ಪದವಿಯೊಂದಿಗೆ ಕೌಶಲ್ಯ ಹೊಂದಿದಲ್ಲಿ ಯಶಸ್ಸು

| Published : Jul 23 2025, 02:12 AM IST

ಸಾರಾಂಶ

ದ್ಯಾರ್ಥಿಗಳು ಹೆಚ್ಚೆಚ್ಚು ಕೌಶಲ್ಯಗಳನ್ನು ಹೊಂದುವ ಮೂಲಕ ಪ್ರಬುದ್ಧತೆಯನ್ನು ಗಳಿಸಿಕೊಂಡು ತಂತ್ರಜ್ಞಾನದಲ್ಲಿ ಬೆಳವಣಿಗೆ ಸಾಧಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಪದವಿಯೊಂದಿಗೆ ಕೌಶಲ್ಯ ಹೊಂದಿದಲ್ಲಿ ವಿದ್ಯಾರ್ಥಿಗಳ ಯಶಸ್ಸು ಸಾಧ್ಯ ಎಂದು ಐಎಲ್ ವೈಎಫ್ ಅಧ್ಯಕ್ಷ ಡಾ.ಎಂ. ಧರ್ಮಪ್ರಸಾದ್ ತಿಳಿಸಿದರು.

ನಗರದ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶವು ಅಂತಾರಾಷ್ಟ್ರೀಯ ಲಿಂಗಾಯತ್ ಯುವ ಸಮಿತಿಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹೆಚ್ಚೆಚ್ಚು ಕೌಶಲ್ಯಗಳನ್ನು ಹೊಂದುವ ಮೂಲಕ ಪ್ರಬುದ್ಧತೆಯನ್ನು ಗಳಿಸಿಕೊಂಡು ತಂತ್ರಜ್ಞಾನದಲ್ಲಿ ಬೆಳವಣಿಗೆ ಸಾಧಿಸಬೇಕು. ವಿದ್ಯಾರ್ಥಿಗಳೇ ನೀವು ಕೌಶಲ್ಯಗಳು, ಅಕೌಂಟ್, ಟ್ಯಾಲಿ ಎಲ್ಲವನ್ನು ತಿಳಿದುಕೊಂಡು ಉದ್ಯೋಗ ಹೊಂದಿ ಹೊಸ ಉದ್ಯಮಗಳನ್ನು ತೆರೆಯುವ ಮೂಲಕ ನೀವು ಬೇರೆಯವರಿಗಿಂತ ಭಿನ್ನತೆ ದೃಷ್ಟಿ ಹೊಂದಿ ಬೆಳವಣಿಗೆ ಸಾಧಿಸಿ ಎಂದು ಅವರು ಕರೆ ನೀಡಿದರು.

ಮೈಸೂರು ಅರಮನೆಯ ಎಸಿಪಿ ಎಚ್.ಎಂ. ಚಂದ್ರಶೇಖರ್ ಮಾತನಾಡಿ, ಪ್ರತಿಯೊಂದು ಹುದ್ದೆಗೆ ಪ್ರಾತಿನಿಧ್ಯವಿದೆ. ವಿದ್ಯಾರ್ಥಿಗಳು ದೃಢವಾದ ವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ತಯಾರಿ ನಡೆಸಿ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ, ಐಎಲ್ ವೈಎಫ್ ಕೆ.ಎಸ್. ಮಹದೇವಪ್ರಸಾದ್, ಕೆ.ಎಚ್. ಕಿರಣ್, ಉದ್ಯೋಗ ಕೋಶದ ಸಂಚಾಲಕ ಎಸ್. ಉಮೇಶ್ ಇದ್ದರು.