ಸಾರಾಂಶ
ಗ್ರಂಥಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಜೀವನ ಚರಿತ್ರೆಯ ಪುಸ್ತಕಗಳನ್ನು ಹೆಚ್ಚು ಓದುವುದರಿಂದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಕೆಆರ್ ನಗರದ ಕನಕ ಗುರು ಪೀಠದ ಶಿವಾನಂದ ಪುರಿ ಸ್ವಾಮೀಜಿ ತಿಳಿಸಿದರು. ಬಾಗೂರಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧಾರ್ಮಿಕ ಸಮಾರಂಭಬಾಗೂರು: ಮನುಕುಲದ ಒಳಿತಿಗೆ ಒಳ್ಳೆಯ ಯೋಜನೆಯ ಸುಜ್ಞಾನ ಬೇಕಾಗಿದೆ. ಇದನ್ನು ತಿಳಿಯಲು ಗ್ರಂಥಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಜೀವನ ಚರಿತ್ರೆಯ ಪುಸ್ತಕಗಳನ್ನು ಹೆಚ್ಚು ಓದುವುದರಿಂದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಕೆಆರ್ ನಗರದ ಕನಕ ಗುರು ಪೀಠದ ಶಿವಾನಂದ ಪುರಿ ಸ್ವಾಮೀಜಿ ತಿಳಿಸಿದರು.
ಹೋಬಳಿಯ ಅಣತಿ ಗ್ರಾಮದ ಕನಕ ಗುರು ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯವರ ನೂತನ ದೇಗುಲ ಲೋಕಾರ್ಪಣೆ ಹಾಗೂ ಶ್ರೀ ಲಕ್ಷ್ಮಿ ದೇವಿಯವರ ಗಂಗಾ ಪೂಜೆ ವಿಮಾನ ಗೋಪುರ ಕಳಸಾರೋಹಣ ಕುಂಭಾಭಿಷೇಕದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ತಾಲೂಕಿನ ಕನಕ ಭವನ ನಿರ್ಮಾಣಕ್ಕೆ 35 ಲಕ್ಷ ರು. ಅನುದಾನ ನೀಡಲಾಗಿದೆ. ಉಳಿದ ಕಾಮಗಾರಿ ಪೂರ್ಣಗೊಳಿಸಲು 15 ಲಕ್ಷ ರು. ಅನುದಾನ ಕೊಡಿಸುತ್ತೇನೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಮ್ಎ. ಗೋಪಾಲಸ್ವಾಮಿ, ಹೊಸದುರ್ಗ ಕನಕ ಗುರು ಪೀಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ, ಕಂಬದಕಲ್ಲು ಮಠದ ಹಿರಿಯಣ್ಣ ಸ್ವಾಮೀಜಿ, ಅಣತಿ ಮಠದ ಶಾಂತಕುಮಾರ್ ಒಡೆಯರ್ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎ.ಇ.ಚಂದ್ರಶೇಖರ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ, ಕಬ್ಬಾಳು ರಮೇಶ್, ನವಿಲೆ ಅಣ್ಣಪ್ಪ, ಶ್ವೇತ ಆನಂದ್, ನಳಿನ ಕೃಷ್ಣೇಗೌಡ, ಅಣತಿ ಆನಂದ್, ಎ.ಡಿ. ಶಿವೇಗೌಡ, ಶಂಕರ್, ವೆಂಕಟೇಶ್, ಮಿಲ್ಟ್ರಿ ಮಂಜುನಾಥ್, ನಾಗೇಶ್, ಶಂಕರ್ ಲಿಂಗೇಗೌಡ, ಹೊಸೂರು ಚಂದ್ರೇಗೌಡ, ಕುಳ್ಳೇಗೌಡ, ಉಲ್ಲೇನಹಳ್ಳಿ ಯತಿ ರಾಜಣ್ಣ, ಧರ್ಮಣ್ಣ, ಮಂಜುನಾಥ್, ನವಿಲೆ ಜಯದೇವಪ್ಪ, ಕೆಂಪೇಗೌಡ, ಎನ್.ಕೆ.ನಾಗಪ್ಪ, ನಿಂಗೇಗೌಡ, ಸಿ. ಡಿ. ರೇವಣ್ಣ, ಕೋಡಿಹಳ್ಳಿ ರವಿ, ಎನ್. ಬಿ.ನಾಗರಾಜ್ ಇದ್ದರು. ಅಣತಿ ಗ್ರಾಮದ ಕನಕ ಗುರುಮಠದ ರೇವಣಸಿದ್ದೇಶ್ವರ ಸ್ವಾಮಿ ದೇಗುಲ ಲೋಕಾರ್ಪಣೆ ಸಮಾರಂಭವನ್ನು ಶಿವಾನಂದ ಪುರಿ ಸ್ವಾಮೀಜಿ, ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು.