ಶರಣರ ಪುಸ್ತಕ ಓದಿ ಉತ್ತಮ ಜೀವನ ನಡೆಸಿ

| Published : Sep 08 2025, 01:00 AM IST

ಸಾರಾಂಶ

ಶರಣರು, ಸಾಹಿತಿಗಳು, ಗಣ್ಯರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಾಯನ ಮಾಡುವ ಮೂಲಕ ಉತ್ತಮ ಜೀವನ ನಡೆಸಬೇಕು ಎಂದು ಮುಡಿಗುಂಡ ವಿರಕ್ತ ಮಠಾಧ್ಯಕ್ಷ ಶ್ರೀಕಂಠ ಸ್ವಾಮಿಜಿ ಹೇಳಿದರು

ಕೊಳ್ಳೇಗಾಲ: ಶರಣರು, ಸಾಹಿತಿಗಳು, ಗಣ್ಯರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಾಯನ ಮಾಡುವ ಮೂಲಕ ಉತ್ತಮ ಜೀವನ ನಡೆಸಬೇಕು ಎಂದು ಮುಡಿಗುಂಡ ವಿರಕ್ತ ಮಠಾಧ್ಯಕ್ಷ ಶ್ರೀಕಂಠ ಸ್ವಾಮಿಜಿ ಹೇಳಿದರು

ಆದರ್ಶ ಪದವಿಪೂರ್ವ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ರಾಜೇಂದ್ರಮಹಾಸ್ವಾಮಿ ಗಳ 110ನೇ ಸಂಸ್ಥಾಪಕರ ದಿನಾಚರಣೆ, ವಚನ ದಿನ ಹಾಗೂ ಲಿಂಗೈಕ್ಯ ಪುಟ್ಟಬುದ್ಧಿ ರವರ ದತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, 12ನೇ ಶತಮಾನದಲ್ಲಿ ಶರಣರ ವಚನಗಳಿಂದ ಕ್ರಾಂತಿಯಾಗಿದೆ. ಶರಣರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು, ವಚನಗಳು ಬದುಕಿನ ದಾರಿದೀಪ, ಸಂಸ್ಕಾರ ಕಲಿಸುವಲ್ಲಿ

ಮಾನವೀಯ ನೆಲೆಗಟ್ಟಿನಡಿ ಸತ್ವಯುತ ಜ್ಞಾನ ದೀವಿಯಾಗಿವೆ ಎಂದರು.

ಅಪರ ಸಾರಿಗೆ ಇಲಾಖೆ ಆಯುಕ್ತೆ ಓಂಕಾರೇಶ್ವರಿ ಮಾತನಾಡಿ, ವಿಧ್ಯಾರ್ಥಿಗಳು ಸಮಾಜ ಮುಖಿ ಸೇವೆಗೂ ಅಣಿಯಾಗಿ, ಅಧ್ಯಯನದ ಮೂಲಕ ಸಾಧಕರಾಗಿ, ಮೌಲ್ಯಯುತ ಜೀವನ ನಿಮ್ಮದಾಗಲಿ ಎಂದರು.

ಪ್ರಾಂಶುಪಾಲ ನಾಗರಾಜು, ಸಾಹಿತ್ಯ ಪರಿಷತ್ ಅದ್ಯಕ್ಷ ನಾಗರಾಜು, ನಾಗೇಂದ್ರಮೂರ್ತಿ ಇನ್ನಿತರಿದ್ದರು.