ಕಿತ್ತೂರು ಉತ್ಸವದ ಮಾದರಿಯಂತೆ ಇಲ್ಲಿಯೂ ಕೂಡ ರಾಣಿ ಚೆನ್ನಮ್ಮಜೀ ಜಯಂತಿ ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಣೆಗೆ ಶಾಸಕರು ಮುಂದಾಗಬೇಕು

ಕೂಡ್ಲಿಗಿ: ಅಪ್ಪಟ ದೇಶ ಭಕ್ತೆ, ಧೈರ್ಯ, ಸ್ವಾಭಿಮಾನಿ, ಸಾಹಸಿ ರಾಣಿ ಚೆನ್ನಮ್ಮ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಬೇಕು ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕಾಡಳಿತ, ತಾಲೂಕು ಪಂಚಮಸಾಲಿ ಸಮಾಜದಿಂದ ಏರ್ಪಡಿಸಿದ್ದ ವೀರ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಐದು ನೂರು ವರ್ಷಗಳ ಹಿಂದೆ ಮಹಿಳೆಯರಿಗೆ ಅಡುಗೆ ಮನೆಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ ಅದನ್ನು ಮೆಟ್ಟಿ ತಾಯ್ನಾಡಿನ ಸೇವೆಗೆ ಸಿದ್ಧವಾದಳು ಚೆನ್ನಮ್ಮ, ಅವಳ ಸಾಹಸ,ಸ್ವಾಭಿಮಾನ ಇಂದಿನ ಮಹಿಳೆಯರಲ್ಲಿ ಪ್ರೇರಣೆಯಾಗಬೇಕು ಎಂದು ತಿಳಿಸಿದರು.

ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಹೊಂಬಾಳೆ ರೇವಣ್ಣ ಮಾತನಾಡಿ, ಕೂಡ್ಲಿಗಿ ತಾಲೂಕಿನಲ್ಲಿ ಅತೀ ಹೆಚ್ಚು ಲಿಂಗಾಯತ ಸಮಾಜದ ಬಂಧುಗಳು ಇದ್ದು, ಕಿತ್ತೂರು ಉತ್ಸವದ ಮಾದರಿಯಂತೆ ಇಲ್ಲಿಯೂ ಕೂಡ ರಾಣಿ ಚೆನ್ನಮ್ಮಜೀ ಜಯಂತಿ ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಣೆಗೆ ಶಾಸಕರು ಮುಂದಾಗಬೇಕು, ಇದು ಸರ್ಕಾರಿ ಉತ್ಸವ ಆಗಬೇಕು ಎಂದು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಹೊಸಹಳ್ಳಿ ಹೋಬಳಿಯಲ್ಲಿ ಅದ್ಧೂರಿ ಆಚರಣೆಗೆ ತಾಲೂಕಾಡಳಿತದ ಜತೆ ಪಂಚಮಸಾಲಿ ಸಮಾಜ ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಕೊಡಬೇಕು ಎಂದು ತಹಸೀಲ್ದಾರ್ ಗೆ ಮನವಿ ಮಾಡಿದರು.

ರೈತ ಸಂಘದ ದೇವರಮನೆ ಮಹೇಶ್, ನಿವೃತ್ತ ಶಿಕ್ಷಕ ಕೆ. ನಾಗನ ಗೌಡ ಚೆನ್ನಮಾಜೀ ಕುರಿತು ಮಾತನಾಡಿದರು.

ಇದಕ್ಕೂ ಮೊದಲು ಪಟ್ಟಣದ ಕೊಟ್ಟೂರು ರಸ್ತೆಯಲ್ಲಿನ ವೀರರಾಣಿ ಚೆನ್ನಮ್ಮ ವೃತ್ತಕ್ಕೆ ಸಮಾಜದ ಬಂಧುಗಳು ಪೂಜೆ ಸಲ್ಲಿಸಿದರು. ಗ್ರೇಡ್ 2 ತಹಸೀಲ್ದಾರ್ ಎಚ್.ರಾಮಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎಸ್. ವೆಂಕಟೇಶ, ಖಾನವಳಿ ಕೊಟ್ರೇಶ್, ಗುಳಿಗಿ ವೀರೇಂದ್ರ, ಟಿ.ಜಿ. ಮಲ್ಲಿಕಾರ್ಜುನ ಗೌಡ, ಬಣವಿಕಲ್ಲು ಯರಿಸ್ವಾಮಿ, ಹಿರೇಕುಂಬಳಗುಂಟೆ ಉಮೇಶ್, ಎಂ.ಶಿವಣ್ಣ, ಮರುಳಸಿದ್ದಪ್ಪ, ಸುನೀಲ್ ಗೌಡ, ಬಣವಿಕಲ್ಲು ಮಂಜುನಾಥ, ಅಮಲಾಪುರ ಕೊಟ್ರೇಶ್, ಶರಣಪ್ಪ, ಮಂಜುನಾಥ, ಜೆ. ನಾಗೇಶ್, ತುಪ್ಪಳ್ಳಿ ಕೊಟ್ರೇಶ್, ಕೆ.ಎಸ್. ವೀರೇಶ್, ಸಿದ್ದರಾಧ್ಯ, ನಂದಿ ಬಸವರಾಜ, ಬಸಪ್ಪ, ಲಕ್ಷ್ಮೀದೇವಿ, ಎಂ.ಎಸ್, ಅಜೇಯ್, ಪುನೀತ್, ಬ್ಯಾಳಿ ಶಿವಪ್ರಸಾದ್, ಬಣಕಾರ ಮೂಗಪ್ಪ, ಕೊಟ್ರೇಶ್ ಸೇರಿದಂತೆ ಅನೇಕರು ಇದ್ದರು.