ಪುಟದಷ್ಟು ಬರೆಯುವುದಕ್ಕಿಂತ ಪುಟಕ್ಕಿಡುವಂತೆ ಕಾವ್ಯ ರಚಿಸಬೇಕು-ಕವಿ ಡಾ. ಜಯಪ್ಪ

| Published : Jan 12 2025, 01:16 AM IST

ಪುಟದಷ್ಟು ಬರೆಯುವುದಕ್ಕಿಂತ ಪುಟಕ್ಕಿಡುವಂತೆ ಕಾವ್ಯ ರಚಿಸಬೇಕು-ಕವಿ ಡಾ. ಜಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕಿವಿಯಾಗದವ ಕವಿಯಾಗಲಾರ, ಪುಟದಷ್ಟು ಕಾವ್ಯ ಬರೆಯುವುದಕ್ಕಿಂತ ಪುಟಕ್ಕಿಡುವಂತೆ ಕಾವ್ಯ ರಚನೆ ಮಾಡಬೇಕು. ನಮ್ಮ ಕಾವ್ಯಗಳು ನಮ್ಮನ್ನು ಮುನ್ನಡೆಸುವಂತೆ ಇರಬೇಕು ಎಂದು ಜಯ ಕವಿ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

ಹಿರೇಕೆರೂರು:ಕಿವಿಯಾಗದವ ಕವಿಯಾಗಲಾರ, ಪುಟದಷ್ಟು ಕಾವ್ಯ ಬರೆಯುವುದಕ್ಕಿಂತ ಪುಟಕ್ಕಿಡುವಂತೆ ಕಾವ್ಯ ರಚನೆ ಮಾಡಬೇಕು. ನಮ್ಮ ಕಾವ್ಯಗಳು ನಮ್ಮನ್ನು ಮುನ್ನಡೆಸುವಂತೆ ಇರಬೇಕು ಎಂದು ಜಯ ಕವಿ ಡಾ. ಜಯಪ್ಪ ಹೊನ್ನಾಳಿ ಹೇಳಿದರು.ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆಯುತ್ತಿರುವ 14ನೇ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮಳನದ 2ನೇ ದಿನದ ಕಾರ್ಯಕ್ರಮದಲ್ಲಿ ನಡೆದ ಕವಿಗಳ ಕಲರವ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕವಿಗಳಾದವರು ಶಬ್ದಗಳನ್ನು ಅಂಗಾರವನ್ನಾಗಿ ಬಳಸದೇ ಬಂಗಾರವನ್ನಾಗಿ ಬಳಸಿ ಕಾವ್ಯಗಳನ್ನು ರಚಿಸಬೇಕು. ಶಬ್ದಗಳು ನಮ್ಮನ್ನು ಬೆನ್ನತ್ತಿ ಬರಬೇಕು ಅಂತಹ ವಿದ್ವತ್ತನ್ನು ಬೆಳಸಿಕೊಳ್ಳಬೇಕು. ಕವಿಗಳಾದವರು ಓದುಗರ ಬದುಕಿಗೆ ಬಣ್ಣ ತುಂಬುವಂತಹ ಕಾರ್ಯ ಮಾಡಬೇಕು. ಕವಿಗಳು ಕಾವ್ಯ ಧರ್ಮ ಪಾಲನೆ ಮಾಡಬೇಕು. ನಮ್ಮನ್ನು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳುವ ಜತಗೆ ನಾವು ರಚಿಸಿದ ಕವಿತೆ ಕಾವ್ಯಗಳನ್ನು ನಮ್ಮಷ್ಟಕ್ಕೆ ನಾವೇ ವಿಮರ್ಶೆ ಮಾಡಿಕೊಂಡು ನಂತರ ಪ್ರಕಟಿಸಬೇಕು.