ಕಲಬುರಗಿ ಬ್ರಹ್ಮಪೂರ ಉತ್ತರಾದಿ ಮಠದಲ್ಲಿ ನಾಳೆ ರಾಯರ ಆರಾಧನೆ

| Published : Aug 19 2024, 12:50 AM IST

ಕಲಬುರಗಿ ಬ್ರಹ್ಮಪೂರ ಉತ್ತರಾದಿ ಮಠದಲ್ಲಿ ನಾಳೆ ರಾಯರ ಆರಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಬ್ರಹ್ಮಪೂರದಲ್ಲಿರುವ ರುಕ್ಮಿಣಿ ವಿಠಲ ಮಂದಿರ ಉತ್ತರಾದಿ ಮಠದಲ್ಲಿ ಆ.20 ರಿಂದ 3 ದಿನಗಳ ಕಾಲ ಗುರುರಾಯರ ಆರಾಧನೆ ಮಹೋತ್ಸವ ವೈಭವದಿಂದ ನಡೆಸಲಾಗುತ್ತಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ಸಾಗಿವೆ ಎಂದು ಅಲ್ಲಿನ ವ್ಯವಸ್ಥಾಪಕರಾದ ಪಂ. ವಿನೋದಾಚಾರ್ಯ ಗಲಗಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಬ್ರಹ್ಮಪೂರದಲ್ಲಿರುವ ರುಕ್ಮಿಣಿ ವಿಠಲ ಮಂದಿರ ಉತ್ತರಾದಿ ಮಠದಲ್ಲಿ ಆ.20 ರಿಂದ 3 ದಿನಗಳ ಕಾಲ ಗುರುರಾಯರ ಆರಾಧನೆ ಮಹೋತ್ಸವ ವೈಭವದಿಂದ ನಡೆಸಲಾಗುತ್ತಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ಸಾಗಿವೆ ಎಂದು ಅಲ್ಲಿನ ವ್ಯವಸ್ಥಾಪಕರಾದ ಪಂ. ವಿನೋದಾಚಾರ್ಯ ಗಲಗಲಿ ಹೇಳಿದ್ದಾರೆ.

ಆ. 20 ರ ಪೂರ್ವಾರಾಧನೆಯಂದು ಬೆಳಗ್ಗೆ ಅಷ್ಟೋತ್ತರ, ಪುಷ್ಪಾರ್ಚನೆ, ಗ್ರಾಮ ಪ್ರದಕ್ಷಿಣೆ ಹಾಗೂ ಪಂಡಿತರಿಂದ ಪ್ರವಚನಗಳು, ಅನ್ನ ಸಂತರ್ಪಣೆ ನಡೆಯಲಿದೆ. ಅಂದು ಸಂಜೆ 6 ಗಂಟೆಯಿಂದ ನೂಪುರ ನೃತ್ಯ ಸಂಸ್ಥೆ, ಓಂಕಾರ ನೃತ್ಯ ಸಾಧನ ಸಂಸ್ಥೆಯ ಕಲಾವಿದರಿಂದ ಭರತನಾಟ್ಯ ಹಾಗೂ ಸಂಗೀತ ಸಮಾರಂಭಗಳು ಇರಲಿವೆ.

ಇನ್ನು ಆ.21 ಮಧ್ಯಾರಾಧನೆ ದಿನದಂದು ಬೆಳಗ್ಗೆ ಮಂಚಾಮೃತ ಅಭಿಷೇಕ, ರಥಾಂಗ ಹೋಮ, ರಥೋತ್ಸವ, ಅನ್ನ ಸಂರ್ಪಣೆ, ಸಂಜೆ ಪ್ರಸನ್ನ ಕೋರ್ತಿ ಇವರಿಂದ ದಾಸವಾಣಿ, ಆ.22 ರ ಉತ್ತರಾರಾಧನೆಯಂದು ಗ್ರಾಮ ಪ್ರದಕ್ಷಿಣೆ, ಅಷ್ಟೋತ್ತರಾದಿಗಳು ನಡೆಯಲಿವೆ. ಅಂದು ಸಂಜೆ ವರಣಸಿಂಧು ಕಲಾ ತಂಡದಿಂದ ಕಾರ್ಯಕ್ರಮ ನಡೆಯಲಿವೆ.

