ಇಲ್ಲಿನ ರಂಗಚೌಕಿ ಕಲಾ ಟ್ರಸ್ಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮದಡಿಯಲ್ಲಿ ರಂಗಚೌಕಿಯ 6 ವರ್ಷದ ವಾರ್ಷಿಕೋತ್ಸವ ಸಮಾರಂಭ ಮತ್ತು ರಂಗಚೌಕಿ ನಾಟಕೋತ್ಸವವು ಸ್ಥಳೀಯ ದುರ್ಗಾದಾಸ್‌ ಕಲಾ ಮಂದಿರದಲ್ಲಿ ಸೆ. 20 ಮತ್ತು 21ರಂದು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಇಲ್ಲಿನ ರಂಗಚೌಕಿ ಕಲಾ ಟ್ರಸ್ಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮದಡಿಯಲ್ಲಿ ರಂಗಚೌಕಿಯ 6 ವರ್ಷದ ವಾರ್ಷಿಕೋತ್ಸವ ಸಮಾರಂಭ ಮತ್ತು ರಂಗಚೌಕಿ ನಾಟಕೋತ್ಸವವು ಸ್ಥಳೀಯ ದುರ್ಗಾದಾಸ್‌ ಕಲಾ ಮಂದಿರದಲ್ಲಿ ಸೆ. 20 ಮತ್ತು 21ರಂದು ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಸರದಾರ್‌ ಬಿ. ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20ರಂದು ಸಂಜೆ 7 ಗಂಟೆಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ. ಶಿವಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಅಧ್ಯಕ್ಷತೆ ವಹಿಸುವರು.

ಪಪಂ ಅಧ್ಯಕ್ಷ ಆದಿಮನಿ ಹುಸೇನ್‌ ಭಾಷ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಹಿರಿಯ ರಂಗಕಲಾವಿದೆ ಡಾ. ಕೆ. ನಾಗರತ್ನಮ್ಮ, ಪಪಂ ಉಪಾಧ್ಯಕ್ಷೆ ಲಕ್ಷ್ಮೀ ಆರ್‌. ಮಂಜುನಾಥ ಇತರರು ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭ ಮೂವರು ಸಾಧಕರಾದ ಗುಡಿಮನಿ ಕರಿಯಪ್ಪ ಅವರಿಗೆ ಗದ್ದರ್‌ ಪ್ರಶಸ್ತಿ, ಸಣ್ಣ ಮಾರೆಪ್ಪ ಬುಡ್ಗಜಂಮ ಅವರಿಗ ಅಲೆಮಾರಿ ಜೀವನಾಡಿ ಪ್ರಶಸ್ತಿ, ಎಸ್‌. ರೇಣುಕ ಅವರಿಗೆ ಮುದೇನೂರು ಸಂಗಣ್ಣ ಕಲಾರತ್ನ ಪ್ರಶಸ್ತಿಯನ್ನು ನೀಡಿ ಗೌರವರಿಸಲಾಗುವುದು ಎಂದು ಹೇಳಿದರು.

ಸೆ. 21ರ ಸಂಜೆ 7 ಗಂಟೆಗೆ ಸಮಾರೋಪದಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ. ಕೆ. ನಾಗರತ್ನಮ್ಮ ಭಾಷಣ ಮಾಡುವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಅಧ್ಯಕ್ಷತೆ ವಹಿಸುವರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ.ಎಂ.ಎಸ್‌. ಪ್ರಭು, ಮೈಸೂರಿನ ನಾಟಕಕಾರ ಗಣೇಶ ಅಮೀನಗಡ, ವಿ.ಪ್ರಾ.ಗ್ರಾ.ಕೃ.ಸ.ಸಂಘ ನಿಯಮಿತ ಅಧ್ಯಕ್ಷ ಬಿ. ವಿಜಯಕುಮಾರ, ಹಿರಿಯ ರಂಗಕರ್ಮಿ ಮ.ಬ. ಸೋಮಣ್ಣ, ಲಲಿತಕಲಾ ರಂಗ ಅಧ್ಯಕ್ಷ ಎಚ್‌. ಮಂಜುನಾಥ, ಪಪಂ ಸದಸ್ಯ ಬೆಣಕಲ್‌ ಭಾಷ, ರಂಗಚೌಕಿ ಕಲಾ ಟ್ರಸ್ಟ್ ನ ಕಾರ್ಯದರ್ಶಿ ಪುಷ್ಪ ಪಿ., ಸಂಗೀತ ಶಿಕ್ಷಕಿ ಪಲ್ಲವಿ ಆರ್‌. ಭಟ್‌, ನಿವೃತ್ತ ಶಿಕ್ಷಕ ಬಿ.ಎಂ.ಎಸ್‌. ಮೃತ್ಯುಂಜಯ, ಆರೋಗ್ಯ ನಿರೀಕ್ಷಣಾಧಿಕಾರಿ ಜಿ. ಸೋಮಶೇಖರ್‌ ಮುಖ್ಯಅತಿಥಿಗಳಾಗಿ ಭಾಗವಹಿಸುವರು ಎಂದರು.

ರಂಗಚೌಕಿ ಕಲಾ ಟ್ರಸ್ಟ್‌ನ ಕಾರ್ಯದರ್ಶಿ ಪುಷ್ಪ ಪಿ., ರಂಗನಿರ್ದೇಶಕ ಬಿ.ಎಂ. ಯೋಗೇಶ್‌ ಸುದ್ದಿಗೋಷ್ಠಿಯಲ್ಲಿದ್ದರು. ಇದೇ ವೇಳೆ ನಾಟಕೋತ್ಸವದ ಕರಪತ್ರ ಬಿಡುಗಡೆಗೊಳಿಸಲಾಯಿತು.