ಸಾರಾಂಶ
ದೇವದುರ್ಗ ಪಟ್ಟಣದ ಶ್ರೀ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.
ದೇವದುರ್ಗ: ಪಟ್ಟಣದ ಶ್ರೀ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಡಗರ, ಸಂಭ್ರಮದಿಂದ ಮೂರು ದಿನಗಳ ಕಾಲ ನಡೆಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ, ಅಲಂಕಾರ, ಅಷ್ಠೋತ್ತರ ಪಠಣ, ಭಜನೆ, ಪಲ್ಲಕ್ಕಿ ಸೇವೆ, ರಥೋತ್ಸವ ಕಾರ್ಯಕ್ರಮಗಳು ಜರುಗಿದವು.ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ಶಾಮರಾವ್ ಕುಲಕರ್ಣಿ ಹೆಮನೂರು ಮಾತನಾಡಿ, ರಾಯರು ಭಕ್ತರ ಕಾಮಧೇನು ಇದ್ದಂತೆ. ನಂಬಿಕೆಯಿಂದ, ಶ್ರದ್ಧೆಯಿಂದ ಪೂಜೆ, ಸೇವೆ ಮಾಡಿದರೆ ಪುಣ್ಯಫಲವನ್ನು ಪಡೆಯಬಹುದಾಗಿದೆ. ಮಂತ್ರಾಯಲದ ಶ್ರೀಮಠ ಸಮಾಜ ಸೇವಾ ಕಾರ್ಯಕ್ರಮಗಳ ಮೂಲಕ ನಾಡಿನಲ್ಲಿ ಖ್ಯಾತಿ ಪಡೆದಿದೆ. ರಾಯರ ಅನುಗ್ರಹ ಮನುಕುಲಕ್ಕೆ ದೊರಕಲಿ ಎಂದು ಆಶಿಸಿದರು.
ಇತ್ತೀಚಿಗೆ ಸೇವಾ ನಿವೃತ್ತಿ ಹೊಂದಿರುವ ಯರಮಸಾಳ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಭೀಮಸೇನರಾವ್ ಕುಲಕರ್ಣಿರನ್ನು ಸನ್ಮಾನಿಸಲಾಯಿತು.ವೇಳೆ ತಿಮ್ಮಪ್ಪಯ್ಯ ದೇವರು, ಕಲಾವಿದ ಶಾಮ್ ಖಾನಾಪೂರ, ಮುಖಂಡರಾದ ರಾಘವೇಂದ್ರರಾವ್, ಗೋಪಾಲರಾವ್, ವಿಠಲರಾವ್ ಕುಲಕರ್ಣಿ, ಸತ್ಯನಾರಾಯಣ ಹಂಚಾಟೆ, ಗುರುರಾಜ ರಾಮನಾಳ, ರಾಮಾಚಾರ್ ಗಬ್ಬೂರ, ಗೋಪಾಲದಾಸ್, ವೆಂಕಟೇಶ ಕುಲಕರ್ಣಿ, ಶಂಕರರಾವ್ ಸರಕೀಲ್ ಹಾಗೂ ಇತರರು ಇದ್ದರು.