ಸಾರಾಂಶ
ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಭಾಗಗಳ ಸಹಭಾಗಿತ್ವದಲ್ಲಿ ‘ರಾಣಿ ಅಬ್ಬಕ್ಕ @ ೫೦೦ : ಪ್ರೇರಣಾದಾಯಿ ಉಪನ್ಯಾಸಗಳ ಸರಣಿ ಎಸಳು -೨೨’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಪು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಭಾಗಗಳ ಸಹಭಾಗಿತ್ವದಲ್ಲಿ ‘ರಾಣಿ ಅಬ್ಬಕ್ಕ @ ೫೦೦ : ಪ್ರೇರಣಾದಾಯಿ ಉಪನ್ಯಾಸಗಳ ಸರಣಿ ಎಸಳು -೨೨’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿ ಕಾಪು ಮಾಜಿ ಶಾಸಕ ಲಾಲಾಜಿ ಆರ್, ಮೆಂಡನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಗೋವಿಂದ ದಾಸ್ ಕಾಲೇಜಿನ ಉಪನ್ಯಾಸಕಿ ಅಕ್ಷ ತಾ ಶೆಟ್ಟಿ ಅವರು, ರಾಣಿ ಅಬ್ಬಕ್ಕ ಅವರು ಪೋರ್ಚುಗೀಸರ ದಾಳಿ ಧೈರ್ಯದಲ್ಲಿ ಎದುರಿಸಿ ಹೇಗೆ ಹಿಮ್ಮೆಟ್ಟಿಸಿದರು ಹಾಗೂ ೧೦ ವರ್ಷಗಳ ಕಾಲ ರಾಣಿ ಅಬ್ಬಕ್ಕನಿಗೆ ಹೆದರಿ ಪೋರ್ಚುಗೀಸರು ಉಳ್ಳಾಲದ ಕಡೆ ತಲೆ ಹಾಕಲಿಲ್ಲ. ಒಬ್ಬ ಮಹಿಳೆಯಾಗಿ, ವೀರ ವನಿತೆಯಾಗಿ, ಹೇಗೆ ಯುದ್ಧ ಮಾಡಿ ವಿದೇಶಿಯರನ್ನು ಹೊಡದೋಡಿಸಿದರು ಎಂದು ಅವರ ಜೀವನ ಚರಿತ್ರೆಯನ್ನು ಸರಳವಾಗಿ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಗೋಪಾಲಕ್ರಷ್ಣ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆ ಸಂಯೋಜಕಿ ಯಶೋದಾ ಸ್ವಾಗತಿಸಿದರು. ಕೆ.ಆರ್.ಎಂ.ಎಸ್.ನ ಉಡುಪಿ ವಿಭಾಗದ ಸಂಘಟಕ ಯಶವಂತ್ ಕುದ್ರೋಳಿ ಅವರು ವಿಭಾಗದ ಬಗ್ಗೆ, ಅವರ ಅನೇಕ ವಿನೂತನ ಕಾರ್ಯಕ್ರಮದ ಬಗ್ಗೆ ತಿಳಿಸಿದರು.ವಿದ್ಯಾರ್ಥಿನಿ ಜಾಹ್ನವಿ ಪ್ರಾರ್ಥಿಸಿದರು, ತೃತೀಯ ಬಿ.ಎ.ವಿದ್ಯಾರ್ಥೀನಿ ಮನೀಷಾ ನಿರೂಪಿಸಿದರು. ಮಹಿಳಾ ವೇದಿಕೆಯ ಮುಖ್ಯ ಕಾರ್ಯದರ್ಶಿ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಅನುಷಾ ವಂದಿಸಿದರು.