ಹೊಸಕೋಟೆ: ತಾಲೂಕಿನ ದೊಡ್ಡನಲ್ಲಾಳ ಗ್ರಾಮದಲ್ಲಿ ಶ್ರೀವೀರಭದ್ರಸ್ವಾಮಿ ಶಿಲಾಮೂರ್ತಿ ಪುನರ್ ಪ್ರತಿಷ್ಠಾಪನೆ, ನೂತನ ಮಹಾಗಣಪತಿ, ಭದ್ರಕಾಳಿ, ನಂದೀಶ್ವರ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ನಂದಿಧ್ವಜ, ಶಿಖರ ಸ್ಥಾಪನೆ, ಕುಂಭಾಭಿಷೇಕ ಕಾರ್ಯಕ್ರಮ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು

ಹೊಸಕೋಟೆ: ತಾಲೂಕಿನ ದೊಡ್ಡನಲ್ಲಾಳ ಗ್ರಾಮದಲ್ಲಿ ಶ್ರೀವೀರಭದ್ರಸ್ವಾಮಿ ಶಿಲಾಮೂರ್ತಿ ಪುನರ್ ಪ್ರತಿಷ್ಠಾಪನೆ, ನೂತನ ಮಹಾಗಣಪತಿ, ಭದ್ರಕಾಳಿ, ನಂದೀಶ್ವರ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ನಂದಿಧ್ವಜ, ಶಿಖರ ಸ್ಥಾಪನೆ, ಕುಂಭಾಭಿಷೇಕ ಕಾರ್ಯಕ್ರಮ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಅರ್ಚಕ ನಟರಾಜ್ ಶಾಸ್ತ್ರಿ ಅರ್ಚಕತ್ವದಲ್ಲಿ ಹೋಮ, ಹವನ, ನವಗ್ರಹ ಪೂಜೆ, ಗಂಗೇಪೂಜೆ, ಪುಣ್ಯಾಹ, ಕಳಶ ಸ್ಥಾಪನೆ, ವಿಶೇಚ ಹೂವಿನ ಅಲಂಕಾರ ಮಹಾಮಂಗಳಾರತಿ ತಿರ್ಥ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.

ಬೆಳ್ಳಾವಿ ಸಂಸ್ಥಾನ ಮಠದ ಮಹಾಂತ ಶಿವಾಚಾರ‍್ಯ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ದೇವಾಲಯ ಸ್ಥಾಪನೆ ಮಾಡುವುದರಿಂದ ಭಕ್ತಾದಿಗಳಿಗೆ ಶಾಂತಿ, ನೆಮ್ಮದಿ ದೊರೆಯಲಿದೆ. ಗ್ರಾಮದಲ್ಲಿ ಯಾವುದೇ ರೋಗರುಜಿನಗಳು ಬರುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ನಾಗಲಾಪುರ ಸಂಸ್ಥಾನ ಮಠದ ತೇಜೇಶ ಲಿಂಗ ಶಿವಾಚಾರ‍್ಯ ಸ್ವಾಮೀಜಿ, ತರ‍್ನಹಳ್ಳಿ ಸಪ್ಪಲಮ್ಮ ದೇವಿ ಅನ್ನ ಚತ್ರ ಸಮಿತಿ ಅಧ್ಯಕ್ಷ ಹಾರಗದ್ದೆಯ ಎಚ್.ಎಸ್.ನಂಜಪ್ಪ, ಎಎಸ್‌ವಿಎನ್‌ಎಸ್ ಸಂಘದ ಗೌರವ ಕಾರ್ಯದರ್ಶಿ ಎಂ.ಎಸ್.ಕೃಷ್ಣಮೂರ್ತಿ, ನಿರ್ದೇಶಕ ನಂಜುಂಡಪ್ಪ, ರಾಜಶೇಖರ್, ಮಂಜುನಾಥ್, ದೊಡ್ಡನಲ್ಲಾಳ, ಶಿವನಾಪುರ, ವೇಮಗಲ್, ವಿಜಯಪುರ ಗ್ರಾಮದ ಭಕ್ತಾದಿಗಳು ಹಾಜರಿದ್ದರು.