾಯತ್‌ನ ನರೇಗಾ ಶಾಖೆ ಎಡಿಪಿಸಿ, ಜಿಲ್ಲಾ ಐಇಸಿ ಸಂಯೋಜಕರು ಹಾಜರಿದ್ದರು.6ಕೆಆರ್ ಎಂಎನ್ 2.ಜೆಪಿಜಿ

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಮಹಾತ್ಮಗಾಂಧಿ ನರೇಗಾ ಹಬ್ಬದಲ್ಲಿ ರಾಮನಗರ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ರವರು ಪ್ರಶಸ್ತಿ ಸ್ವೀಕರಿಸಿದರು.