ವಿದ್ಯಾರ್ಥಿಗಳು ಉತ್ತಮ ಪುಸ್ತಕ ಓದುವ ಮೂಲಕ ಜ್ಞಾನ ವೃದ್ಧಿಸಿಕೊಂಡು ವಿದ್ಯಾವಂತರಾಗಬೇಕು
ಕೊಪ್ಪಳ: ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿ ಆಗುತ್ತದೆ ಎಂದು ನಿವೃತ್ತ ಶಿಕ್ಷಕ ಅಶೋಕ್ ಆರ್.ಬಗಾಡೆ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಗೊಂಡಬಾಳ ಗ್ರಾಮದ ಗ್ರಂಥಾಲಯದಲ್ಲಿ ಎಸ್.ಆರ್.ರಂಗನಾಥನ್ ಜನ್ಮದಿನಾಚರಣೆ ಹಾಗೂ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮ ಪುಸ್ತಕ ಓದುವ ಮೂಲಕ ಜ್ಞಾನ ವೃದ್ಧಿಸಿಕೊಂಡು ವಿದ್ಯಾವಂತರಾಗಬೇಕು. ಗ್ರಂಥಾಲಯದ ಸದುಪಯೋಗ ಪಡೆದುಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಪುಸ್ತಕ ಓದುವ ಹವ್ಯಾಸ ಬೆಳೆಸುವ ಹವ್ಯಾಸ ಅತ್ಯವಶ್ಯಕ. ಗ್ರಂಥಾಲಯದ ಮಹತ್ವ ಸಾರುವ ಕೆಲಸ ಓದಿನಿಂದ ಮಾತ್ರ ಆಗುತ್ತದೆ ಎಂದರು.ಗ್ರಂಥಪಾಲಕರಾದ ಸಾವಿತ್ರಮ್ಮ ಎ.ಕದರಗಾರ್, ಗ್ರಂಥಪ್ರೇರಕರಾದ ಶಿಲ್ಪಾ ಆರ್.ಬನ್ನಿಮಠ, ಬಸವರಾಜ ಎ. ಹಳ್ಳಿಕೆರಿ, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳಿದ್ದರು.