ಸಾರಾಂಶ
-ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅಭಿಮತ । ಕರ್ನಾಟಕ ನಾಮಕರಣ 50ರ ಸಂಭ್ರಮ । ಹಿರಿಯ ಜೀವಗಳ ಬದುಕು-ಸಾಧನೆ ವಿಚಾರ ಸಂಕಿರಣ ।
ಕನ್ನಡಪ್ರಭ ವಾರ್ತೆ ಹೊಸದುರ್ಗಮನುಷ್ಯನಿಗೆ ಓದು ಮುಖ್ಯವಲ್ಲ ಮಾತು ಮತ್ತು ಕೃತಿ ಮುಖ್ಯವಾಗಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ನಡೆದ ಕರ್ನಾಟಕ ನಾಮಕರಣ 50ರ ಸಂಭ್ರಮ ''''ಧರೆಗೆ ದೊಡ್ಡವರು'''' ನಾಡು ನುಡಿಗೆ ಕೊಡುಗೆ ನೀಡಿದ ಹಿರಿಯ ಜೀವಗಳ ಬದುಕು-ಸಾಧನೆ ಕುರಿತು ವಿಚಾರ ಸಂಕಿರಣ ಹಾಗೂ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಬೇರೆಯವರಿಗೆ ಉಪದೇಶ ಮಾಡುವುದು ತಪ್ಪಲ್ಲ. ಉಪದೇಶ ಮಾಡುವವನಿಗೆ ಯೋಗ್ಯತೆ, ಅರ್ಹತೆ ಇದೆಯಾ ಎನ್ನುವುದನ್ನು ಪ್ರಶ್ನೆ ಹಾಕಿಕೊಳ್ಳಬೇಕು ಎಂದು ಅವರು ಹೇಳಿದರು.ಜಾತಿ ಡೊಂಬರರ ಸಂಖ್ಯೆ ಮಠ, ಮನೆ ಸಮಾಜ, ದೇಶ ಹೀಗೆ ಎಲ್ಲ ವರ್ಗದಲ್ಲೂ ಇದೆ. ಇದನ್ನು ಸರಿ ಮಾಡಲು ಮೊದಲು ನಮ್ಮಿಂದಲೇ ಪ್ರಾರಂಭ ಆಗಬೇಕು ಲೋಕ ಸರಿಯಾಗಲಿ ಎನ್ನುವುದು ಮುಖ್ಯವಲ್ಲ. ಮೊದಲು ನಾನು ಸರಿಯಾಗಬೇಕು. ಯೋಗ್ಯತೆ, ಅರ್ಹತೆ ನಿಮಗಿದ್ದರೆ ಇನ್ನೊಬ್ಬರ ದೋಷ ತಿದ್ದಲಿಕ್ಕೆ ನಿಮಗೆ ಸ್ವಾತಂತ್ರ್ಯ ಸಿಕ್ಕ ಹಾಗೆ. ನಾಡಿನ ಇಂದಿನ ಸ್ಥಿತಿ ನೋಡಿದರೆ ಉಪದೇಶ ಮಾಡುವಂಥವರಿಗೇನೂ ಕೊರತೆಯಿಲ್ಲ. ಆದರೆ, ಉಪದೇಶಕ್ಕೆ ತಕ್ಕಂತೆ ತಮ್ಮ ಬದುಕನ್ನು ಕಟ್ಟಿಕೊಳ್ಳುವವರ ಕೊರತೆ ಎದ್ದು ಕಾಣುತ್ತದೆ. ಹಾಗಾಗಿಯೇ, ನಾಡಿನಲ್ಲಿ ಹಗರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಆ ಸಾಲಿಗೆ ವಿದ್ಯಾರ್ಥಿಗಳು ಸೇರಬಾರದು ಎಂದರು.
ವಿದ್ಯಾರ್ಥಿಗಳ ಬಗ್ಗೆ ಪೋಷಕರು ಅಧ್ಯಾಪಕರು, ಸಮಾಜದ ತುಂಬಾ ಕನಸು ಕಟ್ಟಿಕೊಂಡಿದ್ದಾರೆ. ಆ ಕನಸನ್ನು ನನಸು ಮಾಡುವಂಥ ಸತ್ಸಂಕಲ್ಪ ಮಾಡಿಕೊಳ್ಳಬೇಕು. ಮುಂದಿನ ನಾಡಿನ ನಾಗರಿಕರಾಬೇಕಾದರೆ ಯಾವ ನೆಲದ ಮೇಲೆ ನಿಂತಿದ್ದೀರಿ, ಯಾವ ರೀತಿ ಆಲೋಚನೆ ಮಾಡುತ್ತಿದ್ದೀರಿ, ಯಾವ ರೀತಿ ಬದುಕುತ್ತಿದ್ದೀರಿ ಎನ್ನುವುದು ಮುಖ್ಯ. ಬಾಲ್ಯ ಒಳ್ಳೆಯ ಸಂಸ್ಕಾರ ಕಲಿಸಿದ್ದರೆ ಮುಂದೆ ಆ ಸಂಸ್ಕಾರ ಉಳಿಸಿಕೊಳ್ಳಲಿಕ್ಕೆ ಸಾಧ್ಯ. ಚಿಕ್ಕವಯಸ್ಸಿನಲ್ಲಿ ಎಂತಹ ಸಂಸ್ಕಾರ ಸಿಗುತ್ತೋ ಅದಕ್ಕನುಗುಣವಾಗಿ ಭವಿಷ್ಯ ನಿರ್ಮಾಣವಾಗುವುದು.ಈ ನೆಲೆಯಲ್ಲಿ ನಮಗೆ ಒಳ್ಳೆಯ ಸಂಸ್ಕಾರ ಸಿಕ್ಕಿತೆಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಪಡುತ್ತೇವೆ. ನಮಗೆ ಆ ಸಂಸ್ಕಾರವನ್ನು ಜನ್ಮಕೊಟ್ಟ ತಂದೆ ತಾಯಿಗಳು ಹಾಗೂ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ನೀಡಿದ್ದಾರೆ. ನಮ್ಮ ಪೂರ್ವಶ್ರಮದ ಮನೆತನ ತುಂಬಾ ಕಡುಬಡತನದಿಂದ ಬಂದಂಥದ್ದು. ಆ ಬಡತನವೇ ನಮ್ಮ ಬದುಕಿಗೆ ಭವ್ಯತೆ ತಂದುಕೊಟ್ಟಿದೆ. ಬಡತನ ವ್ಯಕ್ತಿಯ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲಿಕ್ಕೆ ಶಕ್ತಿಯನ್ನು ತಂದು ಕೊಡುತ್ತದೆ. ಇತ್ತೀಚಿನ ಮಕ್ಕಳಿಗೆ ಬಡತನದ ಕಲ್ಪನೆಯೇ ಇಲ್ಲ. ಮುಂದೆ ಪೋಷಕರಿಗೇ ವಂಚಿತರಾಗುವರು ಎಂದರು.
ಕವಿ ಚಂದ್ರಶೇಖರ ತಾಳ್ಯ, ಸಾಹಿತಿ ಲೋಕೇಶ ಅಗಸನಕಟ್ಟೆ, ವಿಶ್ವೇಶ್ವರಿ ಬಸವಲಿಂಗಯ್ಯ ಮತ್ತಿತರರಿದ್ದರು.-------
ಪೋಟೋ: ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ನಡೆದ ಕರ್ನಾಟಕ ನಾಮಕರಣ 50 ರ ಸಂಭ್ರಮ ''''ಧರೆಗೆ ದೊಡ್ಡವರು'''' ನಾಡು ನುಡಿಗೆ ಕೊಡುಗೆ ನೀಡಿದ ಹಿರಿಯ ಜೀವಗಳ ಬದುಕು-ಸಾಧನೆ ಕುರಿತು ವಿಚಾರ ಸಂಕಿರಣ ಹಾಗೂ ಸನ್ಮಾನ ಸಮಾರಂಭದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.15ಎಚ್‌ಎಸ್‌ಡಿ2:
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))