ಸಂವಿಧಾನ ಪೀಠಿಕೆ ಓದಿ ಮಾಂಗಲ್ಯ ಧಾರಣೆ

| Published : Apr 30 2024, 02:00 AM IST

ಸಾರಾಂಶ

ತಾಲೂಕಿನ ಗುಡದಳ್ಳಿ ಗ್ರಾಮದಲ್ಲಿ ಸಂವಿಧಾನ ಪೀಠಿಕೆ ಓದುವುದರೊಂದಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ವಿಶಿಷ್ಟವಾಗಿ ಸಾಮೂಹಿಕ ವಿವಾಹ ನಡೆಸಲಾಯಿತು.

- ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗುಡದಳ್ಳಿ ಗ್ರಾಮ । ಸಾಮೂಹಿಕ ವಿವಾಹಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಗುಡದಳ್ಳಿ ಗ್ರಾಮದಲ್ಲಿ ಸಂವಿಧಾನ ಪೀಠಿಕೆ ಓದುವುದರೊಂದಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ವಿಶಿಷ್ಟವಾಗಿ ಸಾಮೂಹಿಕ ವಿವಾಹ ನಡೆಸಲಾಯಿತು.

ಡಾ. ಬಾಬಾಸಾಹೇಬ್ ಅಂಬೇಡ್ಕರ್ 134ನೇ ಜಯಂತಿ ಅಂಗವಾಗಿ ಸರಳವಾಗಿ ಸುಮಾರು 41 ಜೋಡಿಗಳ ಸಾಮೂಹಿಕ ವಿವಾಹ ಯಶಸ್ವಿಯಾಗಿ ನೆರವೇರಿತು.

ಸಾನಿಧ್ಯ ವಹಿಸಿದ್ದ ಹೆಬ್ಬಾಳದ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹಂಪಿಯ ಮಾತಂಗ ಪರ್ವತದ ಪೂರ್ಣನಂದ ಭಾರತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕೊಪ್ಪಳ ಗ್ರಾಮೀಣ ವೃತ್ತದ ನಿಕಟಪೂರ್ವ ಸಿಪಿಐ ವಿಶ್ವನಾಥ ಹಿರೇಗೌಡ್ರರ ಮಾತನಾಡಿ, ಇಂತಹ ಸಾಮೂಹಿಕ ಮದುವೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ್, ಸಮಾಜದ ಯುವ ಮುಖಂಡ ಗೂಳಪ್ಪ ಹಲಗೇರಿ ಮಾತನಾಡಿದರು.

ಉದ್ಯಮಿ ವೆಂಕಟೇಶ್ ಬಾರಕೇರ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ನೆರವು ನೀಡಿದ್ದನ್ನು ಸ್ಮರಿಸಲಾಯಿತು.

ಸಂವಿಧಾನ ಪೀಠಿಕೆಯನ್ನು ವಕೀಲ ಡಿ.ಎಂ. ಪೂಜಾರ ಬೋಧಿಸಿದರು. ಜಿ.ಎಂ. ಗೊರವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಲ್ಲಿಕಾರ್ಜುನ ಪೂಜಾರ ನಿರೂಪಿಸಿ, ನೀಲಪ್ಪ ದೊಡ್ಡಮನಿ ವಂದಿಸಿದರು.

ಕಲಾತಂಡದ ಸುಂಕಪ್ಪ ಹಾಗೂ ಫಕೀರಪ್ಪ ಮಾಸ್ತರ ಹಾಗೂ ಶರಣಪ್ಪ ಓಜನಹಳ್ಳಿ ಹಾಗೂ ಸಂಗಡಿಗರಿಂದ ಕ್ರಾಂತಿಗೀತೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಹಿರಿಯರಾದ ಗವಿ ಕರಡಿ, ಮಂಜುನಾಥ ಹಂದ್ರಾಳ, ಶಂಭುಲಿಂಗನಗೌಡ ಹಲಗೇರಿ, ಈರಪ್ಪ ಕುಡಗುಂಟಿ, ನಾಗರಾಜ್ ತಲ್ಲೂರ್, ಗಿರೀಶ್ ಹಿರೇಮಠ, ಯಮನಪ್ಪ ಕುಕನೂರು, ಗುಡದಪ್ಪ ದೊಡ್ಡಮನಿ, ಸಂಜಿವಪ್ಪ ಮೇಟಿ, ರಮೇಶ ಹೊಳೆಯಚೆ, ಅಮರಪ್ಪ ಯದ್ದೋನಿ, ಶಂಬಣ್ಣ ಸೇಟ್ರ, ಧರ್ಮಣ್ಣ ಬೆಣ್ಣೆ, ರಮೇಶ ಮುದ್ಲಾಪುರ, ಶಿವಬಸಪ್ಪ ಹಂಚಿನಾಳ, ನಿಂಗಜ್ಜ ಶಹಾಪುರ, ನಿಂಗಪ್ಪ ಮೈನಳ್ಳಿ, ಜುಂಜಪ್ಪ ಮೆಳ್ಳಿಕೇರಿ, ಯಲ್ಲಪ್ಪ ಮುದ್ಲಾಪುರ, ಚನ್ನಬಸಪ್ಪ ಹೊಳೆಯಪ್ಪನವರ, ಲಕ್ಷಣ ಬೇವಿನಗಿಡದ, ಯಮನೂರಪ್ಪ ಗೊರವರ, ಗಾಳೆಪ್ಪ ದೊಡ್ಡಮನಿ, ಮರಿಯಪ್ಪ ಹರಿಜನ, ನಿಂಗಪ್ಪ ಗೊರವರ ಇತರರಿದ್ದರು.