ಕೊಲೆಯಾದ ವ್ಯಕ್ತಿಯ ಮೇಲೆ ಅತ್ಯಾಚಾರ ಕೇಸ್

| Published : Aug 19 2025, 01:00 AM IST

ಸಾರಾಂಶ

ಕೊಲೆಯಾದ ಆರೋಪಿಯನ್ನೇ ಪೋಕ್ಸೋ ಕೇಸ್‌ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿರುವುದು ಸಹ ಮೊದಲ ಪ್ರಕರಣ ಎಂದೇ ಹೇಳಲಾಗುತ್ತಿದೆ. ಪೋಕ್ಸೋ ಕೇಸ್ ಅಡಿಯಲ್ಲಿ ಕೊಲೆಯಾದ ಗವಿಸಿದ್ದಪ್ಪ ನಾಯಕ ಎ.1 ಆರೋಪಿಯಾಗಿದ್ದರೆ ತಂದೆ ನಿಂಗಜ್ಜ 2ನೇ ಹಾಗೂ ನಂತರದ ಸ್ಥಾನದಲ್ಲಿ ಎ3 ತಾಯಿ ಮತ್ತು ಅವರ ತಂಗಿಯ ವಿರುದ್ಧವೂ ದೂರು ದಾಖಲಿಸಿರುವುದು ಗವಿಸಿದ್ದಪ್ಪನ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಪ್ಪಳ:

ಪ್ರೇಮ ಪ್ರಕರಣದಲ್ಲಿ ಕೊಲೆಯಾಗಿರುವ ಗವಿಸಿದ್ದಪ್ಪ ನಾಯಕ ವಿರುದ್ಧವೇ ಈಗ ಪೋಕ್ಸೋ ಕೇಸ್ ಅಡಿ ಅತ್ಯಾಚಾರ ಕೇಸ್ ದಾಖಲಾಗಿದ್ದು, ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ.

ಕೊಲೆಯಾದ ಆರೋಪಿಯನ್ನೇ ಪೋಕ್ಸೋ ಕೇಸ್‌ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿರುವುದು ಸಹ ಮೊದಲ ಪ್ರಕರಣ ಎಂದೇ ಹೇಳಲಾಗುತ್ತಿದೆ. ಪೋಕ್ಸೋ ಕೇಸ್ ಅಡಿಯಲ್ಲಿ ಕೊಲೆಯಾದ ಗವಿಸಿದ್ದಪ್ಪ ನಾಯಕ ಎ.1 ಆರೋಪಿಯಾಗಿದ್ದರೆ ತಂದೆ ನಿಂಗಜ್ಜ 2ನೇ ಹಾಗೂ ನಂತರದ ಸ್ಥಾನದಲ್ಲಿ ಎ3 ತಾಯಿ ಮತ್ತು ಅವರ ತಂಗಿಯ ವಿರುದ್ಧವೂ ದೂರು ದಾಖಲಿಸಿರುವುದು ಗವಿಸಿದ್ದಪ್ಪನ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ನನ್ನ ಮಗ ಕೊಲೆಯಾದ ಸಂಕಷ್ಟದಲ್ಲಿದ್ದರೆ ಈಗ ನಮ್ಮ ಮೇಲೆಯೇ ಪೋಕ್ಸೋ ಕೇಸ್ ಅಡಿ ಪ್ರಕರಣ ದಾಖಲಿಸಿರುವುದು ಯಾವ ನ್ಯಾಯ ಎಂದು ತಾಯಿ ದೇವಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗ ಪ್ರೀತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀ ಪಂಚಾಯಿತಿ ನಡೆದಾಗ ನಾನು ಮಾತ್ರ ಹೋಗಿದ್ದೆ. ಆದರೆ, ಈಗ ನನ್ನ ವಿರುದ್ಧ ಅಷ್ಟೇ ದೂರು ನೀಡದೆ, ನನ್ನ ಪತಿ ಮತ್ತು ನನ್ನ ಮಗಳ ಹೆಸರನ್ನು ಸೇರಿಸಿದ್ದು, ಇದು ಯಾವ ನ್ಯಾಯ? ಎಂದು ಕಿಡಿಕಾರಿದ್ದಾರೆ.

ಈಗ ನನ್ನ ಮಗ ಪ್ರೀತಿಸಿದ ಬಾಲಕಿಯ ತಾಯಿ ಪರಿಹಾರ ಕೇಳಿ ಧರಣಿ ಮಾಡಿದ್ದಾರೆ. ಅವರಿಗೆ ನನ್ನ ಮನೆಯನ್ನಾದರೂ ಮಾರಿ ಪರಿಹಾರ ನೀಡುತ್ತೇನೆ. ಅವರು ನನ್ನ ಮಗನನ್ನು ತಂದುಕೊಡಲಿ ಎಂದು ಸವಾಲು ಹಾಕಿದರು.

ತನಿಖೆ ಚುರುಕು:

ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣದ ಜತೆಗೆ ಕೊಲೆಯಾದ ಗವಿಸಿದ್ದಪ್ಪ ನಾಯಕ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಪೋಕ್ಸೋ ಕೇಸ್ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣವನ್ನು ರಾಜೀ ಮಾಡಿದ್ದು ಸಹ ಅಪರಾಧ ಆಗಿರುವುದರಿಂದ ಆ ದಿಸೆಯಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ.