ಸಾರಾಂಶ
-ಲಿಂಗಸುಗೂರು ಸಹಾಯಕ ಆಯುಕ್ತರ ಕಚೇರಿಗೆ ಕರ್ನಾಟಕದ ರೈತ ಸಂಘದ ನಿಯೋಗ
------ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಸುಣಕಲ್, ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಸ್ಥಾಪನೆ ಆಗುತ್ತಿರುವ ಆರ್.ಬಿ ಶುಗರ್ಸ್ ಲಿಮಿಟೆಡ್ ನ ಭೂ ಪ್ರಕರಣದ ಕುರಿತು ಕಂದಾಯ, ಸರ್ವೆ, ಅರಣ್ಯ ಇಲಾಖೆ ಹಾಗೂ ರೈತ ಸಂಘದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಮಾಡಲಾಗುವುದೆಂದು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಹೇಳಿದರು.ಆರ್.ಬಿ ಶುಗರ್ಸ್ ಲಿಮಿಟೆಡ್ ಕಂಪನಿ ಸರ್ಕಾರಿ, ಅರಣ್ಯ ಇಲಾಖೆ ಭೂಮಿ ಒತ್ತುವರಿ ಮಾಡಿದೆ. ಅಲ್ಲದೇ ಸಾಗುವಳಿ ಭೂಮಿಗೆ ಪಟ್ಟಾ ನೀಡಬೇಕೆಂದು ಕರ್ನಾಟಕ ರೈತ ಸಂಘ(ಎಐಕೆಕೆಎಸ್) ಕಳೆದ ತಿಂಗಳು 23ರಂದು 48 ಗಂಟೆಗಳ ಆಹೋರಾತ್ರಿ ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಿರಿಯ ಹೋರಾಟಗಾರ, ರೈತ ಮುಖಂಡ ಆರ್.ಮಾನಸ್ಸಯ್ಯ ಅವರ ನೇತೃತ್ವದಲ್ಲಿ ರೈತರ ನಿಯೋಗ ಭೇಟಿಯಾದ ರೈತರ ನಿಯೋಗದೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಬಡ ರೈತರು ಫಾರ್ರ ನಂಬರ್ 57ರಡಿ ಅರ್ಜಿ ಹಾಕಿದ್ದು, ಪರಿಶೀಲನೆ ಮಾಡಲಾಗುವುದು. ಚಿಕ್ಕ ಉಪ್ಪೇರಿ ಗ್ರಾಮದಿಂದ ಸರ್ವೆ ಕಾರ್ಯ ಆರಂಭಿಸಲಾಗುವುದು. ಅಲ್ಲದೇ ತಾಲೂಕಿನ ಚಿಕ್ಕ ಉಪ್ಪೇರಿ, ಸುಣಕಲ್ ಗ್ರಾಮದಲ್ಲಿ ಶುಗರ್ಸ್ ಕಂಪನಿಯ ಜಮೀನು ಒತ್ತುವರಿ ಕುರಿತು ನಾನಾ ಇಲಾಖೆಗಳ ಸಹಯೋಗದಲ್ಲಿ ರೈತರ ಸಮಕ್ಷಮ ಜಮೀನು ಸವೇ ನಡೆಸಲಾಗುವುದೆಂದು ತಿಳಿಸಿದರು.
ಅರಣ್ಯ ಇಲಾಖೆ ರೈತರ ಮೇಲೆ ಅನಗತ್ಯ ದಾಖಲಿಸಿರುವ ಪ್ರಕರಣ ಹಿಂಪಡೆಯಲು ನಿಯಮಾನುಸಾರ ಪರಿಶೀಲನೆ ಮಾಡಲಾಗುವುದು. ವಂದಲಿ ಹೊಸೂರು ಹೆಚ್ಚುವರಿ ಭೂ ಪ್ರಕರಣದ ಮೇಲೆ ಕ್ರಮ ವಹಿಸಲಾಗುವುದು, ಅರಣ್ಯ ಭೂಮಿ ಸಾಗುವಳಿ ಮಾಡಿದ ಭೂ ರಹಿತರು ಅರ್ಜಿ ಸಲ್ಲಿಸಲು ಗ್ರಾಮ ಸಭೆ ನಡೆಸಲು ಅರಣ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಕೂಲ ಪತ್ರ ಬರೆದು ಸೂಚನೆ ನೀಡುವೆ ಎಂದು ಹೇಳಿದರು.ರೈತರ ನಿಯೋಗದಲ್ಲಿ ಕರ್ನಾಟಕ ರೈತ ಸಂಘದ ಅಧ್ಯಕ್ಷ ವೀರಭದ್ರಪ್ಪ ಹಡಪದ, ಉಪಾಧ್ಯಕ್ಷ ತಿಪ್ಪಣ್ಣ ಚಿಕ್ಕಹೆಸರೂರು, ಕಾರ್ಯದರ್ಶಿ ಬಸವರಾಜ ಬಡಿಗೇರ, ಗಂಗಾಧರ ಗುಂತಗೋಳ ಸೇರಿದಂತೆ ಚಿಕ್ಕ ಉಪ್ಪೇರಿ, ಸುಣಕಲ್, ಗೊರೇಬಾಳ, ಗುಂತಗೋಳ, ದೇವಬುಪೂರ ಸೇರಿದಂತೆ ಗ್ರಾಮಗಳ ರೈತರು ಇದ್ದರು.
------ಫೋಟೊ: 10ಕೆಪಿಎಲ್ಎನ್ಜಿ03
ಲಿಂಗಸುಗೂರು ಸಹಾಯಕ ಆಯುಕ್ತರ ಕಚೇರಿಗೆ ಕರ್ನಾಟಕದ ರೈತ ಸಂಘದ ನಿಯೋಗ ಸಹಾಯಕ ಆಯುಕ್ತರೊಂದಿಗೆ ರೈತರ ಸಮಸ್ಯೆ ಕುರಿತು ಚರ್ಚೆ ನಡೆಸಿದರು.