ಸಾರಾಂಶ
ಸಂಡೂರು: ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಘಟಕದಿಂದ ಡಿ.೧೫ರಂದು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರ ರಾಣಿ ಚೆನ್ನಮ್ಮ ಜಯಂತಿ, ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಬಿ.ನಾಗನಗೌಡ ತಿಳಿಸಿದರು.
ಸಮಾರಂಭದ ಪ್ರಯುಕ್ತ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ರಾಣಿ ಚೆನ್ನಮ್ಮ ಜಯಂತಿಯನ್ನು ನ.೨೩ರಂದು ಆಚರಿಸಬೇಕಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಸಮಾಜದ ಸದಸ್ಯರ ಒಮ್ಮತದ ನಿರ್ಣಯದಂತೆ ಮುಂದೂಡಲಾಗಿತ್ತು. ಡಿ.೧೫ರಂದು ಬೆಳಿಗ್ಗೆ ೮ ಗಂಟೆಯಿಂದ ಚೆನ್ನಮ್ಮ ಭಾವಚಿತ್ರದ ಮೆರವಣಿಗೆ ಹೊಸಪೇಟೆ ರಸ್ತೆಯ ಹುಲಿಗೆಮ್ಮ ದೇವಸ್ಥಾನದಿಂದ ಆರಂಭವಾಗುತ್ತದೆ. ಮೆರವಣಿಗೆಗೆ ಕ್ಷೇತದ ಶಾಸಕಿ ಅನ್ನಪೂರ್ಣ ತುಕಾರಾಂ ಚಾಲನೆ ನೀಡುವರು.
೩೦೦ ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಕಲಾತಂಡಗಳು, ಭಜನಾ ತಂಡಗಳು ಭಾಗವಹಿಸಲಿವೆ ಎಂದರು.ಸಂಘದ ತಾಲೂಕು ಘಟಕದ ಅಧ್ಯಕ್ಷ ಗಡಾದ ರಮೇಶ್ ಮಾತನಾಡಿ, ಕಾರ್ಯಕ್ರಮದ ಸಾನಿಧ್ಯವನ್ನು ಸಂಡೂರು ವಿರಕ್ತಮಠದ ಪ್ರಭು ಶ್ರೀ ವಹಿಸುವರು. ಕಾರ್ಯಕ್ರಮವನ್ನು ಶಾಸಕಿ ಅನ್ನಪೂರ್ಣ ತುಕಾರಾಂ ನೆರವೇರಿಸುವರು. ವಿಶೇಷ ಅತಿಥಿಗಳಾಗಿ ನಿಕಟಪೂರ್ವ ರಾಜ್ಯಾಧ್ಯಕ್ಷ ಬಿ.ನಾಗನಗೌಡ, ಜಿಲ್ಲಾಧ್ಯಕ್ಷ ಬೊಪ್ಪಕಾನ್ ಕುಮಾರಸ್ವಾಮಿ ಭಾಗವಹಿಸುವರು. ತಹಶೀಲ್ದಾರ್ ಅನಿಲ್ ಕುಮಾರ್, ವೃತ್ತ ನಿರೀಕ್ಷಕರಾದ ಬಿ. ಮಹೆಶಗೌಡ, ಮೇಲುಸೀಮೆ ಶಂಕ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಅರುಂಧತಿ ಅಗಮಿಸುವರು. ಅಧ್ಯಕ್ಷತೆಯನ್ನು ರಮೇಶ್ ಗಡಾದ ವಹಿಸುವರು ಎಂದರು.
ಸಭೆಯಲ್ಲಿ ಮೇಲುಸೀಮೆ ಶಂಕ್ರಪ್ಪ, ಗಡಂಬ್ಲಿ ಚನ್ನಪ್ಪ, ನಾಗರಾಜ ತಾಳೂರು, ಮೇಘನಾಥ, ಮಹೇಶ್ ಬನ್ನಿಹಟ್ಟಿ, ಗೌರಣ್ಣ ತಾಳೂರು, ಸಕ್ರಪ್ಪ, ಮಂಜುನಾಥ, ಶೇಖರಿ, ತಡಾಳ್ ಮಹೇಶ್, ವೀರೇಶ್, ಷಣ್ಮುಖಪ್ಪ, ಬಂಡ್ರಿನಿಂಗಪ್ಪ, ಬಸವರಾಜ ಬಂಡ್ರಿ, ವಿಶಾಲಾಕ್ಷಿ, ನೀಲಾಂಬಿಕೆ ಮತ್ತಿತರರಿದ್ದರು.ಸಂಡೂರಿನಲ್ಲಿ ಚೆನ್ನಮ್ಮ ಜಯಂತಿ ಪೂರ್ವಭಾವಿ ಸಭೆಯಲ್ಲಿ ಬೊಪ್ಪಕಾನ್ ಕುಮಾರಸ್ವಾಮಿ ಮಾತನಾಡಿದರು.