ಸಾರಾಂಶ
ಮಂಗಳೂರು: 2025-27ರ ಅವಧಿಯ ಸುನ್ನೀ ಸ್ಟೂಡೆಂಟ್ ಫೆಡರೇಶನ್(ಎಸ್ಸೆಸ್ಸೆಫ್) ದ.ಕ. ವೆಸ್ಟ್ ಜಿಲ್ಲಾ ಸಮಿತಿಯ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಇತ್ತೀಚೆಗೆ 2 ದಿನಗಳ ಕಾಲ ಮರ್ಕಝ್ ಕೈಕಂಬ ಸಂಸ್ಥೆಯಲ್ಲಿ ನಡೆದ ‘ಸರ್ ಹಿಂದ್ ಕಾನ್‌ಕ್ಲೇವ್'' ಕ್ಯಾಂಪ್‌ನಲ್ಲಿ ಐನೂರರಷ್ಟು ವಿದ್ಯಾರ್ಥಿಗಳು ಪಾಳ್ಗೊಂಡಿದ್ದರು. ಶಿಬಿರದ ಸಮಾರೋಪ ಸಮಾರಂಭದಲ್ಲಿ ನೂತನ ಆಡಳಿತ ಸಮಿತಿಯನ್ನು ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಪ್ರ.ಕಾರ್ಯದರ್ಶಿ ಕೆ.ಪಿ ಹುಸೈನ್ ಸಅದಿ ಕೆ.ಸಿ.ರೋಡ್ ಘೋಷಿಸಿದರು. ಅಧ್ಯಕ್ಷರಾಗಿ ರವೂಫ್ ಹಿಮಮಿ ಸಖಾಫಿ ಸುರತ್ಕಲ್, ಉಪಾಧ್ಯಕ್ಷರಾಗಿ ಸಿನಾನ್ ಸಖಾಫಿ ಅಜಿಲಮೊಗರು ನೇಮಕಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ನೌಫಲ್ ಕಟ್ಟತ್ತಿಲ, ಫಿನಾನ್ಶಿಯಲ್ ಕಾರ್ಯದರ್ಶಿಯಾಗಿ ಖಲೀಲ್ ಅಬ್ಬೆಟ್ಟು ಮೂಡಬಿದ್ರೆ, ಕಾರ್ಯದರ್ಶಿಗಳಾಗಿ ನೌಫಲ್ ಅಹ್ಸನಿ ಕಿನ್ಯ, ಶಾಕಿರ್ ಎಂಎಸ್‌ಸಿ ಬಜ್ಪೆ, ನೌಸೀಫ್ ಪಂಜಿಮೊಗರು, ಅಝ್ಮಲ್ ಕಾವೂರು, ನೌಶಾದ್ ಮದನಿ ಮುಡಿಪು, ಝೈನುದ್ದೀನ್ ಇರಾ, ಮುನೀರ್ ಕಲ್ಮಿಂಜ, ಇಜಾಝ್ ಪಜೀರ್, ಮುಸ್ತಫಾ ಕೆ.ಸಿ.ರೋಡ್ ಆಯ್ಕೆಯಾದರು. ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಇತರ 12 ಮಂದಿಯನ್ನ ಆಯ್ಕೆ ಮಾಡಲಾಯಿತು.