ರಾಶಿ ಕಂಪನಿ ಬೀಜ ಬಿತ್ತನೆಯಿಂದ ಹೆಚ್ಚು ಲಾಭ

| Published : Oct 04 2024, 01:08 AM IST

ಸಾರಾಂಶ

ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಸಂಜೀವ ರಡ್ಡಿ ರಾಯರಡ್ಡಿ ಹೊಲದಲ್ಲಿ ರಾಶಿ ಕಂಪನಿಯ ಹತ್ತಿ ಬೆಳೆ ಕ್ಷೇತ್ರೋತ್ಸವ ನಡೆಯಿತು. ಕಂಪನಿಯು ಟೆರಿಟರಿ ಮ್ಯಾನೇಜರ್ ಶರತ ಭೋರಶೆಟ್ಟರ್‌ ಹತ್ತಿ ಬೀಜದ ಬಗ್ಗೆ ಮಾಹಿತಿ ನೀಡಿದರು.

ನರಗುಂದ: ರಾಶಿ ಕಂಪನಿಯವರು ಈ ಭಾಗದ ರೈತರ ಜಮೀನುಗಳಿಗೆ ಅನುಗುಣವಾಗಿ ಹೊಸ ಹತ್ತಿ ಬೀಜಗಳನ್ನು ಮಾರುಕಟ್ಟೆಗೆ ತಂದಿದ್ದು, ರೈತರು ಈ ಬೀಜ ಬಿತ್ತನೆ ಮಾಡಿ ಹೆಚ್ಚಿನ ಇಳುವರಿ ತೆಗೆಯಲು ಸಾಧ್ಯವಿದೆ ಎಂದು ಕಂಪನಿಯು ಟೆರಿಟರಿ ಮ್ಯಾನೇಜರ್ ಶರತ ಭೋರಶೆಟ್ಟರ್‌ ಹೇಳಿದರು.

ತಾಲೂಕಿನ ಚಿಕ್ಕನರಗುಂದ ಗ್ರಾಮದ ಸಂಜೀವ ರಡ್ಡಿ ರಾಯರಡ್ಡಿ ಹೊಲದಲ್ಲಿ ರಾಶಿ ಕಂಪನಿಯ ಹತ್ತಿ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ಕೃಷಿ ಕ್ಷೇತ್ರದ ಬೆಳವಣಿಗೆಯಲ್ಲಿ ರಾಶಿ ಮ್ಯಾಕ್ಸ್ 929 ಎಚ್‌ಡಿಪಿಎಸ್ (ಹೈ-ಡೆನ್ಸಿಟಿ ಪ್ಲಾಂಟಿಂಗ್ ಸಿಸ್ಟಮ್) ವಿಧಾನ ಪರಿಚಯಿಸಲಾಗಿದೆ. ಇದು ಬೆಳೆ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಿಸಲು ರೈತನಿಗೆ ಭರವಸೆ ನೀಡುತ್ತದೆ. ಈ ತಂತ್ರಜ್ಞಾನ ಸಸ್ಯಗಳ ಬೆಳವಣಿಗೆ ಅತ್ಯುತ್ತಮವಾಗಿಸಲು ಮತ್ತು ಇಳುವರಿ ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ ಎಂದರು.

ರಾಶಿ ಮ್ಯಾಕ್ಸ್ 929 ಎಚ್‌ಡಿಪಿಎಸ್ ವಿಧಾನದ ಪ್ರಮುಖ ಲಕ್ಷಣಗಳು ಅತಿ ಬೇಗನೆ ಕಟಾವಿಗೆ ಬರುವುದು. ರಸ ಹೀರುವ ಕೀಟಗಳಿಗೆ ಸಹಿಷ್ಣುತೆ ಹೊಂದಿದೆ. ರಾಸಿ ಮ್ಯಾಕ್ಸ್ 929 ಎಚ್.ಡಿ.ಪಿ.ಎಸ್. ವಿಧಾನವು ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಎಕರೆಗೆ ಹೆಚ್ಚಿನ ಸಂಖ್ಯೆಯ ಸಸ್ಯಗಳಿರುತ್ತವೆ. ಈ ವಿಧಾನವು ಲಭ್ಯವಿರುವ ಭೂಮಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವುದನ್ನು ಖಚಿತಪಡಿಸುತ್ತದೆ. ರೈತರು ತಮ್ಮ ಸಾಗುವಳಿ ಪ್ರದೇಶವನ್ನು ಹೆಚ್ಚಿಸಿ ಉತ್ಪಾದನೆಯನ್ನು ಗರಿಷ್ಠಗೊಳಿಸಲು ಅನುವು ಮಾಡಿಕೊಡುತ್ತದೆ ಎಂದರು.

ಶಿವಪ್ಪ ಬೋಳಶೆಟ್ಟಿ, ಬೀಜ ವಿತರಕ ಮಹೇಶ ಟ್ರೇಡರ್ಸ್ ಮಾಲೀಕ ರಮೇಶಗೌಡರ ಕರಕನಗೌಡ್ರ, ತಾಲೂಕು ಸಿಇಒ ನವೀನ ಯಳ್ಳೂರ, ಫೀಲ್ಡ್ ವರ್ಕರ್‌ ದೇವರಾಜ, ಪ್ರಕಾಶ ಹಳೇಮನಿ, ವಿಠ್ಠಲ ತಿಮ್ಮರೆಡ್ಡಿ, ಚನ್ನಬಸಪ್ಪ ಉಪಸ್ಥಿತರಿದ್ದರು.