ಡಿಸಿ ಸಮ್ಮುಖದಲ್ಲಿ ಮತಯಂತ್ರಗಳ ರ್‍ಯಾಂಡಮೈಜೇಶನ್‌

| Published : Apr 29 2024, 01:41 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕ್ಷೇತ್ರವಾರು ಮತಗಟ್ಟೆಗಳಿಗೆ ಹೋಗುವ ಮತಯಂತ್ರಗಳ ಎರಡನೇ ಹಂತದ ರ್‍ಯಾಂಡಮೈಜೇಶನ್ ಪ್ರಕ್ರಿಯೆ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಅಧ್ಯಕ್ಷತೆಯಲ್ಲಿ ಹಾಗೂ ಸಾಮಾನ್ಯ ವೀಕ್ಷಕ ಸರವಣ ವೆಲ್ರಾಜ್ ಸಮ್ಮುಖದಲ್ಲಿ ಭಾನುವಾರ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ:

ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕ್ಷೇತ್ರವಾರು ಮತಗಟ್ಟೆಗಳಿಗೆ ಹೋಗುವ ಮತಯಂತ್ರಗಳ ಎರಡನೇ ಹಂತದ ರ್‍ಯಾಂಡಮೈಜೇಶನ್ ಪ್ರಕ್ರಿಯೆ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಅಧ್ಯಕ್ಷತೆಯಲ್ಲಿ ಹಾಗೂ ಸಾಮಾನ್ಯ ವೀಕ್ಷಕ ಸರವಣ ವೆಲ್ರಾಜ್ ಸಮ್ಮುಖದಲ್ಲಿ ಭಾನುವಾರ ನಡೆಸಲಾಯಿತು.

ಈ ವೇಳೆ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ, ಮತಗಟ್ಟೆಗೆ ಹೋಗುವ ಮತಯಂತ್ರಗಳ ಕ್ಯಾಂಡಿಡೇಟ್ ಸೆಟ್ಟಿಂಗ್ ಪ್ರಕ್ರಿಯೆ ಆಯಾ ಮತಕ್ಷೇತ್ರಗಳಲ್ಲಿ ಏ.28ರಂದು ಬೆಳಗ್ಗೆ 7 ಗಂಟೆಗೆ ಪ್ರಾರಂಭಿಸಲಾಗುತ್ತಿದೆ. ಮತಕ್ಷೇತ್ರಗಳ ಕ್ಯಾಂಡಿಡೇಟ್‌ ಸೆಟ್ಟಿಂಗ್‌ ಪ್ರಕ್ರಿಯೆಯನ್ನು ವೀಕ್ಷಣೆ ಮಾಡಬಹುದಾಗಿದೆ ಎಂದು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು.

ಕ್ಯಾಂಡಿಡೇಟ್ ಸೆಟ್ಟಿಂಗ್ ಪ್ರಕ್ರಿಯೆ ಮುಧೋಳ ತಹಸೀಲ್ದಾರ್‌ ಕಾರ್ಯಾಲಯ, ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಕಲಾ ಮತ್ತು ವಾಣಿಜ್ಯ ಕಾಲೇಜು, ಜಮಖಂಡಿಯ ತಹಸೀಲ್ದಾರ್‌ ಕಾರ್ಯಾಲಯ, ಬೀಳಗಿಯ ಸಿದ್ದೇಶ್ವರ ಸಂಯುಕ್ತ ಪಿ.ಯು ಕಾಲೇಜು, ಬಾದಾಮಿಯ ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆ, ಬಾಗಲಕೋಟೆಯ ನವನಗರದ ಸೆಕ್ಟರ್‌ ನಂ.43ರಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುನಗುಂದದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ಹಾಗೂ ನರಗುಂದದ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಪ್ರಕ್ರಿಯೆಯಲ್ಲಿ ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಎನ್ಐಸಿಯ ಗಿರಿಯಾಚಾರ, ಚುನಾವಣೆ ತಹಸೀಲ್ದಾರ್‌ ಪಂಪಯ್ಯ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.