ಸಾರಾಂಶ
ಪಟ್ಟಣದಲ್ಲಿ ಭಕ್ತ ಕನಕದಾಸರು, ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ನೂತನ ವೃತ್ತಗಳ ನಿರ್ಮಾಣಕ್ಕೆ ಶಾಸಕ ಆರ್. ಬಸನಗೌಡ ತುರ್ವಿಹಾಳ ಹಾಗೂ ಪಟ್ಟಣದ ವಿವಿಧ ಮಠಗಳ ಶ್ರೀಗಳಿಂದ ಭೂಮಿಪೂಜೆ ನೆರವೇರಿತು. ನಂತರ ಪಟ್ಟಣದ ಎಪಿಎಂಸಿ ಯಲ್ಲಿ ನಡೆಯುತ್ತಿವ ಚರಂಡಿ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದರು.
ಕನ್ನಡಪ್ರಭ ವಾರ್ತೆ ತುರ್ವಿಹಾಳ
ಪಟ್ಟಣದಲ್ಲಿ ಭಕ್ತ ಕನಕದಾಸರು, ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ನೂತನ ವೃತ್ತಗಳ ನಿರ್ಮಾಣಕ್ಕೆ ಶಾಸಕ ಆರ್. ಬಸನಗೌಡ ತುರ್ವಿಹಾಳ ಹಾಗೂ ಪಟ್ಟಣದ ವಿವಿಧ ಮಠಗಳ ಶ್ರೀಗಳಿಂದ ಭೂಮಿಪೂಜೆ ನೆರವೇರಿತು. ನಂತರ ಪಟ್ಟಣದ ಎಪಿಎಂಸಿ ಯಲ್ಲಿ ನಡೆಯುತ್ತಿವ ಚರಂಡಿ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದರು. ಭೂಮಿ ಪೂಜೆಯಲ್ಲಿ ಪಟ್ಟಣದ ಅಮೋಘ ರೇವಣ ಸಿದ್ದೇಶ್ವರ ಮಠದ ಮಾದಯ್ಯ ಗುರುವಿನ್, ಪುರವರ ಮಠದ ಅಮೆರಗುಂಡಯ್ಯ ಶಿವಾಚಾರ್ಯರು, ಸರ್ವೇಶ್ವರ ಮಠದ ಗುಂಡಯ್ಯ ಅಪ್ಪಾಜಿ, ಚಿದಾನಂದಯ್ಯ ಗುರುವಿನ್, ಪಟ್ಟಣದ ಮುಖಂಡರಾದ ಮಲ್ಲನಗೌಡ ದೇವರಮನಿ, ಪ ಪಂ ಅಧ್ಯಕ್ಷ ಕೆ.ಶಾಮಿದ್ ಸಾಬ್ ಚೌದ್ರಿ, ಮೌಲಪ್ಪಯ್ಯ ಗುತ್ತೆದಾರ, ಉಮರ್ ಸಾಬ, ಶೇಖರಗೌಡ ದೇವರಮನಿ, ಗೂಳಪ್ಪ ಕುಂಟೋಜಿ, ದೊಡ್ಡಪ್ಪ ಕಲ್ಗೂಡಿ, ಆರ್. ಶಿವನಗೌಡ, ಬಾಲಪ್ಪ ಕುಂಟೋಜಿ, ಸಿದ್ದೇಶ್ವರ ಗುರಿಕಾರ, ಅಭಿಗೌಡ, ಮಲ್ಲಪ್ಪ ಕಾನಿಹಾಳ, ಯಲ್ಲಪ್ಪ ಬೋವಿ, ಶರಣಬಸವ ರಡ್ಡೆರ, ಶರಣಬಸವ ಗಡೇದ, ಅರವಿಂದ ರಡ್ಡಿ, ಅನ್ವರ್ ಪಾಷಾ ದಳಪತಿ, ಡಾ. ರಮೇಶ ಸೇರಿದಂತೆ ಪಪಂ ಸದಸ್ಯರು, ಸರ್ವ ಸಮಾಜದ ಮುಖಂಡರು ಭಾಗವಹಿಸಿದ್ದರು.