ಸಾರಾಂಶ
ಅಡಕೆ ತುಂಬಿಸಿಕೊಂಡು ಬರುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿ ಮೂವರು ಮೃತಪಟ್ಟ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಚಿನ್ನಿಕಟ್ಟೆ ಜೋಗದ ಬಳಿ ಭಾನುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಡಕೆ ತುಂಬಿಸಿಕೊಂಡು ಬರುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿ ಮೂವರು ಮೃತಪಟ್ಟ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಚಿನ್ನಿಕಟ್ಟೆ ಜೋಗದ ಬಳಿ ಭಾನುವಾರ ನಡೆದಿದೆ.ಭದ್ರಾವತಿ ತಾಲೂಕಿನ ಚಂದನಕೆರೆಯ ಮಂಜುನಾಥ (40), ನಾಗರಾಜ್ (42), ಗೌತಮ್ (19) ಮೃತ ದುರ್ದೈವಿಗಳು. ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೋರ್ವರು ಆಸ್ಪತ್ರೆಯಲ್ಲಿ ಮೃತ ಪಟ್ಟರು. ಸುರೇಶ್, ಗಣೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಂದನಕರೆಯಿಂದ ಶಿಕಾರಿಪುರ ತಾಲೂಕು ಅರಿಶಿಣಗೆರೆಗೆ ತೆರಳಿದ್ದರು. ಅಲ್ಲಿನ ತೋಟವೊಂದರಲ್ಲಿ ಅಡಕೆ ಕೊಯ್ಲು ಮುಗಿಸಿಕೊಂಡು ವಾಪಸ್ ಬರುತ್ತಿದ್ದರು. ಶಿಕಾರಿಪುರದಿಂದ ಸವಳಂಗ ಮಾರ್ಗವಾಗಿ ಚಂದನಕೆರೆಗೆ ಬರುತ್ತಿದ್ದಾಗ ಚಿನ್ನಿಕಟ್ಟೆ ಜೋಗದ ಬಳಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.