ಸಾರಾಂಶ
ವಾಸ್ತು ಶಿಲ್ಪಿ ಕಟ್ಟಡ ಕಾರ್ಮಿಕರ ಸಂಘದಿಂದ ಕನ್ನಡ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ತರೀಕೆರೆಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಹಿರಿಯ ಗುತ್ತಿಗೆದಾರ ಟಿ.ವಿ.ರವಿಕುಮಾರ್ ಹೇಳಿದ್ದಾರೆ.
ಬುಧವಾರ ಪಟ್ಟಣದ ವಾಸ್ತುಶಿಲ್ಪಿ ಕಟ್ಟಡ ಕಾರ್ಮಿಕರ ಸಂಘದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಇಡೀ ವರ್ಷ ಕಾರ್ಮಿಕರು ಕಷ್ಟಪಟ್ಟು ದುಡಿಯುತ್ತಾರೆ ಎಂದರು.ಹಿರಿಯ ಗುತ್ತಿಗೆದಾರ ಲಕ್ಕವಳ್ಳಿ ನಾಗರಾಜ್ ಮಾತನಾಡಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಎಲ್ಲರೂ ಗುರುತಿನ ಕಾರ್ಡು ಪಡೆಯಬೇಕು. ಗುರುತಿನ ಕಾರ್ಡನ್ನು ಕೆಲಸದ ವೇಳೆಯಲ್ಲಿ ಉಪಯೋಗಿಸಬೇಕು. ಸಂಘದಿಂದ ಮೊದಲ ಬಾರಿ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ಬಾರಿ ಹೆಚ್ಚು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.
ವಾಸ್ತು ಶಿಲ್ಪಿ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷ ಬಾಲಸುಬ್ರಮಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಂಘದಲ್ಲಿ ಸೇರಬೇಕು ಎಂದು ಹೇಳಿದರು.ಸಂಘದ ಗೌರವಾಧ್ಯಕ್ಷ ರಾಮಚಂದ್ರಪ್ಪ, ಉಪಾದ್ಯಕ್ಷ ಭೋಜರಾಜ್, ಕಾರ್ಯದರ್ಶಿ ಮಂಜಣ್ಣ, ಖಚಾಂಚಿ ರವಿಕುಮಾರ್, ನಿರ್ದೇಶಕರಾದ ಲಕ್ಷ್ಮೀಪತಿ, ಜಯರಾಂ, ಪ್ರದೀಪ್, ಎಲ್ಲಪ್ಪ, ಬಸವರಾಜ್, ಸುರೇಶ್, ಶ್ರೀನಿವಾಸ್, ಸ್ವಾಮಿ, ಪ್ರಶಾಂತ್, ಗೋಪಿ ಸಂಘದ ನಿರ್ದೇಶಕರು ಮತ್ತಿತರರು ಭಾಗವಹಿಸಿದ್ದರು.ಸಂಘದ ಸದಸ್ಯರಿಗೆ ಗುರುತಿನ ಕಾರ್ಡು ವಿತರಿಸಲಾಯಿತು.
13ಕೆಟಿಆರ್.ಕೆ.4ಃತರೀಕೆರೆಯಲ್ಲಿ ವಾಸ್ತುಶಿಲ್ಪಿ ಕಟ್ಟಡ ಕಾರ್ಮಿಕರ ಸಂಘದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ, ಕಾರ್ಮಿಕರಿಗೆ ಗುರುತಿನ ಕಾರ್ಡು ವಿತರಣಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಾಲ ಸುಬ್ರಮಣಿ ಮಾತನಾಡಿದರು. ಹಿರಿಯ ಗುತ್ತಿಗೆದಾರ ಟಿ.ವಿ.ರವಿಕುಮಾರ್, ಸಂಘದ ಗೌರವಾಧ್ಯಕ್ಷ ರಾಮಚಂದ್ರಪ್ಪ, ಉಪಾದ್ಯಕ್ಷ ಭೋಜರಾಜ್, ಕಾರ್ಯದರ್ಶಿ ಮಂಜಣ್ಣ ಮತ್ತಿತರರು ಇದ್ದರು.