ಜ.29 ಮತ್ತು 30 ರಂದು ರಂಗಬಂಡಿ ಮಕ್ಕಳ ನಾಟಕೋತ್ಸವ: ಮಧು ಮಳವಳ್ಳಿ

| Published : Jan 28 2025, 12:46 AM IST

ಸಾರಾಂಶ

ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಅಳಿಲು ರಾಮಾಯಣ ನಾಟಕವನ್ನು ಅಮೃತೇಶ್ವರನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ. ಮಾದಹಳ್ಳಿ ಸರ್ಕಾರಿ ಶಾಲೆ ಮಕ್ಕಳು ಕೋಟಿಗನಹಳ್ಳಿ ರಾಮಯ್ಯನವರ ಕಿಚ್ಚ್ ಕಿಚ್ ಇಲಿ ಮತ್ತು ವ್ಯಾನಿಟಿ ಬ್ಯಾಗ್ ನಾಟಕ ಅಭಿನಯಿಸಲಿದ್ದಾರೆ.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜ.29 ಮತ್ತು 30ರಂದು ರಂಗಬಂಡಿ ಮಕ್ಕಳ ನಾಟಕೋತ್ಸವ ನಡೆಯಲಿದೆ ಎಂದು ರಂಗ ಬಂಡಿ ಟ್ರಸ್ಟ್ ಅಧ್ಯಕ್ಷ ಮಧು ಮಳವಳ್ಳಿ ತಿಳಿಸಿದರು.

ಪಟ್ಟಣದ ವಿಶ್ವ ಮಾನವ ವಿಚಾರ ವೇದಿಕೆ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ನಾಟಕ ಅಕಾಡಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಂಗ ಬಂಡಿ ಟ್ರಸ್ಟ್ ವತಿಯಿಂದ ಆಯೋಜಿಸಿರುವ ನಾಟಕೋತ್ಸವದಲ್ಲಿ ಮಕ್ಕಳಲ್ಲಿ ಕಲೆ, ಅಭಿರುಚಿ ಬೆಳೆಸಲು ಹಾಗೂ ಗ್ರಹಿಕೆ, ಬದ್ಧತೆ, ಓದಿನ ಕ್ರಮ ತಿಳಿಸುವ ಉದ್ದೇಶ ಹೊಂದಲಾಗಿದೆ ಎಂದರು.ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಅಳಿಲು ರಾಮಾಯಣ ನಾಟಕವನ್ನು ಅಮೃತೇಶ್ವರನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ. ಮಾದಹಳ್ಳಿ ಸರ್ಕಾರಿ ಶಾಲೆ ಮಕ್ಕಳು ಕೋಟಿಗನಹಳ್ಳಿ ರಾಮಯ್ಯನವರ ಕಿಚ್ಚ್ ಕಿಚ್ ಇಲಿ ಮತ್ತು ವ್ಯಾನಿಟಿ ಬ್ಯಾಗ್ ನಾಟಕ ಅಭಿನಯಿಸಲಿದ್ದಾರೆ ಎಂದರು.

ಜ.29ರ ಸಂಜೆ 5 ಗಂಟೆಗೆ ನಡೆಯುವ ನಾಟಕೋತ್ಸವವನ್ನು ರಂಗಕರ್ಮಿ ಶಶಿಧರ ಭಾರಿಘಾಟ್ ಉದ್ಘಾಟಿಸುವರು. ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ಕ್ಷೇತ್ರ ಸಮಾನ್ವಯಾಧಿಕಾರಿ ಶ್ರೀನಿವಾಸ್, ರಾಮಕೃಷ್ಣ, ಪ್ರಕಾಶ್, ಗುರುಪ್ರಸಾದ್, ಶಿವಕುಮಾರ್, ಪುಟ್ಟರಾಜ್, ಮರಿಸ್ವಾಮಿ, ಜಯಮ್ಮ ಭಾಗ್ಯಮ್ಮ, ಸ್ವಾಮಿ, ಪುಷ್ಪಲತಾ, ಮಹದೇವು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

ಜ.30ರಂದು ಹಿರಿಯ ರಂಗಭೂಮಿ ನಿರ್ದೇಶಕ ಎಚ್.ಜನಾರ್ಧನ್ ( ಜೆನ್ನಿ) ಸಮಾರೋಪ ಭಾಷಣ ಮಾಡುವರು. ರಂಗಶಿಕ್ಷಕ ಮಧುಕರ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಸಂತೋಷ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಡಾ.ಬಿ.ಆರ್ ನಂದೀಶ್, ಮುಖಂಡರಾದ ಬಿ.ಮಹಾದೇವು, ಎಚ್.ಪಿ.ರಮೇಶ್, ಜವರೇಗೌಡ, ಚಿತ್ರ, ವಿನಯ್ ಕುಮಾರ್, ಮಮತ, ರವಿ, ಮಧುಕರ್, ಸಂತೋಷಕುಮಾರ್, ಶ್ರೀನಿವಾಸ್, ಸಿದ್ದಯ್ಯ, ಲಿಂಗರಾಜ್, ಸಿಪಿ ರಾಜು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಮಾನವ ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್, ಮುಖ್ಯ ಶಿಕ್ಷಕಿ ಮಮತ, ಶಂಕರೇಗೌಡ, ರವಿ, ಮಹಾದೇವಪ್ಪ, ಇದ್ದರು.