'Rasta Roko' today to protest the release of water

- ರಾಜೂಗೌಡ ಕರೆ । ವಾರಾಬಂದಿ ರದ್ದು ಮಾಡಿ ನ.30 ರವರೆಗೆ ನಿರಂತರ ನೀರು ಬಿಡಲು ಆಗ್ರಹ

--

ಕನ್ನಡಪ್ರಭ ವಾರ್ತೆ ಯಾದಗಿರಿ

ನಾರಾಯಣಪುರದ ಬಸವಸಾಗರ ಜಲಾಶಯದ ನೀರನ್ನು ನಮ್ಮ ಭಾಗದ ರೈತರಿಗೆ ಬಿಡದೆ, ತೆಲಂಗಾಣಕ್ಕೆ ಬಿಡುತ್ತಿರುವ ರಾಜ್ಯ ಸರ್ಕಾರ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ನಮ್ಮ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿ, ಶನಿವಾರ ಸುರಪುರ ಸಮೀಪದ ದೇವಾಪುರ ಕ್ರಾಸ್ ನಲ್ಲಿ ಬೃಹತ್ ಪ್ರಮಾಣದ ರಸ್ತಾ ರೋಕೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ರಾಜೂಗೌಡ ಅವರು ತಿಳಿಸಿದ್ದಾರೆ.

ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಕ್ಷಾತೀತವಾದ ಈ ಹೋರಾಟದಲ್ಲಿ ಎಲ್ಲ ರೈತ ಸಂಘಟನೆಗಳು ಹಾಗೂ ಕನ್ನಡ ಪರ ಹೋರಾಟಗಾರರು ಜೊತೆಯಾಗಿ ಭಾಗವಹಿಸಲಿದ್ದಾರೆ. ಎಲ್ಲ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಹಿಂದೆ ನವೆಂಬರ್ 15ರವರೆಗೆ ನೀರು ಬಿಡಬೇಕು ಎಂದು ಕೇಳಲಾಗಿತ್ತು. ಆದರೆ, ನೂರಾರು ರೈತರು ದೂರವಾಣಿ ಮೂಲಕ ಸಂಪರ್ಕಿಸಿ, "15ರವರೆಗೆ ನೀರು ಬಿಟ್ಟರೆ ಯಾವ ಬೆಳೆಯೂ ಬರುವುದಿಲ್ಲ, 30ರವರೆಗೆ ಸತತ ನೀರು ಬಿಡಿ ಎಂದು ಮನವಿ ಮಾಡಿದ್ದಾರೆ. ರೈತರ ಈ ಮನವಿಯಂತೆ, ನವೆಂಬರ್ 30ರವರೆಗೆ ನಿರಂತರ ನೀರು ಹರಿಸಬೇಕು ಎಂದು ರಾಜೂಗೌಡ ಒತ್ತಾಯಿಸಿದ್ದಾರೆ. ದೇವಾಪುರ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅ.24 ರಂದು ನಡೆಯಲಿರುವ ಈ ರಸ್ತಾ ರೋಕೋ ಚಳವಳಿಗೆ ಎಲ್ಲ ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಅವರು ತಿಳಿಸಿದ್ದಾರೆ.

-

23ವೈಡಿಆರ್‌12 : ರಾಜೂಗೌಡ, ಮಾಜಿ ಸಚಿವರು.