ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ

| Published : Nov 21 2023, 12:45 AM IST

ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ವೀರಶೈವ ಪಂಚಾಚಾರ್ಯ ವಿದ್ಯಾವರ್ಧಕ ಹಾಗೂ ಸಾಂಸ್ಕೃತಿಕ ಸಂಘ ಹಾಗೂ ಪಂಚಮಸಾಲಿ ವಿವಿಧ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಮುಂಡರಗಿಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ 200ನೇ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಚೆನ್ನಮ್ಮಾಜಿಯ ನೂತನ ಪುತ್ಥಳಿ ಮೆರವಣಿಗೆಗೆ ಡಾ. ಅನ್ನದಾನೀಶ್ವರ ಸ್ವಾಮೀಜಿ ಚಾಲನೆ ನೀಡಿದರು.

ಚೆನ್ನಮ್ಮಾಜಿಯ ನೂತನ ಪುತ್ಥಳಿ ಮೆರವಣಿಗೆಗೆ ಅನ್ನದಾನೀಶ್ವರ ಶ್ರೀ ಚಾಲನೆಮುಂಡರಗಿ: ಇಡೀ ದೇಶಕ್ಕೆ ತನ್ನ ವೀರ ತನವನ್ನು ತೋರಿಸಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಧೀರ ಮತ್ತು ದಿಟ್ಟ ಮಹಿಳೆ ಎಂದರೆ ಅದು ಕಿತ್ತೂರು ರಾಣಿ ಚೆನ್ನಮ್ಮ ಎಂದು ಮುಂಡರಗಿ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು. ಅವರು ಸೋಮವಾರ ತಾಲೂಕು ವೀರಶೈವ ಪಂಚಾಚಾರ್ಯ ವಿದ್ಯಾವರ್ಧಕ ಹಾಗೂ ಸಾಂಸ್ಕೃತಿಕ ಸಂಘ ಹಾಗೂ ಪಂಚಮಸಾಲಿ ವಿವಿಧ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ 200ನೇ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಚೆನ್ನಮ್ಮಾಜಿಯ ನೂತನ ಪುತ್ಥಳಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಕಿತ್ತೂರು ರಾಣಿ ಚೆನ್ನಮ್ಮಾಜಿ ಇತಿಹಾಸವನ್ನು ತಿಳಿದುಕೊಂಡಾಗ ಬಹಳಷ್ಟು ಹೆಮ್ಮೆ ಅನಿಸುತ್ತದೆ. ಪ್ರಾರಂಭದಿಂದಲೂ ಸಹ ಅವರಲ್ಲಿ ಶೂರತನ ಇತ್ತು ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ತಮ್ಮ ಜನ್ಮಭೂಮಿಯಾದ ಕಾಕತಿಯಲ್ಲಿ ಹುಲಿಯನ್ನು ಹೊಡೆದು ಹೆಗಲ ಮೇಲೆ ಹಾಕಿಕೊಂಡು ಬಂದು ಶೌರ್ಯವನ್ನು ಮೆರೆದ ಮಹಿಳೆ ಚೆನ್ನಮ್ಮಾಜಿ ಎಂಬುದು ಇತಿಹಾಸ. ತನ್ನ ಪತಿಯ ಮರಣ ನಂತರ ಕಿತ್ತೂರಿನ ರಾಣಿಯಾಗಿ ಮಗುವನ್ನು ಹೆಗಲಿಗೆ ಕಟ್ಟಿಕೊಂಡು ಬ್ರಿಟಿಷ ವಿರುದ್ಧ ಹೋರಾಟ ಮಾಡಿ ಥ್ಯಾಕ್ರೆ ಜೊತೆಗೆ ಗೆಲುವು ಸಾಧಿಸುವ ಮೂಲಕ ವಿಜಯೋತ್ಸವ ಆಚರಿಸಿದ ಕೀರ್ತಿ ಚೆನ್ನಮ್ಮನಿಗೆ ಸಲ್ಲುತ್ತದೆ. ಅಂತಹ 200 ನೇ ವಿಜಯೋತ್ಸವದ ಕಾರ್ಯಕ್ರಮ ಇಂದು ಇಲ್ಲಿ ನಡೆಯುತ್ತಿದೆ. ಮುಂಡರಗಿ ತಾಲೂಕಿನಲ್ಲಿಯೂ ಸಹ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಂಡರಗಿ ಭೀಮರಾಯರಿದ್ದುದು ಒಂದು ವಿಶೇಷವಾಗಿದೆ. ಮುಂಡರಗಿ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದು ಹೆಮ್ಮೆ ತರುವಂತದ್ದು. ಸಮಾಜ ಬಾಂಧವರೆಲ್ಲರೂ ಸೇರಿಕೊಂಡು ಒಂದು ಸುಂದರವಾದ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದು, ಈ ಮೂರ್ತಿಯು ಪಟ್ಟಣಕ್ಕೆ ಅತ್ಯಂತ ಶೋಭೆ ತರುವಂತದ್ದಾಗಿದೆ. ಚೆನ್ನಮ್ಮಾ ಕೇವಲ ಪಂಚಮಸಾಲಿ ಸಮಾಜ ಬಾಂಧವರಿಗೆ ಮಾತ್ರವಲ್ಲದೆ ಇತರೆ ಸಮಾಜದ ಎಲ್ಲ ಸಮುದಾಯ ಬಾಂಧವರು ಅವರ ಬಗ್ಗೆ ಅಭಿಮಾನವನ್ನು ಇಟ್ಟುಕೊಳ್ಳುವುದು ಮುಖ್ಯ. ವೀರಾಣಿ ಕಿತ್ತೂರು ಚೆನ್ನಮ್ಮನ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಈ ಸಮಾಜ ಬಾಂಧವರು ಪ್ರಶಂಸೆಗೆ ಅರ್ಹರಾಗಿದ್ದಾರೆ ಎಂದರು ಶಾಸಕ ಡಾ ಚಂದ್ರು ಲಮಾಣಿ ಮಾತನಾಡಿ, ಮುಂಡರಗಿ ತಾಲೂಕಿನ ಪಂಚಮಸಾಲಿ ಸಮಾಜದ ಎಲ್ಲ ಮುಖಂಡರು ಸೇರಿಕೊಂಡು ಇಂದು ಅದ್ಭುತವಾದ ಕಾರ್ಯಕ್ರಮವನ್ನು ಸಂಘಟನೆ ಮಾಡಿದ್ದು, ಸ್ವಾತಂತ್ರ್ಯ ಭಾರತ ಹೋರಾಟದಲ್ಲಿ ತೊಡಗಿಕೊಂಡಿದ್ದ ಮೊದಲ ಮಹಿಳೆ ಕಿತ್ತೂರುರಾಣಿ ಚೆನ್ನಮ್ಮ ಥ್ಯಾಕರೆ ಅವರನ್ನು ಕೊಂದಿದ್ದಕ್ಕೆ ಇಂದು 200ನೇ ವಿಜಯೋತ್ಸವ ಆಚರಿಸಲಾಗುತ್ತಿದ್ದು, ಈಗಾಗಲೇ ಸರ್ಕಾರದಿಂದ ಕಿತ್ತೂರು ಉತ್ಸವವನ್ನು ಪ್ರಾರಂಭಿಸಿದ್ದು, ನಿರಂತರವಾಗಿ ಮೂರು ದಿನಗಳ ಕಾಲ ಅದ್ದೂರಿಯಿಂದ ಈ ಉತ್ಸವವನ್ನು ಸರ್ಕಾರವೇ ನಡೆಸುತ್ತಿದೆ. ಇಂದಿನ ಈ ಕಾರ್ಯಕ್ರಮವೂ ಸಹ ಒಂದು ಮಹತ್ತರವಾದ ಕಾರ್ಯಕ್ರಮವಾಗಿದ್ದು, ಸಮಾಜ ಬಾಂಧವರು ಹಾಗೂ ಇತರೆ ಎಲ್ಲ ಸಮಾಜದ ಗುರು-ಹಿರಿಯರ ನೇತೃತ್ವದಲ್ಲಿ ಜರುಗುತ್ತಿದ್ದು, ಕಿತ್ತೂರು ಚೆನ್ನಮ್ಮಾಜಿಯ ಸಮುದಾಯ ಭವನಕ್ಕೆ ನನ್ನ ವಯಕ್ತಿಕವಾಗಿ ಹಾಗೂ ಸರ್ಕಾರದಿಂದ ಬರುವ ಅನುದಾನದಲ್ಲಿ ಹೆಚ್ಚಿನ ರೀತಿಯ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿ, ಪಂಚಮಸಾಲಿ ಸಮಾಜದ ಜೊತೆಗೆ ತಾವು ನಿರಂತರವಾಗಿ ಇರುವುದಾಗಿ ತಿಳಿಸಿದರು.

ಹೋರಾಟಗಾರ ವೈ.ಎನ್. ಗೌಡರ ಮಾತನಾಡಿ, ಪಂಚಮಸಾಲಿ ಸಮಾಜದ ಎಲ್ಲ ಬಾಂಧವರು ಸೇರಿಕೊಂಡು ಅಧ್ಯಕ್ಷ ಎಸ್.ವಿ. ಪಾಟೀಲ ಅವರಿಗೆ ಸಹಕಾರ ನೀಡುತ್ತಾ ಇಲ್ಲೊಂದು ಅದ್ಭುತವಾದ ಚೆನ್ನಮ್ಮಾಜಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಮಹತ್ತರವಾದ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು. ಬಸವರಾಜ ದೇಸಾಯಿ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕು ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ, ಕರಬಸಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ಹೇಮಗಿರಿ ಹಾವಿನಾಳ, ಲಿಂಗರಾಜಗೌಡ ಪಾಟೀಲ, ಕೊಟ್ರೇಶ ಅಂಗಡಿ, ರಾಮುಚಂದ್ರ ಕಲಾಲ, ಅಶೋಕ ಹಂದ್ರಾಳ, ರಜನೀಕಾಂತ ದೇಸಾಯಿ, ಆರ್.ಎಲ್. ಪೊಲೀಸ್ ಪಾಟೀಲ, ಡಾ.ಅನ್ನದಾನಿ ಮೇಟಿ, ಸಿ.ಡಿ. ಪಾಟೀಲ, ಎ.ವೈ. ನವಲಗುಂದ, ಬಿ.ವಿ. ಮುದ್ದಿ, ವೀರಣ್ಣ ಕರಬಿಷ್ಠಿ. ಶರಣು ಪಾಟೀಲ, ಬಿ.ಡಿ.ಪಲ್ಲೇದ, ಬಿ‌.ಕೆ. ಪಾಟೀಲ, ಸೋಮು ಹಕ್ಕಂಡಿ, ಶಿದ್ದಲಿಂಗಪ್ಪ ದೇಸಾಯಿ, ಮಂಜುನಾಥ ಇಟಗಿ, ಮಹೇಶ ಜಂತ್ಲಿ, ಮುತ್ತು ಅಳವಂಡಿ, ವಿರೇಶ ಹಡಗಲಿ, ಮಂಜುನಾಥ ಮುಧೋಳ, ಮಲ್ಲಿಕಾರ್ಜುನ ಹಣಜಿ, ಗಂಗಾಧರ ಬಳಿಗೇರ, ಶಿವಾನಂದ ಕಮತರ, ರವೀಂದ್ರಗೌಡ ಪಾಟೀಲ, ಪ್ರಶಾಂತಗೌಡ ಗುಡದಪ್ಪನವರ, ಮಂಜುಳಾ ಇಟಗಿ, ಶೋಭಾ ಪಾಟೀಲ, ನೇತ್ರವತಿ ಭಾವೀಹಳ್ಳಿ, ಅನ್ನಪೂರ್ಣ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.