ನರಸಿಂಹರಾಜಪುರಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು ಬಾಕಿ ಇರುವವರು ಸೊಸೈಟಿಗಳಲ್ಲಿ ಅಥವಾ ಅನ್ನ ಸೇವೆ ಆ್ಯಪ್ ಮೂಲಕ ಕಡ್ಡಾಯವಾಗಿ ಮಾಡಿಸಬೇಕು ಎಂದು ಆಹಾರ ಇಲಾಖೆ ಅಧಿಕಾರಿ ಗಣಪತಿ ತಿಳಿಸಿದರು.

- ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ

ಕನ್ನಡ್ರಭ ವಾರ್ತೆ ನರಸಿಂಹರಾಜಪುರ

ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು ಬಾಕಿ ಇರುವವರು ಸೊಸೈಟಿಗಳಲ್ಲಿ ಅಥವಾ ಅನ್ನ ಸೇವೆ ಆ್ಯಪ್ ಮೂಲಕ ಕಡ್ಡಾಯವಾಗಿ ಮಾಡಿಸಬೇಕು ಎಂದು ಆಹಾರ ಇಲಾಖೆ ಅಧಿಕಾರಿ ಗಣಪತಿ ತಿಳಿಸಿದರು.

ಶುಕ್ರವಾರ ತಾಪಂನಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಕು.ಚಂದ್ರಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿ ಈಗಾಗಲೇ ತಾಲೂಕಿನಲ್ಲಿ ಶೇ.79 ರಷ್ಟು ಇ-ಕೆವೈಸಿ ಆಗಿದ್ದು ಉಳಿದವರು ತಮ್ಮ ಮೊಬೈಲ್ ಮೂಲಕವೇ ಅನ್ನ ಸೇವೆ ಆ್ಯಪ್‌ನಲ್ಲಿ ಅಥವಾ ತಾವು ಪಡಿತರ ಪಡೆಯುವ ಸೊಸೈಟಿಯಲ್ಲಿ ಮಾಡಿಸಬೇಕು. ಇಕೆವೈಸಿಗೆ ನ.10 ರ ವರೆಗೆ ಅವಧಿ ವಿಸ್ತರಿಸಲಾಗಿದೆ. ಪ್ರಸ್ತುತ ಸೊಸೈಟಿಗಳಲ್ಲಿ ಪಡಿತರ ವಿತರಣೆ ಆಗುತ್ತಿರುವುದರಿಂದ 1 ನೇ ತಾರೀಖಿನವರೆಗೆ ಇ-ಕೆವೈಸಿ ಸಾಧ್ಯವಾಗುವುದಿಲ್ಲ. ಪಡಿತರ ವಿತರಣೆ ಆದ ಮೇಲೆ ಸೊಸೈಟಿಗಳಲ್ಲಿ ಇಕೆವೈಸಿ ಮಾಡಿಸ ಬಹುದು. ಈ ತಿಂಗಳು ಕೇಂದ್ರ ಸರ್ಕಾರದ ಪಡಿತರದಾರರಿಗೆ ತಲಾ 3 ಕೆ.ಜಿ. ರಾಗಿ, 2 ಕೆ.ಜಿ. ಅಕ್ಕಿ, ರಾಜ್ಯ ಸರ್ಕಾರದ ಅನ್ನ ಭಾಗ್ಯದ 5 ಕೆ.ಜಿ. ಅಕ್ಕಿ ಬಿಡುಗಡೆಯಾಗಿರುತ್ತದೆ ಎಂದರು.ಚಿಕ್ಕಮಗಳೂರು ಉದ್ಯೋಗ ವಿನಿಮಯ ಕೇಂದ್ರ ಅಧಿಕಾರಿ ಖಲಂದರ್ ಮಾತನಾಡಿ ಆಗಸ್ಟ್ ನಲ್ಲಿ 1,15,17,500 ರು. ಪದವೀಧರರು ಹಾಗೂ ಡಿಪ್ಲೋಮೊ ಮಾಡಿದವರ ಖಾತೆ ಜಮೆ ಆಗಿದೆ. ಸೆಪ್ಟೆಂಬರ್ ಹಣ ಖಾತೆಗೆ ಹಾಕಲಾಗುತ್ತಿದೆ. ನಿರುದ್ಯೋಗಿ ಯುವಕ, ಯುವತಿಯರಿಗೆ ಕೊಪ್ಪ ಐಟಿಐ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ನೀಡಲಾಗುತ್ತಿದೆ. ಆಸಕ್ತರು ನೋಂದಣಿ ಮಾಡಿಕೊಳ್ಳಬಹುದು ಎಂದರು.