ಸಾರಾಂಶ
ಚೆನ್ನಮ್ಮನ ಹೋರಾಟದ ಆದರ್ಶ ಗುಣ ಹಾಗೂ ಆಕೆಯ ಸ್ವಾತಂತ್ರ್ಯ ಪ್ರೇಮ ಪ್ರತಿಯೊಬ್ಬರು ಅಧ್ಯಯನ ಮಾಡಬೇಕು
ಕುಕನೂರು: ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ದಿಟ್ಟ ಹೆಜ್ಜೆ ಇಟ್ಟು ಹೋರಾಡಿದವರು. ಅವರ ಹೋರಾಟ ರಾಷ್ಟ್ರದಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಪ್ರಯುಕ್ತ ರಾಣಿ ಚೆನ್ನಮ್ಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಈಸ್ಟ್ ಇಂಡಿಯಾ ಕಂಪನಿ ಮೂಲಕ ಭಾರತದ ಸಂಪತ್ತು ದೋಚಲು ಬಂದ ಬ್ರೀಟಿಷರು ಕಪ್ಪ ಕಾಣಿಕೆಗಾಗಿ ಜನರಿಗೆ ಹೇರಿಸಿದರು.ಇಲ್ಲಿಯ ಸಂಪತ್ತನ್ನು ನಿಮಗೇಕೆ ನೀಡಬೇಕು ಎಂದು ಕಿತ್ತೂರು ರಾಣಿ ಚೆನ್ನಮ್ಮ ಬ್ರೀಟಿಷರ ವಿರುದ್ಧ ರಣಕಹಳೆ ಊದಿದಳು. ಬ್ರೀಟಿಷರನ್ನು ಭಾರತದಿಂದ ಹಿಮ್ಮೆಟ್ಟಿಸಲು ಚೆನ್ನಮ್ಮ ಮುಂದಾದರು. ಆಕೆಯ ಧೈರ್ಯ ಹಾಗೂ ಸ್ವಾತಂತ್ರ್ಯ ಪ್ರೇಮ ನಿಜಕ್ಕೂ ಮಾದರಿ ಎಂದರು.ಯಲಬುರ್ಗಾ ಬಿಜೆಪಿ ಮಂಡಳ ಅಧ್ಯಕ್ಷ ಮಾರುತಿ ಗಾವರಾಳ ಮಾತನಾಡಿ, ಚೆನ್ನಮ್ಮನ ಹೋರಾಟದ ಆದರ್ಶ ಗುಣ ಹಾಗೂ ಆಕೆಯ ಸ್ವಾತಂತ್ರ್ಯ ಪ್ರೇಮ ಪ್ರತಿಯೊಬ್ಬರು ಅಧ್ಯಯನ ಮಾಡಬೇಕು. ರಾಷ್ಟ್ರಕ್ಕಾಗಿ ಪ್ರತಿಯೊಬ್ಬರು ಶ್ರಮಿಸಬೇಕು. ಮುಂದಿನ ಪೀಳಿಗೆಗೆ ಚೆನ್ನಮ್ಮಳ ದಿಟ್ಟ ಹೋರಾಟದ ಹಾದಿ ತಿಳಿಸಬೇಕು ಎಂದರು.
ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಸವರಾಜ ರಾಜೂರು,ಪಪಂ ಸದಸ್ಯ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಮಂಜುನಾಥ ನಾಡಗೌಡ್ರು, ಲಕ್ಷ್ಮಣ ಕಾಳಿ, ಕರಬಸಯ್ಯ ಬಿನ್ನಾಳ, ವಿನಾಯಕ ಯಾಳಗಿ, ರಾಮನಗೌಡ, ವಿರೇಶ ಸಬರದ ಇತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))