ರಂಗಭೂಮಿಯ ಮೂಲ ಬೇರುಗಳನ್ನು ಉಳಿಸಿಕೊಳ್ಳಬೇಕು

| Published : Mar 05 2025, 12:31 AM IST

ಸಾರಾಂಶ

, ಬೇರು ಉಳಿಸಿಕೊಳ್ಳುವುದೆಂದರೆ ಒಂದು ಪರಂಪರೆಯನ್ನು ಉಳಿಸಿದಂತೆ

ಕನ್ನಡಪ್ರಭ ವಾರ್ತೆ ಮೈಸೂರು

ರಂಗಭೂಮಿಯ ಮೂಲ ಬೇರುಗಳನ್ನು ಉಳಿಸಿಕೊಳ್ಳಬೇಕು ಎಂದು ಹಿರಿಯ ರಂಗಕರ್ಮಿ ಪ್ರೊ.ಎಚ್.ಎಸ್. ಉಮೇಶ್ ತಿಳಿಸಿದರು.ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಾದರಂಗ ಸೋಮವಾರದಿಂದ ಆಯೋಜಿಸಿರುವ 3 ದಿನಗಳ ರಂಗಸಂಭ್ರಮ ನಾಟಕೋತ್ಸವ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಬೇರು ಉಳಿಸಿಕೊಳ್ಳುವುದೆಂದರೆ ಒಂದು ಪರಂಪರೆಯನ್ನು ಉಳಿಸಿದಂತೆ ಎಂದು ಹೇಳಿದರು.ರಂಗಭೂಮಿ ವಿಶೇಷವಾಗಿ ಬೆಳೆಯುತ್ತಿದೆ, ಬದಲಾಗುತ್ತಿದೆ, ಹೊಸತು- ಬದಲಾವಣೆ ಕೊಂಚ ಕಡಿಮೆಯಾದರೂ ಅಡ್ಡಿಯಿಲ್ಲ. ಮೂಲ ಉಳಿಯಲಿ. ಮೈಸೂರು ಇಂತಹ ಹೊಸತು, ಹಳತುಗಳ ಮಿಶ್ರಣವಾಗಿದೆ. ಇಲ್ಲಿನ ರಂಗಭೂಮಿ‌ಕ್ಷೇತ್ರದಲ್ಲಿ ಅದನ್ನು ಕಾಣಬಹುದು ಎಂದರು. ಈ ನಾಟಕೋತ್ಸವವನ್ನು ರಾಜೇಶ್ವರಿ ವಸ್ತ್ರಾಲಂಕಾರ ಮಾಲೀಕ ಬಿ.ಎಂ. ರಾಮಚಂದ್ರ ಅವರು ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿದರು.ನಂತರ ಸಾಹಿತಿ ‌ಕೋ. ಚೆನ್ನಬಸಪ್ಪ ಅವರ ಅಯ್ಯನಕೆರೆ ಜಾನಪದ ನಾಟಕವು ಎನ್. ಧನಂಜಯ ಅವರ ನಿರ್ದೇಶನದಲ್ಲಿ ಮೈಸೂರಿನ ಶ್ರೀ ಗುರುಕಲಾ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದರು.ಕದಂಬ ರಂಗವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ, ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ, ನಾದರಂಗ ಸಂಸ್ಥೆಯ ಡಿ. ನಾಗೇಂದ್ರಕುಮಾರ್ ಮೊದಲಾದವರು ಇದ್ದರು.