ಸಾರಾಂಶ
ಮುಂದಿನ ದಿನಗಳಲ್ಲಿ ಪಂಚಾಯ್ತಿ ಎಲ್ಲಾ ಸದಸ್ಯರ ಜತೆಗೂಡಿ ಶಾಸಕರು ಹಾಗೂ ಮಾಜಿ ಸಚಿವರ ಬೆಂಬಲ, ಸಹಕಾರ, ಮಾರ್ಗದರ್ಶನ ಪಡೆದು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲ ಸೌಕರ್ಯ, ಕುಡಿಯುವ ನೀರು ಪೂರೈಕೆ, ನೈರ್ಮಲ್ಯ ಕಾಪಾಡುವುದರ ಜತೆಗೆ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.
ಪಾಂಡವಪುರ:
ತಾಲೂಕಿನ ಅರಳಕುಪ್ಪೆ ಗ್ರಾಪಂ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರವಿಕುಮಾರ್ (ಪೇಡ ರವಿ) ಅವಿರೋಧವಾಗಿ ಆಯ್ಕೆಯಾದರು.ಹಿಂದಿನ ಅಧ್ಯಕ್ಷೆ ಆರ್.ನಿರ್ಮಲಾರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದು ರವಿಕುಮಾರ್ (ಪೇಡರವಿ) ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾದ ತಾಪಂ ಇಒ ಎಂ.ಎಚ್.ವೀಣಾ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ರವಿಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ಹೊರಗೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರನ್ನು ಎಲ್ಲಾ ಸದಸ್ಯರು, ಮುಖಂಡರು ಅಭಿನಂದಿಸಿದರು.ಅಧ್ಯಕ್ಷ ರವಿಕುಮಾರ್ ಮಾತನಾಡಿ, ನಮ್ಮ ನಾಯಕರಾದ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದ ಹಾಗೂ ಎಲ್ಲಾ ಸದಸ್ಯರ ಬೆಂಬಲದಿಂದ ಅಧ್ಯಕ್ಷನಾಗಿದ್ದೇನೆ. ಮುಂದಿನ ದಿನಗಳಲ್ಲಿ ಪಂಚಾಯ್ತಿ ಎಲ್ಲಾ ಸದಸ್ಯರ ಜತೆಗೂಡಿ ಶಾಸಕರು ಹಾಗೂ ಮಾಜಿ ಸಚಿವರ ಬೆಂಬಲ, ಸಹಕಾರ, ಮಾರ್ಗದರ್ಶನ ಪಡೆದು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲ ಸೌಕರ್ಯ, ಕುಡಿಯುವ ನೀರು ಪೂರೈಕೆ, ನೈರ್ಮಲ್ಯ ಕಾಪಾಡುವುದರ ಜತೆಗೆ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಉಪಾಧ್ಯಕ್ಷೆ ವಿ.ಎಸ್.ವಿನುತ, ಮಾಜಿ ಅಧ್ಯಕ್ಷೆ ಆರ್.ನಿರ್ಮಲಾ, ಮಾಜಿ ಉಪಾಧ್ಯಕ್ಷರಾದ ಶಿವರಾಮು, ಉಮೇಶ್, ಸದಸ್ಯರಾದ ಅಶೋಕ್, ಕಾಂತರಾಜು, ಮಹೇಶ್ (ಬಣ್ಣದ ಅಂಗಡಿ ಮಂಜಣ್ಣ), ಸುನಂದಮ್ಮ, ರಾಜಮ್ಮ, ಪಕ್ಷೇತರ ಸದಸ್ಯ ಚಲುವರಾಜು, ಪಿಡಿಒ ದೇವರಾಜು, ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷರಾದ ಅರಳಕುಪ್ಪೆ ಮಹದೇವು, ಸೀತಾಪುರ ವಿಶ್ವನಾಥ್, ಕ್ಯಾತನಹಳ್ಳಿ ಚೇತನ್, ಎನ್.ಶ್ರೀನಿವಾಸ್, ಪ್ರಕಾಶ್, ಯುವರಾಜು, ಇಂದ್ರೇಶ್, ಪೈ.ಗುರುಮೂರ್ತಿ, ಚಿದಾನಂದ, ಆರ್.ಸೋಮೇಗೌಡ, ಮಹೇಶ್, ತಿಲಕ್, ಭರತ್, ಪ್ರಕಾಶ್, ಪ್ರಶಾಂತ್‌ಕುಮಾರ್, ಬೇಕರಿ ಪರಮೇಶ್, ಬೇಕರಿ ನಾಗಣ್ಣ, ಶಶಿಚಾರ್, ಎಸ್.ಪಿ.ನಾಗರಾಜು, ರವಿ ಆರ್., ನಂದೀಶ್, ದಿಲೀಪ್‌ಕುಮಾರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.