ಸಾರಾಂಶ
ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದ ಬಳಿಯ ರಾಣಿ ಚನ್ನಮ್ಮ ನಾಟಕ ರಂಗ ಮಂದಿರವನ್ನು ಜೀರ್ಣೋದ್ಧಾರಗೊಳಿಸಿ, ನಾಟಕಗಳನ್ನು ಪ್ರದರ್ಶನಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದ ಬಳಿಯ ರಾಣಿ ಚನ್ನಮ್ಮ ನಾಟಕ ರಂಗ ಮಂದಿರವನ್ನು ಜೀರ್ಣೋದ್ಧಾರಗೊಳಿಸಿ, ನಾಟಕಗಳನ್ನು ಪ್ರದರ್ಶನಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜೊತೆಗೆ ನಗರ ವ್ಯಾಪ್ತಿಯಲ್ಲಿ ಬರುವ ಬಸವನಗರ (ಗುನ್ನಾಪೂರ ರಸ್ತೆ) ದಲ್ಲಿ ನಿರ್ಗತಿಕ ಕುಟುಂಬಗಳು ಹಾಗೂ ಕಡು ಬಡವರು ವಾಸ ಮಾಡುತಿದ್ದು, 15 ವರ್ಷಗಳಿಂದ ಖಾಯಂ ಆಗಿ ವಾಸ ಮಾಡುತ್ತಿದ್ದಾರೆ. ಆದರು ಕೂಡ ಸರ್ಕಾರದಿಂದ ಅವರಿಗೆ ಯಾವುದೇ ಹಕ್ಕು ಪತ್ರ ಸಿಕ್ಕಿಲ್ಲ. ಆದ್ದರಿಂದ ಈ ಸ್ಥಳಗಳನ್ನು ಖುದ್ದಾಗಿ ಪರಿಶೀಲನೆ ಮಾಡಿ ಅನ್ಯಾಯವನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕರವೇ ಸ್ವಾಭಿಮಾನಿ ಬಣದ ಉತ್ತರ ಕರ್ನಾಟಕ ಅಧ್ಯಕ್ಷ ಲಕ್ಷ್ಮಣ ಕಂಬಾಗಿ, ಜಿಲ್ಲಾಧ್ಯಕ್ಷ ಜಗದೇವ ಸೂರ್ಯವಂಶಿ, ಜಿಲ್ಲಾ ಉಪಾಧ್ಯಕ್ಷ ಗಿರೀಶ ಕಲಘಟಗಿ, ಬಬಲೇಶ್ವರ ತಾಲೂಕ ಅಧ್ಯಕ್ಷ ಮಲ್ಲಯ್ಯ ಮಠಪತಿ ಹಾಗೂ ವಿಜಯಪುರ ನಗರ ಘಟಕದ ಮಹಿಳಾ ಅಧ್ಯಕ್ಷೆ ಜಯಶ್ರಿ ನನ್ನಮ ಇದ್ದರು.