ಸಾರಾಂಶ
ನರಸಿಂಹರಾಜಪುರ, ದೇಶದ ಅತಿ ದೊಡ್ಡ ಉದ್ಯಮಿ ರತನ್ ಟಾಟಾ ಅವರು ಉಪ್ಪಿನಿಂದ ಉಕ್ಕಿನವರೆಗೂ ಹಾಗೂ ಪಿನ್ ನಿಂದ ಏರೋಪ್ಲೇನ್ ವರೆಗೂ ಉದ್ಯಮ ನಡೆಸಿ ಯಶಸ್ಸುಕಂಡಿದ್ದರು ಎಂದು ತಾಲೂಕು ಹಿರಿಯ ನಾಗರಿಕ ಸಮಿತಿ ಉಪಾಧ್ಯಕ್ಷ ಪಿ.ಕೆ.ಬಸವರಾಜ್ ತಿಳಿಸಿದರು.
ಹಿರಿಯ ನಾಗರಿಕ ಸಮಿತಿಯಿಂದ ಶ್ರದ್ದಾಂಜಲಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರದೇಶದ ಅತಿ ದೊಡ್ಡ ಉದ್ಯಮಿ ರತನ್ ಟಾಟಾ ಅವರು ಉಪ್ಪಿನಿಂದ ಉಕ್ಕಿನವರೆಗೂ ಹಾಗೂ ಪಿನ್ ನಿಂದ ಏರೋಪ್ಲೇನ್ ವರೆಗೂ ಉದ್ಯಮ ನಡೆಸಿ ಯಶಸ್ಸುಕಂಡಿದ್ದರು ಎಂದು ತಾಲೂಕು ಹಿರಿಯ ನಾಗರಿಕ ಸಮಿತಿ ಉಪಾಧ್ಯಕ್ಷ ಪಿ.ಕೆ.ಬಸವರಾಜ್ ತಿಳಿಸಿದರು.
ಗುರುವಾರ ಹಿರಿಯ ನಾಗರಿಕ ಸಮಿತಿ ಕಚೇರಿಯಲ್ಲಿ ನಡೆದ ರತನ್ ಟಾಟಾ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರತನ್ ಟಾಟಾ ತಮ್ಮ ಹಿಂದಿನ ತಲೆಮಾರಿನವರು ಭಾರತ ದೇಶಕ್ಕೆ ವಲಸೆ ಬಂದಾಗ ಆಶ್ರಯ ಕೊಟ್ಟ ಭಾರತ ದೇಶಕ್ಕೆ ತಮ್ಮ ಶಕ್ತಿ ಮೀರಿ ಎಲ್ಲಾ ರಂಗ ಗಳಲ್ಲೂ ಉದ್ಯಮ ನಡೆಸಿ ಯಶಸ್ಸು ಕಂಡಿದ್ದು ದೇಶಕ್ಕೆ ನೀಡದ ಅಪಾರ ಕೊಡುಗೆ ಎಂದರು.ತಾಲೂಕು ಹಿರಿಯ ನಾಗರಿಕ ಸಮಿತಿ ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ರತನ್ ಟಾಟಾ ಅತ್ಯಂತ ಸರಳ, ಸಜ್ಜನ ವ್ಯಕ್ತಿ ಯಾಗಿದ್ದರು.ಈ ದೇಶದ ಅನೇಕ ಅಭಿವೃದ್ಧಿ ಕಾರ್ಯದಲ್ಲಿ ರತನ್ ಟಾಟಾ ಹಾಗೂ ವಿಶ್ವ ಮಟ್ಟದಲ್ಲಿ ಭಾರತ ಹೆಸರು ಗಳಿಸಲು ರತನ್ ಟಾಟಾ ಅವರ ಪಾತ್ರ ಇದೆ ಎಂದರು.
ಹಿರಿಯ ನಾಗರಿಕ ಸಮಿತಿ ಖಜಾಂಚಿ ಕೆ.ಎಸ್.ರಾಜಕುಮಾರ್ ಮಾತನಾಡಿ, ಕೋವಿಡ್ ಸಮಯದಲ್ಲಿ ರತನ್ ಟಾಟಾ ಅವರ ಸಹಕಾರ ಮರೆ ಯುವಂತಿಲ್ಲ.ಇಂತಹ ಚೇತನ ಅಗಲಿರುವುದು ಭಾರತ ದೇಶಕ್ಕೆ ದೊಡ್ಡ ನಷ್ಟ. ರತನ್ ಟಾಟಾ ಅವರು ಮತ್ತೊಮ್ಮೆ ಭಾರತ ದೇಶದಲ್ಲಿ ಹುಟ್ಟಿ ಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.ಸಭೆಯಲ್ಲಿ ಬಿ.ಕೆ ಜಾನಕೀರಾಮ್,ಶಿವಕುಮಾರ್, ಜಯಂತಿ ಮುಂತಾದವರು ಮಾತನಾಡಿದರು.ಹಿರಿಯ ಸದಸ್ಯ ಚಕ್ರಪಾಣಿ ಉಪಸ್ಥಿತರಿದ್ದರು.