ನಮ್ಮ ಹಾವೇರಿ ಜಿಲ್ಲೆ ಸಾಹಿತ್ಯದ ಪುಣ್ಯ ಭೂಮಿಯಾಗಿದೆ. ಹಿರೇಕೆರೂರಿನಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ 48 ಕವಿಗಳು ತಮ್ಮ ಕವನಗಳನ್ನು ವಾಚನ ಮಾಡಿದ್ದು ಸಂತಸ ವ್ಯಕ್ತಪಡಿಸಿದರು.ಕವಿಗಳ ಕಲರವ ಗೋಷ್ಠಿಯಲ್ಲಿ ಸುರೇಶ ಮಲ್ಲಾಡದ, ಎನ್.ಎಸ್.ಹಗ್ಗೇರಿ, ಸುರೇಶ ಕರಡೇರ, ವಿಜಯರೂಪಾ ತಂಬಾಕದ, ಮಂಜುನಾಥ ಚಲವಾದಿ, ಬಸವರಾಜ ಪೂಜಾರ, ರೇಖಾ ನಲವಾಲದ, ಪ್ರಕಾಶ ಶಿರಗಂಬಿ, ಸುರೇಶ ವಡ್ಡರ, ಸುಜಾತಾ ಸಿ., ಗೀತಾ ಸಾಲಿಮಠ, ಆರ್.ಬಿ.ಪಾಟೀಲ, ಬಸನಗೌಡ ಬಣಕಾರ, ಪ್ರಕಾಶ ಬಾರ್ಕಿ, ನಜೀರ್ ಸವಣೂರ, ಪ್ರಶಾಂತ ದೈವಜ್ಞ, ಖಾದರಅಲಿ ನದಾಫ್, ಸುಮಾ ಹೂಲಿಹಳ್ಳಿ, ಬಸವರಾಜ ಜೀನಳ್ಳಿ, ಪ್ರಕಾಶ ಆರೀಕಟ್ಟಿ, ನಂದೀಶ ಲಮಾಣಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಕವಿಗಳು ಪ್ರಕೃತಿ, ತಾಯಿ, ಸೀರೆ, ಪ್ರಚಲಿತ ವಿದ್ಯಮಾನ, ನಾಡು-ನುಡಿ, ಮನುಜ ಮತ, ಮಸಣದ ಹಾದಿ, ರೈತರ ಸ್ಥಿತಿಗತಿ, ಹಳ್ಳಿಗಳ ಸ್ಥಿತಿ, ನಾಗರಿಕತೆ, ಶಿಕ್ಷಣ, ಆಸೆಗಳು, ಮದುವೆ ಕನ್ನಡ ನಾಡು ನುಡಿ ಅಭಿಮಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ತಮ್ಮದೇ ಆದ ಶೈಲಿಯಲ್ಲಿ ಕವಿಗಳು ತಮ್ಮ ಕವನಗಳನ್ನು ವಾಚನ ಮಾಡಿದರು.ಲೀಲಾ ಕಲಕೋಟಿ ಆಶಯಗಳನ್ನು ನುಡಿಗಳನ್ನಾಡಿದರು.ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಸಂಕಮ್ಮ ಸಂಕಣ್ಣನವರ, ಎನ್.ಸಿ.ಕಠಾರೆ, ಹನುಮಂತಗೌಡ ಭರಮಣ್ಣನವರ ಸೇರಿದಂತೆ ಇತರರಿದ್ದರು.ಷಣ್ಮುಖಪ್ಪ ಮುಚ್ಚಂಡಿ ಸ್ವಾಗತಿಸಿದರು. ಮಹೇಶ ಮೆಣಸಗಿ ನಿರೂಪಿಸಿದರು. ಎಂ.ಬಿ.ಹಾದಿಮನಿ, ಕೇಶವ ಚಂದ್ರ ನಿರ್ವಹಿಸಿದರು. ಬಿ.ಐ.ಲೆಕ್ಕಪ್ಪನವರ ವಂದಿಸಿದರು.