ಗುಬ್ಬಿ: ಅತ್ಯಂತ ವಿರಳವಾಗಿ ಕಾಣಸಿಗುವ ಕಾಡುಪಾಪವೊಂದು ಗುಬ್ಬಿ ತಾಲೂಕಿನ ಬ್ಯಾಡಿಗೆರೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿತ್ತು.

ಗುಬ್ಬಿ: ಅತ್ಯಂತ ವಿರಳವಾಗಿ ಕಾಣಸಿಗುವ ಕಾಡುಪಾಪವೊಂದು ಗುಬ್ಬಿ ತಾಲೂಕಿನ ಬ್ಯಾಡಿಗೆರೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿತ್ತು. ಆಹಾರ ಅರಿಸಿ ಬಂದ ಈ ಕಾಡುಪ್ರಾಣಿಯನ್ನು ನೋಡಿದ ಸ್ಥಳೀಯರು ಆಶ್ಚರ್ಯದಿಂದ ಮೊಬೈಲ್‌ಗಳಲ್ಲಿ ಚಿತ್ರ ಸೆರೆ ಹಿಡಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥರು ಇದಕ್ಕೆ ಸ್ಥಳೀಯವಾಗಿ ಅಡವಿ ಪಾಪ ಅಂತಲೂ ಕರೆಯುವುದುಂಟು, ಮೂರು ದಿನಗಳಿಂದ ಈ ಭಾಗದಲ್ಲಿ ಮಳೆ ಬಂದ ಕಾರಣ ಈ ಕಾಡುಪಾಪ ಆಹಾರ ಹಾಗೂ ತಂಪು ಪ್ರದೇಶವನ್ನು ಹುಡುಕಿಕೊಂಡು ಬಂದಿರಬೇಕು. ಜಿಲ್ಲೆಯ ದೇವರಾಯನದುರ್ಗ, ಸಿದ್ಧರಬೆಟ್ಟ, ಸಿದ್ದಗಂಗೆ ಬೆಟ್ಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಇದ್ದು, ಇವುಗಳ ಸಂರಕ್ಷಣೆ ಆಗಬೇಕು ಎಂದು ಆಗ್ರಹಿಸಿದರು. ಕೆಲವು ಗಂಟೆಗಳ ಗ್ರಾಮಸ್ಥರ ಜೊತೆಯಲ್ಲಿ ಕಾಲ ಕಳೆದ ಕಾಡುಪಾವವನ್ನು ಗ್ರಾಮದ ಯುವಕರು ಯಾವುದೇ ತೊಂದರೆಯಾಗದಂತೆ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.