ವೈದ್ಯಕೀಯ ಪರೀಕ್ಷೆಯಲ್ಲಿ ರ‍್ಯಾಂಕ್ ಸಾಧನೆ: ಶ್ಲಾಘನೆ

| Published : Mar 06 2025, 12:32 AM IST

ಸಾರಾಂಶ

ನಗರದ ಬಾಪೂಜಿ ಶೈಕ್ಷಣಿಕ ಸಂಘದ ಅಡಿಯಲ್ಲಿ ಎಸ್.ಎಸ್. ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ 2024- 25ನೇ ಸಾಲಿನಲ್ಲಿ ನಡೆದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿ, ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ದಾವಣಗೆರೆ: ನಗರದ ಬಾಪೂಜಿ ಶೈಕ್ಷಣಿಕ ಸಂಘದ ಅಡಿಯಲ್ಲಿ ಎಸ್.ಎಸ್. ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ 2024- 25ನೇ ಸಾಲಿನಲ್ಲಿ ನಡೆದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿ, ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಪಿಜಿ ಹಂತದ ಎಂ.ಡಿ. ಪರೀಕ್ಷೆಯಲ್ಲಿ ವೈದ್ಯಕೀಯ ಚಿಕಿತ್ಸೆ (ಎಮರ್ಜೆನ್ಸಿ ಮೆಡಿಸಿನ್) ಪರೀಕ್ಷೆಯಲ್ಲಿ ಡಾ. ಪಿ.ಕೆ.ಅರವಿಂದ 5ನೇ ರ‍್ಯಾಂಕ್, ಎಂ.ಎಸ್. ಹಂತದಲ್ಲಿ ಪ್ರಸೂತಿ ಮತ್ತು ಶ್ರೀರೋಗ (ಎಂಎಸ್ ಓಬಿಜಿ) ವಿಭಾಗದಲ್ಲಿ ಡಾ.ಜಿ.ಆರ್.ವಾರಿಧಿ 3ನೇ ರ‍್ಯಾಂಕ್ ಪಡೆದಿದ್ದಾರೆ.

ಯು.ಜಿ. ವ್ಯಾಪ್ತಿಗೆ ಬರುವ ಪರೀಕ್ಷೆಗಳಲ್ಲಿ ಡಾ. ಎಸ್.ಪಿ. ಯುವರಾಜ್ ವೈದ್ಯಕೀಯ ವಿಶ್ವವಿದ್ಯಾಲಯದ 4ನೇ ಟಾಫರ್ ಆಗಿದ್ದು, ವಿವಿಧ ವಿಭಾಗಗಳಲ್ಲಿ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಮಕ್ಕಳ ವೈದ್ಯಕೀಯ ಕ್ಷೇತ್ರವಾದ ಫೀಡಿಯಾಟ್ರಿಕ್ ವಿಭಾಗ ಭಾರ್ಗವಿ 6ನೇ ರ‍್ಯಾಂಕ್, ಅಧಿತಿ, ಎಚ್.ಎನ್.ಸಹನ, ಅಕ್ಷತಾ 8ನೇ ರ‍್ಯಾಂಕ್ ಪಡೆದಿದ್ದಾರೆ. ಅಂಗರಚನಾ ಶಾಸ್ತ್ರ ವಿಭಾಗದಲ್ಲಿ ಎಂ.ಎಚ್. ಸುಪ್ರಜಾ 10ನೇ ರ‍್ಯಾಂಕ್, ಶರೀರ ಶಾಸ್ತ್ರ ವಿಭಾಗದಲ್ಲಿ ಎನ್.ಸಿಂಧೂ ಶರೀರ ಶಾಸ್ತ್ರ ವಿಭಾಗದಲ್ಲಿ 9 ನೇ ರ‍್ಯಾಂಕ್, ಸಮುದಾಯ ವಿಭಾಗದಲ್ಲಿ 4ನೇ ರ‍್ಯಾಂಕ್ ಪಡೆದಿದ್ದಾರೆ.

ನಂದಕಿಶೋರ್ ಬಾಣಾಪುರ ಮಕ್ಕಳ ವೈದ್ಯಕೀಯ ಕ್ಷೇತ್ರವಾದ ಫೀಡಿಯಾಟ್ರಿಕ್ ವಿಭಾಗದಲ್ಲಿ 5ನೇ ರ‍್ಯಾಂಕ್ ಹಾಗೂ ಮೈಕ್ರೋಬಯಲಾಜಿ ವಿಭಾಗದಲ್ಲಿ 10ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಸಾಧಕರಿಗೆ ಎಸ್‌ಎಸ್‌ಐಎಂಎಸ್ ಅಂಡ್ ರೀಸರ್ಚ್ ಸೆಂಟರ್ ಮುಖ್ಯಸ್ಥ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಪ್ರಾಚಾರ್ಯ ಡಾ. ಬಿ.ಎಸ್. ಪ್ರಸಾದ್, ವೈದ್ಯಕೀಯ ಅಧೀಕ್ಷಕ ಅರುಣ್ ಕುಮಾರ್, ಆಡಳಿತ ಮಂಡಳಿ, ಬೋಧಕ- ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

- - - -4ಕೆಡಿವಿಜಿ43: ಡಾ. ಪಿ.ಕೆ.ಅರವಿಂದ್

-4ಕೆಡಿವಿಜಿ44: ಡಾ.ವಾರಿಧಿ