ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಬೇಲೂರು-ಹಾಸನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಗೆ ಸುಮಾರು 750 ಕೋಟಿ ತಂದು ರಸ್ತೆ ಅಭಿವೃದ್ಧಿಗೆ ಸಹಕರಿಸಿದ ಜೆಡಿಎಸ್ ಯುವ ನಾಯಕ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಭಿವೃದ್ಧಿ ಹರಿಕಾರ ಎಂದು ಮಾಜಿ ಶಾಸಕ ಕೆ ಎಸ್ ಲಿಂಗೇಶ್ ಹೇಳಿದರು.ಇಂದು ಪ್ರಜ್ವಲ್ ರೇವಣ್ಣ ಅವರ 35ನೇ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ಜೆಡಿಎಸ್ ಮುಖಂಡರೊಂದಿಗೆ ರೋಗಿಗಳಿಗೆ ಹಣ್ಣು ಬ್ರೆಡ್ ನೀಡಿ ಮಾತನಾಡಿ, ಅಲ್ಪ ಅವಧಿಯಲ್ಲೇ ರಾಜ್ಯ ನಾಯಕರಾಗಿ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದರು. ರಸ್ತೆ, ಸಮುದಾಯ ಭವನ, ಸಹಕಾರ ಬ್ಯಾಂಕ್ ಕಟ್ಟಡ, ಇನ್ನೂ ಮುಂತಾದ ಕೆಲಸಗಳಿಗೆ ವಿಶೇಷ ಅನುದಾನ ತಂದು ಅಭಿವೃದ್ಧಿ ಪಡಿಸುವಲ್ಲಿ ಶ್ರಮ ವಹಿಸಿದ್ದರು. ಮಾಜಿ ಪ್ರಾಧಾನಿ ಹಾಲಿ ರಾಜ್ಯಸಭಾ ಸದಸ್ಯರ ಅನುದಾದಲ್ಲಿ ರಸ್ತೆ ಅಭಿವೃದ್ಧಿಗಾಗಿ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಂದ ಅನುದಾನ ತಂದಿದ್ದರು. ಅವರ ಹುಟ್ಟುಹಬ್ಬದ ಅಂಗವಾಗಿ ದೇವರು ಅವರಿಗೆ ಹೆಚ್ಚಿನ ಆಯಸ್ಸು ಕೊಡಲೆಂದು ಕೋರಿದರು. ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಎಂ ಎ ನಾಗರಾಜ್ ಮಾತನಾಡಿ, ಪ್ರಜ್ವಲ್ ರೇವಣ್ಣ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದವರು. ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡರ ಮಾರ್ಗದರ್ಶನದಲ್ಲಿ ರಾಜಕೀಯ ನಡೆ ಕಂಡುಕೊಂಡಿದ್ದರು. ಆದರೆ ಅವರ ಪೆನ್‌ಡ್ರೈವ್ ವಿಚಾರದಲ್ಲಿ ನ್ಯಾಯಾಲಯ ನೀಡಿರುವ ತೀರ್ಪಿಗೆ ಸ್ವಾಗತ. ಆದರೆ ಅದನ್ನು ಹಂಚಿದ್ದು ಅಪರಾಧವೆಂದು ಕೋರ್ಟ್ ಹೇಳಿದೆ. ಹಂಚಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇದಕ್ಕೆ ಶಾಮೀಲಾದವರ ಬಗ್ಗೆ ನ್ಯಾಯಾಲಯ ಅವರಿಗೂ ತಕ್ಕ ಶಿಕ್ಷೆ ನೀಡಬೇಕು. ಪ್ರಜ್ವಲ್ ನಿರೀಕ್ಷಿನ ಜಾಮೀನು, ಶಿಕ್ಷೆ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರುವ ಅವಕಾಶವಿದೆ. ಆದಷ್ಟು ಬೇಗ ಶಿಕ್ಷೆಯಿಂದ ಹೊರಬಂದು ತಮ್ಮ ರಾಜಕೀಯ ಜೀವನ ನಡೆಸಲು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಅಶ್ವಥ್ ಬಾನಸವಳ್ಳಿ, ರಂಗೇಗೌಡ, ದಬ್ಬೆ ಗ್ರಾಮ ಪಂಚಾಂಯತಿ ಮಾಜಿ ಅಧ್ಯಕ್ಷ ನಾಗೇಶ್ ಪಟೇಲ್, ಪುರಸಭೆ ಮಾಜಿ ಉಪಾಧ್ಯಕ್ಷ ಮಲ್ಲೇಗೌಡ, ಜೆಡಿಎಸ್ ನಾಗರಾಧ್ಯಕ್ಷ ಅಬ್ದುಲ್ ಖಾದರ್, ಮುಖಂಡರಾದ ಈಶ್ವರ್ ಪ್ರಸಾದ್, ನಾಗೇಶ್ ಸತೀಶ್, ಸ್ತ್ರೀರೋಗ ತಜ್ಞರಾದ ಡಾ. ಸತೀಶ್ ಇದ್ದರು.