ಆಧುನಿಕ ತಂತ್ರಜ್ಞಾನವಾದ ಚಾಟ್ ಜಿಪಿಟಿಗಳಂತಹ ಮಾಧ್ಯಮಗಳು ನಮ್ಮನ್ನು ಅಂತರ್ಜಾಲ ದಾಸರನ್ನಾಗಿಸುತ್ತವೆಯೆಂದು ಖ್ಯಾತ ರಂಗಭೂಮಿ ಕಲಾವಿದ, ಬರಹಗಾರ ಶಶಿರಾಜ್ ಕಾವೂರು ಹೇಳಿದರು.
ಮೂಲ್ಕಿ : ಆಧುನಿಕ ತಂತ್ರಜ್ಞಾನವಾದ ಚಾಟ್ ಜಿಪಿಟಿಗಳಂತಹ ಮಾಧ್ಯಮಗಳು ನಮ್ಮನ್ನು ಅಂತರ್ಜಾಲ ದಾಸರನ್ನಾಗಿಸುತ್ತವೆಯೆಂದು ಖ್ಯಾತ ರಂಗಭೂಮಿ ಕಲಾವಿದ, ಬರಹಗಾರ ಶಶಿರಾಜ್ ಕಾವೂರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಮತ್ತು ಮೂಲ್ಕಿ ಕಾರ್ನಾಡಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಕಾರ್ನಾಡು ಸರ್ಕಾರಿ ಕಾಲೇಜಿನಲ್ಲಿ ಜರಗಿದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಚೆನ್ನಾಗಿ ಬರೆಯಬೇಕಾ. ಓದಬೇಕು, ಓದಿನಿಂದ ನಮ್ಮ ಸೃಷ್ಟಿಶೀಲ ಮನಸ್ಸು ಅರಳುತ್ತದೆ. ಹುಡುಕಾಟ ಸಾಧ್ಯವಾಗುವುದು ಓದಿನಿಂದ. ನಿರಂತರ ಓದುವಿಕೆಯೇ ನನ್ನನ್ನು ಈ ಮಟ್ಟಕ್ಕೆ ತಂದಿದೆ. ಕಷ್ಟ ಪಡಲು ಸಂಕಟ ಪಡಲು ಸಾವಿರಾರು ವಿಷಯಗಳಿವೆ. ಸಂತಸ ಪಡಲು ಚಿಕ್ಕ ಚಿಕ್ಕ ಸಂಗತಿಗಳನ್ನು ಕಾಣುವ ಕಣ್ಣು, ಹೃದಯ ಬೇಕು. ಕವನ ಬರೆಯುವುದು ನಮ್ಮ ಖುಷಿಗೆ, ನಮ್ಮ ಆತ್ಮತೃಪ್ತಿಗೆ, ನನ್ನ ನಾಟಕ, ಸಿನಿಮಾ ಬರಹಗಳಿಗೆ ಪ್ರೇರಣೆ ನನ್ನ ತಂದೆ ರತ್ನಾಕರ ರಾವ್. ಅವರು ನೂರೈವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ನನ್ನ ತಂದೆ ಬರೆದ ಅಯ್ಯಪ್ಪ ಹಾಗೂ ನಾನು ಬರೆದ ಶಿವಾಜಿ ನಾಟಕಗಳನ್ನು ನಿರ್ದೇಶಿಸಿದ್ದು ,ಅನೇಕ ಧಾರಾವಾಹಿಗಳಿಗೆ, ಹದಿನೈದಕ್ಕೂ ಹೆಚ್ಚು ತುಳು ಸಿನಿಮಾಗಳಿಗೆ ಗೀತೆ ರಚನೆ ಮಾಡಿದ್ದ ನಾನು ವೃಷಭ್ ಶೆಟ್ಟಿಯವರ ಕಾಂತಾರ ಸಿನಿಮಾದಿಂದಾಗಿ ಹೆಸರು ಮಾಡಿದೆ. ಅಂದರೆ ಸಾಹಿತ್ಯ ರಚನೆ ಮಾತ್ರವಲ್ಲ ಎಲ್ಲ ಪ್ರಯತ್ನ ಸಾಧನೆಗಳಿಗೂ ಒಂದು ಸಮಯ ಅಂತ ಬಂದಾಗ ಅದು ಕ್ಲಿಕ್ ಆಗುತ್ತದೆ. ಒತ್ತಡದಲ್ಲಿರುವ ಜನರು ಒಂದಿಷ್ಟು ರಿಲಾಕ್ಸ್‌ಗಾಗಿ ಹಾಸ್ಯ ನಾಟಕಗಳನ್ನು ನೋಡಲು ಹೆಚ್ಚು ಇಷ್ಟ ಪಡಬಹುದು. ಆದರೆ ಗಂಭೀರ, ಚಿಂತನೆಗೆ ಹಚ್ಚುವ ನಾಟಕಗಳನ್ನೂ ನೋಡುವ ವರ್ಗವೂ ದೊಡ್ಡದಿದೆ ಎಂದ ಅವರು ತನ್ನದೇ ನಿದೇರ್ಶನದಲ್ಲಿ ವಾದಿರಾಜ ವಾಲಗ ಮಂಡಳಿ ಕನ್ನಡ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದರು. ಮೂಲ್ಕಿ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವರಾಹ ರೂಪಂ ಹಾಡಿದ ಅಸ್ಮಿತ್ ಎ.ಜೆ, ಜೀಕನ್ನಡ ವಾಹಿನಿಯ ಸರಿಗಮಪ ಲಿಟ್ಸ್ ಚಾಂಪ್ ವಿಜೇತ ಅಸ್ಮಿತ್ ಎ.ಜೆ. ಶಶಿರಾಜ್ ಕಾವೂರು ರಚಿಸಿದ ಕಾಂತಾರ ಸಿನಿಮಾದ ವರಾಹ ರೂಪಂ, ಪ್ರೇಮನಾಥೆ ಪಾಸು ಆತೆ ಮೊದಲಾದ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳನ್ನು, ಸಾಹಿತ್ಯಾಸಕ್ತರನ್ನು ರಂಜಿಸಿದರು.ಈ ಸಂದರ್ಭ ಶಶಿರಾಜ್ ಹಾಗೂ ಅಸ್ಮಿತ್ ಎ.ಜೆ. ಅವರನ್ನು ಸಾಹಿತ್ಯ ಪರಿಷತ್ ಹಾಗೂ ಮೂಲ್ಕಿ ಸರ್ಕಾರಿ ಕಾಲೇಜು ವತಿಯಿಂದ ಗೌರವಿಸಲಾಯಿತು.ಮೂಲ್ಕಿ ತಾಲೂಕು ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿ ಹೆರಿಕ್ ಪಾಯಸ್, ಪ್ರಕಾಶ್ ಆಚಾರ್, ಸ್ವರಾಜ್ ಶೆಟ್ಟಿ, ದೇವದಾಸ ಮಲ್ಯ, ನಿಶಾಂತ್ ಕಿಲೆಂಜೂರು, ವಿ.ಕೆ.ಯಾದವ್, ರಘುರಾಮ್ ರಾವ್, ಗಿಲ್ಬರ್ಟ್ ಡಿಸೋಜ,ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷೆ ಭಾನುಮತಿ ಶೆಟ್ಟಿ,ಕಾಲೇಜಿನ ಪ್ರಾಚಾರ್ಯ ಡಾ. ವಾಸುದೇವ ಬೆಳ್ಳೆ, ಕಾಲೇಜು ಸಮಿತಿಯ ಉಪಾಧ್ಯಕ್ಷ ಶೋಕ್ ಕುಮಾರ್ ಶೆಟ್ಟಿ ಮತ್ತಿತರರಿದ್ದರು.