10 ವರ್ಷಕ್ಕೊಮ್ಮೆ ಖಾತೆಗಳಲ್ಲಿ ಕೆವೈಸಿ ಪುನರ್ಜೋಡನೆ ಮಾಡಿ

| Published : Sep 02 2025, 01:00 AM IST

10 ವರ್ಷಕ್ಕೊಮ್ಮೆ ಖಾತೆಗಳಲ್ಲಿ ಕೆವೈಸಿ ಪುನರ್ಜೋಡನೆ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಹತ್ತು ವರ್ಷಕ್ಕೊಮ್ಮೆ ಪ್ರತಿಯೊಬ್ಬ ಗ್ರಾಹಕರು ತಮ್ಮ ಖಾತೆಗಳಲ್ಲಿ ಕೆವೈಸಿ ಪುನರ್ಜೋಡನೆ ಮಾಡಬೇಕೆಂದು ಯೂನಿಯನ್‌ ಬ್ಯಾಂಕ್‌ ಬೆಂಗಳೂರು ವಲಯ ಕಾರ್ಯಾಲಯದ ವಲಯ ಮುಖ್ಯಸ್ಥ ಕಲ್ಯಾಣ ವರ್ಮಾ ಹೇಳಿದರು.

ರಾಮನಗರ: ಹತ್ತು ವರ್ಷಕ್ಕೊಮ್ಮೆ ಪ್ರತಿಯೊಬ್ಬ ಗ್ರಾಹಕರು ತಮ್ಮ ಖಾತೆಗಳಲ್ಲಿ ಕೆವೈಸಿ ಪುನರ್ಜೋಡನೆ ಮಾಡಬೇಕೆಂದು ಯೂನಿಯನ್‌ ಬ್ಯಾಂಕ್‌ ಬೆಂಗಳೂರು ವಲಯ ಕಾರ್ಯಾಲಯದ ವಲಯ ಮುಖ್ಯಸ್ಥ ಕಲ್ಯಾಣ ವರ್ಮಾ ಹೇಳಿದರು.

ಕರ್ಲಹಳ್ಳಿಯ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ನಿರ್ದೇಶನದ ಮೇರೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಪಂ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಮಾಡಬಾಳ್ ಗ್ರಾಪಂ ಸಹಕಾರದೊಂದಿಗೆ ಆರ್ಥಿಕ ಸೇರ್ಪಡೆ ಪರಿಪೂರ್ಣತ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕುಗಳು ದೇಶದ ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ಸಾರ್ವಜನಿಕರು ಬ್ಯಾಂಕುಗಳಲ್ಲಿ ಸಿಗುವ ಸೌಲಭ್ಯವನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ತಿಳಿಸಿದರು.

ಬೆಂಗಳೂರು ವಲಯ ಕಚೇರಿಯ ಉಪ ಮಹಾಪ್ರಬಂಧಕ ಅರವಿಂದ ಹೆಗ್ಗಡೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು ಹೆಚ್ಚಾಗಿದ್ದು ಅದರ ಬಗ್ಗೆ ಜನ ಜಾಗೃತರಾಗಬೇಕೆಂದು ಹೇಳಿದರು.

ಮೈಸೂರಿನ ಕ್ಷೇತ್ರ ಕಾರ್ಯಾಲಯದ ಕ್ಷೇತ್ರ ಪ್ರಮುಖರಾದ ರಾಜ್ ಕುಮಾರ್ ಮಾತನಾಡಿ, ಬ್ಯಾಂಕುಗಳಲ್ಲಿ ಸಿಗುವ ಸೌಲಭ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೊರೆಯಬೇಕು. ಪ್ರತಿಯೊಂದು ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಾಗ ಯೋಜನೆ ಫಲಪ್ರದವಾಗುತ್ತದೆ ಎಂದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಮೋಹನ್ ಕುಮಾರ್ ಮಾತನಾಡಿ, ಬ್ಯಾಂಕಿನಲ್ಲಿ ಸಿಗುವ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ ಹಾಗೂ ಎಪಿವೈ ಬಗ್ಗೆ ವಿಸ್ತಾರವಾಗಿ ಜನಗಳಿಗೆ ಮಾಹಿತಿ ನೀಡಿ ಈ ಯೋಜನೆಗಳನ್ನು ಪ್ರತಿಯೊಬ್ಬ ಬ್ಯಾಂಕಿನ ಗ್ರಾಹಕರು ಕೂಡ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಪಿಎಂಎಸ್‌ಬಿವೈ ಫಲಾನುಭವಿ ಸುಮಾ ಅವರು ತಮ್ಮ ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮಾಗಡಿ ತಾಪಂ ಇಒ ಡಿ.ಜೈಪಾಲ್, ಎಸ್‌ಬಿವೈ ಶಾಖಾ ವ್ಯವಸ್ಥಾಪಕರು, ಬಿಒಬಿ ಶಾಖಾ ವ್ಯವಸ್ಥಾಪಕರು, ಕೆನರಾ ಬ್ಯಾಂಕ್ ಶಾಖ ವ್ಯವಸ್ಥಾಪಕರು, ಮಾಡಬಾಳ್ ಪಿಡಿಒ, ಪಂಚಾಯಿತಿ ಅಧ್ಯಕ್ಷರು, ಎಫ್‌ಎಲ್‌ಸಿಗಳು, ಬಿಸಿಗಳು, ಸಿಎಫ್‌ಎಲ್‌ಗಳು ಹಾಗೂ ಎನ್‌ಆರ್‌ಎಲ್‌ಎಂ ಸಿಬ್ಬಂದಿ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು, ರೈತರು ಭಾಗವಹಿಸಿದ್ದರು.

31ಕೆಆರ್ ಎಂಎನ್ 4.ಜೆಪಿಜಿ

ಕರ್ಲಹಳ್ಳಿಯ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಆರ್ಥಿಕ ಸೇರ್ಪಡೆ ಪರಿಪೂರ್ಣತ ಅಭಿಯಾನ ನಡೆಯಿತು.