ಜೇವರ್ಗಿ ಕಾಲೋನಿ ರಾಯರ ಮಠದಲ್ಲಿಯೂ ವೈಭವ:

ಇಲ್ಲಿನ ಜೇವರ್ಗಿ ಕಾಲೋನಿ ರಾಯರ ಮಠದಲ್ಲಿ ಆ. 20 ರಿಂದ ಆ. 23 ರ ವರೆಗೆ ಗುರು ರಾಯರ ಆರಾಧನೆ ಮಹೋತ್ಸವ ನಡೆಯಲಿದೆ ಎಂದು ರಾಘವೇಂದ್ರಸ್ವಾಮಿ ಭಕ್ತವೃಂದದ ಅಧ್ಯಕ್ಷರಾದ ನರೇಂದ್ರ ಫಿರೋಜಾಬಾದ್‌, ಕಾರ್ಯದರ್ಶಿ ಪ್ರಶಾಂತ ಕೋರಳ್ಳಿ ಹೇಳಿದ್ದಾರೆ.

ಆರಾಧನೆಯ ಮೂರು ದಿನ ಸುಧಾಸೇವಾ ಸಮೀತಿಯ ಪುಷ್ಪಾರ್ಚನೆ, ವಿವಿಎಂಪಿ ಅಡಿಯಲ್ಲಿರುವ ಪಾರಾಯಣ ಸಂಘದಿಂದ ಸಾಮೂಹಿಕ ಪಾರಾಯಮ, ಪಂಚಾಮೃತ ಅಭಿಷೇಕ, ಅಲಂಕಾರ, ಅನ್ನ ಸಂತರ್ಪಣೆ ನಡೆಯಲಿವೆ.

ಆ 20 ರಂದು ಪವಮಾನ ಹೋಮ ನಡೆಲಿದೆ. ಅದೇ ದಿನ ಸಂಜೆ ರಾಘವೇಂದ್ರ ರಾಯಚೂರ ಅವರಿಂದ ದಾಸವಾಣಿ ನಡೆಯಲಿದೆ. ಮಧ್ಯಾರಾಧನೆ ದಿನವಾದ ಆ. 21 ರಂದು ಕ್ಷೀರಾಭಿಷೇಕ, ರಥಾಂಗ ಹೋಮ, ರಜತ ರಥೋತ್ಸವ, ಗೋಪಾಲ ಕಾವಲಿ, ಸಂಜೆ 6. 30 ಕ್ಕೆ ಉಮಾ ಶರ್ಮಾ ಇವರಿಂದ ದಾಸವಾಣಿ ನಡೆಯಲಿದೆ.

ಇನ್ನು ಆ. 22 ರಂದು ಉತ್ತರಾರಾಧನೆ ದಿನ ಬೆಳಗ್ಗೆ ಪುಷ್ಪಾರ್ಚನೆ, ಹೋಮಾದಿಗಳು ನಡೆಯಲಿವೆ. ಅಂದೇ ಸಂಜೆ 6. 30 ಕ್ಕೆ ಹಂಸಧ್ವನಿ ಕಲಾನಿಕೇತನದಿಂದ ಮಕ್ಕಳ ತಬಲಾ ವಾದನ, ದಾಸವಾಣಿ ಕಾರ್ಯಕ್ರಮಗಳು ನಡೆಯಲಿವೆ.

ಇದಲ್ಲದೆ ಬಸವೇಶ್ವರ ನಗರದಲ್ಲಿರುವ ಗುರು ರಾಯರ ಮಠ, ಜಗತ್‌ ವೃತ್ತದಲ್ಲಿರುವ ಗೋಮುಖ ರಾಯರ ಮಠದಲ್ಲಿಯೂ ಆರಾಧನೆಗೆ ಭರದ ಸಿದ್ಧತೆಗಳು ನಡೆದಿವೆ. ಇನ್ನು ಪ್ರಶಾಂತ ನಗರದಲ್ಲಿರುವ ಮಾರುತಿ ಮಂದಿರದಲ್ಲಿಯೂ ರಾಯರ ಆರಾಧನೆ ನಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಗುರುಗುಳ ಅನುಗ್ರಹಕ್ಕೆ ಪಾತ್ರರಾಗಲು ಗುಂಡಾಚಾರ್ಯ ನರಿಬೋಳ ಮನವಿ ಮಾಡಿದ್ದಾರೆ.