ಸಮಿತಿ ಸದಸ್ಯ ಇಂದಿರಾನಗರ ರಘು ಮಾತನಾಡಿ ಸರ್ಕಾರಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದೆ ತಡವಾಗಿ ಪ್ರಯಾಣೀಕರು ಬಸ್ ಸ್ಯಾಂಡ್ ನಲ್ಲಿ ಕಾಯುವಂತಾಗುತ್ತಿದೆ. ಬಸ್ ಬಂದಿಲ್ಲ ಎಂದು ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿ ಸುತ್ತಾರೆ. ಕೆಲವು ಬಸ್ ನಿರ್ವಾಹಕರು ಪ್ರಯಾಣಿಕರೊಂದಿಗೆ ಮಾನವೀಯತೆಯಿಂದ ವರ್ತಿಸುತ್ತಿಲ್ಲ ಎಂದು ದೂರಿದರು. ಸದಸ್ಯೆ ಅಪೂರ್ವ ಮಾತನಾಡಿ ಬಸ್ಸಿನಲ್ಲಿ ಮಗು ತಾಯಂದಿರು, ಹಿರಿಯರು, ವಯಸ್ಸಾದವರು ಎಂದು ನೋಡದೆ ಕೆಲವು ಬಸ್ಸು ಚಾಲಕರು, ಕಂಡೆಕ್ಟರ್ ಒರಟಾಗಿ ವರ್ತಿಸುತ್ತಾರೆ. ತಮ್ಮ ವರ್ತನೆ ಬದಲಾಯಿಸಿಕೊಳ್ಳದಿದ್ದರೆ ಪ್ರಯಾಣಿಕರೇ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.ಸಭೆ ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷೆ ಕು.ಚಂದ್ರಮ್ಮ ಮಾತನಾಡಿ ಚಿಕ್ಕಮಗಳೂರಿಗೆ ಬೆಳಿಗ್ಗೆ 8 ಗಂಟೆಗೆ ಬಸ್ಸು ಬಿಡುವ ಬಗ್ಗೆ ಜಿಲ್ಲಾಧ್ಯಕ್ಷರ ಗಮನಕ್ಕೆ ತಂದು ಸಂಬಂಧಪಟ್ಟ ಡಿಪೋ ಅಧಿಕಾರಿಗಳಿಗೆ ಬಸ್ಸು ಸಂಚರಿಸಲು ಕ್ರಮ ವಹಿಸುವಂತೆ ತಿಳಿಸಲಾಗುವುದು. ಭಾರತ್ ಜೋಡೋ ಯುವ ಸಂಘದ ಸದಸ್ಯರಿಗೆ ಶೀಘ್ರದಲ್ಲೇ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಹಾಗಾಗಿ ಈಗಾಗಲೇ ಭಾರತ್ ಜೋಡೋ ಯುವ ಸಂಘಗಳಿಗೆ ಎಷ್ಟು ಜನ ಮಾರ್ಗದರ್ಶಕರನ್ನ ನೇಮಿಸಲಾಗಿದೆ ? ಎಷ್ಟು ಜನರು ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ನೋಂದಣಿ ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಿಳಿಸಿದರು.ಸಭೆಯಲ್ಲಿ ಸಮಿತಿ ಸದಸ್ಯರಾದ ನಾಗರಾಜ್, ಕ್ಷೇತ್ರಕುಮಾರ್,ಬೇಸಿಲ್,ಹೂವಮ್ಮ,ಅಪೂರ್ವ,ಜಯರಾಂ, ಟಿ.ಟಿ. ಇಸ್ಮಾಯಿಲ್, ತಾ.ಪಂ. ಯೋಜನಾಧಿಕಾರಿ ಯಾದವರಾಜ್, ಸಹಾಯಕ ನಿರ್ದೇಶಕಿ ಮಂಜುಳಾ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಯ ಅಧಿಕಾರಿಗಳಿದ್ದರು.