ಚಿಕ್ಕಬೋಗನಹಳ್ಳಿ ಡೇರಿಗೆ ರಮ್ಯ ಹೊಸ ಸಾರಥಿ

| Published : Jul 12 2024, 01:41 AM IST

ಚಿಕ್ಕಬೋಗನಹಳ್ಳಿ ಡೇರಿಗೆ ರಮ್ಯ ಹೊಸ ಸಾರಥಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ತಾಲೂಕಿನ ಚಿನಕುರಳಿ ಹೋಬಳಿಯ ಚಿಕ್ಕಬೋಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರಮ್ಯ ಹಾಗೂ ಉಪಾಧ್ಯಕ್ಷರಾಗಿ ಪ್ರೇಮಲತಾ, ನಿರ್ದೇಶಕರಾಗಿ ಗಿರಿಯಮ್ಮ, ಗೀತಮ್ಮ, ಕುಮಾರಿ, ಯಶೋದಮ್ಮ, ರಮ್ಯ, ಭಾಗ್ಯಮ್ಮ, ಗೀತಾ, ಯಶೋದಮ್ಮ ಅವರುಗಳು ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿ ಹೋಬಳಿಯ ಚಿಕ್ಕಬೋಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರಮ್ಯ ಹಾಗೂ ಉಪಾಧ್ಯಕ್ಷರಾಗಿ ಪ್ರೇಮಲತಾ ಆಯ್ಕೆಯಾದರು.

ನಿರ್ದೇಶಕರಾಗಿ ಗಿರಿಯಮ್ಮ, ಗೀತಮ್ಮ, ಕುಮಾರಿ, ಯಶೋದಮ್ಮ, ರಮ್ಯ, ಭಾಗ್ಯಮ್ಮ, ಗೀತಾ, ಯಶೋದಮ್ಮ ಅವರುಗಳು ಆಯ್ಕೆಯಾದರು.

ನೂತನ ಅಧ್ಯಕ್ಷೆ ರಮ್ಯ ಹಾಗೂ ಉಪಾಧ್ಯಕ್ಷೆ ಪ್ರೇಮಲತಾ ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರ ಸಲಹೆ, ಮಾರ್ಗದರ್ಶನದೊಂದಿಗೆ ಡೇರಿ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.

ಮಹಿಳಾ ಡೇರಿ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಚಿನಕುರಳಿ ಡೇರಿ ಅಧ್ಯಕ್ಷ ಸಿ.ಶಿವಕುಮಾರ್, ತಾಪಂ ಮಾಜಿ ಸದಸ್ಯ ಸಿ.ಎಸ್.ಗೋಪಾಲಗೌಡ, ಮುಖಂಡ ಕಾಳೇಗೌಡ, ಗ್ರಾಮದ ಯಜಮಾನರಾದ ಗಿರಿಗೌಡ, ನರಸಿಂಹೇಗೌಡ (ದೊಡ್ಡಣ್ಣ), ಹೇಮಂತಕುಮಾರ್, ಸಿ.ದೇವರಾಜು ಹಾಗೂ ಗ್ರಾಮದ ಯುವಕರು ಅಭಿನಂದಿಸಿದರು.

ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಎಚ್.ಆರ್.ವಿಶ್ವಹಲಗೂರು: ತಾಲೂಕಿನ ವೀರಶೈವ ಸಮಾಜದ ಅಭಿವೃದ್ಧಿ ಹಾಗೂ ಗ್ರಾಮಗಳ ಸಮಸ್ಯೆ ಬಗ್ಗೆ ಗಮನ ಹರಿಸಿ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಎಚ್.ಆರ್. ವಿಶ್ವಾ ತಿಳಿಸಿದ್ದಾರೆ.ಮಳವಳ್ಳಿ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾತಾಲೂಕು ಘಟಕದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೂ ಹಾಗೂ ನಮ್ಮ ಹಿತೈಷಿಗಳಿಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.ಮುಂದಿನ ದಿನಗಳಲ್ಲಿ ಸಂಘದಲ್ಲಿ ಯಾವುದೇ ಲೋಪಗಳು ಬಾರದಂತೆ ಹಿರಿಯರ ಮಾರ್ಗದರ್ಶನ, ಸಲಹೆಗಳನ್ನು ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಎಚ್.ಆರ್.ವಿಶ್ವ ಅವರಿಗೆ ಹಲಗೂರು ಗ್ರಾಮದ ಪ್ರಮೋದ್, ಅಭಿ, ಮಂಜುನಾಥ್, ಸಿದ್ದಲಿಂಗ ಸ್ವಾಮಿ, ಶಿವಶಂಕರ, ಅಕ್ಷಯ್, ಮಳವಳ್ಳಿ ಶಿವಸ್ವಾಮಿ, ಪಿಗ್ಮಿ ಸಂಗ್ರಾಹಕ ಮಹದೇವಸ್ವಾಮಿ ಸೇರಿದಂತೆ ಇತರರು ಅಭಿನಂದನೆ ಸಲ್ಲಿಸಿದರು.ದುಷ್ಕರ್ಮಿಗಳಿಂದ ಮನೆ ಬೀರಿನಲ್ಲಿದ್ದ ಚಿನ್ನಾಭರಣ ಕಳವುಮಳವಳ್ಳಿ:ಮನೆ ಹಿಂಬಾಗಿಲು ಮುರಿದು ಬೀರುವಿನಲ್ಲಿದ್ದ ಸುಮಾರು 70 ಸಾವಿರ ರು. ಬೆಲೆಬಾಳುವ 18 ಗ್ರಾಂ ಚಿನ್ನವನ್ನು ಕಳ್ಳರು ಅಪಹರಿಸಿರುವ ಘಟನೆ ತಾಲೂಕಿನ ಶೆಟ್ಟಹಳ್ಳಿಯಲ್ಲಿ ನಡೆದಿದೆ.ಗ್ರಾಮದ ನಂದಕುಮಾರ್ ಮನೆಯ ಬೀರುವಿನಲ್ಲಿದ್ದ 8 ಮತ್ತು 6 ಗ್ರಾಂ ಚಿನ್ನದ ಸರ, 4 ಗ್ರಾಂ ಉಂಗುರವನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಂದಕುಮಾರ್ ಉದ್ಯೋಗ ನೀಮಿತ ಬೆಂಗಳೂರಿನಲ್ಲಿ ವಾಸವಿದ್ದು, ವಾರಕ್ಕೆ ಒಂದು ಬಾರಿ ಊರಿಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು ಕಳೆದ ರಾತ್ರಿ ಮನೆ ಹಿಂಬಾಗಿಲನ್ನು ಮುರಿದು ಕಳ್ಳತನ ಮಾಡಿದ್ದಾರೆಂದು ತಿಳಿದು ಬಂದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.