ಪಡಿತರ ಅಂಗಡಿ ಮಾಲೀಕರ ಕಮಿಷನ್‌ಗೂ ಕೊಕ್ಕೆ

| Published : Jul 09 2025, 12:19 AM IST

ಸಾರಾಂಶ

ಕೆಲವು ಅಂಗಡಿ ಮಾಲೀಕರು ಕಮಿಷನ್ ಹಣವನ್ನೇ ನಂಬಿಕೊಂಡು ಬದುಕುತ್ತಿದ್ದು ಅಂತಹ ಮಾಲೀಕರಿಗೆ ೪ ತಿಂಗಳಿಂದ ಸರ್ಕಾರ ಕಮಿಷನ್ ಹಣ ಪಾವತಿ ಮಾಡದೆ ವಿಳಂಬ ಮಾಡುತ್ತಿರುವುದು ಅಂಗಡಿಗಳನ್ನು ನಡೆಸಲು ಕಷ್ಟವಾಗಿದೆ. ಸರ್ಕಾರ ಕಮಿಷನ್ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂಬುದು ಮೊದಲಿನಿಂದಲೂ ವಿಪಕ್ಷಗಳ ಟೀಕೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಗೊಳಿಸಿದ ಬಳಿಕ ಯಾವುದೇ ಅಭಿವೃದ್ದಿ ಕಾರ‍್ಯಗಳಿಗೆ ಹಾಗೂ ಇತರೇ ಕೆಲಸಗಳಿಗೆ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂಬ ಆರೋಪಕ್ಕೆ ಸಾಕ್ಷಿ ಎಂಬಂತೆ ಪಡಿತರ ಅಕ್ಕಿ ಸಾಗಾಟ ಮಾಡುವ ಲಾರಿಗಳಿಗೆ ೫ ತಿಂಗಳಿಂದ ಸಾಗಾಣಿಕೆ ಹಣ ನೀಡದ ಕಾರಣ ಲಾರಿ ಮಾಲೀಕರು ಪಡಿತರ ಸಾಗಣೆ ಬಂದ್ ಮಾಡಿ ಮುಷ್ಕರ ನಡೆಸಿದ್ದಾರೆ. ಇದೇ ರೀತಿ ನಾಲ್ಕು ತಿಂಗಳಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೂ ಸರ್ಕಾರ ಕಮಿಷನ್ ನೀಡಿಲ್ಲ. ಇದರಿಂದಾಗಿ ಪಡಿತರ ಅಂಗಡಿ ಮಾಲೀಕರು ಜೀವನ ನಡೆಸುವದೇ ಕಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿದೆ ಆದರೆ ಅನ್ನಭಾಗ್ಯ ಯೋಜನೆಯನ್ನು ಸರ್ಮಕವಾಗಿ ಜಾರಿ ಮಾಡುತ್ತಿರುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಾಲ ಕಾಲಕ್ಕೆ ಪ್ರತಿ ತಿಂಗಳೂ ಕಮಿಷನ್ ಪಾವತಿ ಮಾಡದೆ ೬ ತಿಂಗಳಿಗೊಮ್ಮೆ ಪಾವತಿ ಮಾಡುವ ಮೂಲಕ ನ್ಯಾಯಬೆಲೆ ಅಂಗಡಿಗಳ ಮಾಲೀಕರನ್ನು ಅತಂತ್ರದಲ್ಲಿರುವಂತೆ ಮಾಡಿದೆ. ಇದರಿಂದ ಮಾಲೀಕರ ಕುಟುಂಬಗಳು ಪರದಾಡುವಂತಾಗಿದೆ. ಕಮಿಷನ್ ಹಣ ಗ್ಯಾರಂಟಿಗೆ?

ಕೆಲವು ಅಂಗಡಿ ಮಾಲೀಕರು ಕಮಿಷನ್ ಹಣವನ್ನೇ ನಂಬಿಕೊಂಡು ಬದುಕುತ್ತಿದ್ದು ಅಂತಹ ಮಾಲೀಕರಿಗೆ ೪ ತಿಂಗಳಿಂದ ಸರ್ಕಾರ ಕಮಿಷನ್ ಹಣ ಪಾವತಿ ಮಾಡದೆ ವಿಳಂಬ ಮಾಡುತ್ತಿರುವುದು ಅಂಗಡಿಗಳನ್ನು ನಡೆಸಲು ಕಷ್ಟವಾಗಿದೆ. ಸರ್ಕಾರ ಕಮಿಷನ್ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂಬುದು ಮೊದಲಿನಿಂದಲೂ ವಿಪಕ್ಷಗಳ ಟೀಕೆ.

ಈಗ ನಾಲ್ಕು ತಿಂಗಳಿಂದ ನ್ಯಾಯಬೆಲೆ ಅಂಗಡಿದಾರರಿಗೆ ಕಮಿಷನ್ ನೀಡದಿರುವುದನ್ನು ನೋಡದರೆ ಟೀಕೆಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಂತಾಗಿದೆ. ಸರ್ಕಾರ ಪ್ರತಿ ಕಾರ್ಡಿನ ಸದಸ್ಯರಿಗೆ ತಲಾ ೭ಕೆಜಿ ಅಕ್ಕಿ ೩ಕೆಜಿ ರಾಗಿ ಕೊತ್ತಿದೆ ಇದನ್ನು ಎತ್ತುವಳಿ ಮಾಡಿ ಪಡತರದಾರರಿಗೆ ವಿತರಿಸಬೇಕು,ಅಲ್ಲಿ ಕೂಲಿ ಕಾರ್ಮಿಕರಿಗೆ,ಅಂಗಡಿ ಬಾಡಿಗೆ,ವಿದ್ಯುತ್,ಇತ್ಯಾಧಿಗಳಿಗೆ ಹಣ ಬೇಕು ಆದರೆ ೪ ತಿಂಗಳಿಂದ ಕಮೀಷನ್ ಇಲ್ಲದೆ ಸಾಲ ಮಾಡಿ ಅಂಗಡಿ ನಡೆಸಲಾಗುತ್ತಿದೆ ಎಂದು ಹಲವು ಪಡಿತರ ಅಂಗಡಿ ಮಾಲೀಕರು ತಿಳಿಸಿದ್ದಾರೆ.ಕೋಟ್‌........................

ಸರ್ಕಾರದ ಎಲ್ಲಾ ಸುತ್ತೋಲೆಗಳನ್ನು ಯಾವುದೇ ಲೋಪವಿಲ್ಲದಂತೆ ಪಾಲನೆ ಮಾಡಿ ಸರ್ಕಾರದ ಮತಹ್ವಕಾಂಕ್ಷೆ ಅನ್ನಭಾಗ್ಯ ಯೋಜನೆ ಯಶಸ್ವಿಯಾಗಲು ಕಾರಣಕರ್ತರಾಗಿರುವ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ನಾಲ್ಕು ತಿಂಗಳಿಂದ ಕಮೀಷನ್ ಹಣವನ್ನು ಪಾವತಿಸದೆ ವಿಳಂಬ ಮಾಡಿರುವುದು ಸೂಕ್ತವಲ್ಲ ಕೂಡಲೇ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಗೋವಿಂದಪ್ಪ, ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷ.